‘ಮದುವೆ ಆದ್ಮೇಲೆ ಫಸ್ಟ್ ನೈಟ್‌ನಲ್ಲಿ ಏನು ಮಾಡ್ತೀರ?’
‘ಲವ್ ಯೂ ರಚ್ಚು’ ಚಿತ್ರದ ‘ಮುದ್ದೂ ನೀನು’ ಹಾಡಿನ ಬಿಡುಗಡೆಯ ಬಳಿಕ ಮಾಧ್ಯಮದವರಿಗೆ ಹೀಗೊಂದು ಪ್ರಶ್ನೆ ಎಸೆದರು ರಚಿತಾ ರಾಮ್.
ವರ್ಷಗಳ ಕೆಳಗೆ ತಾನು ಇನ್ನು ಮೇಲೆ ಬೋಲ್ಡ್ ದೃಶ್ಯಗಳಲ್ಲಿ ನಟಿಸಲ್ಲ ಎಂದಿದ್ದ ರಚಿತಾ ‘ಮುದ್ದೂ ನೀನು’ ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ರಚಿತಾ ಫಸ್ಟ್‌ನೈಟ್ ಬಗ್ಗೆ ಪ್ರಶ್ನೆ ಎತ್ತಿದರು. ಆಮೇಲೆ ಉತ್ತರವನ್ನೂ ಅವರೇ ನೀಡಿದರು. ‘ಫಸ್ಟ್‌ನೈಟ್‌ನಲ್ಲಿ ರೊಮ್ಯಾನ್ಸ್ ಮಾಡ್ತಾರೆ, ಫಸ್ಟ್‌ನೈಟ್ ಕಾಂಸೆಪ್ಟ್‌ನಲ್ಲಿರುವ ಈ ಹಾಡಿನಲ್ಲೂ ನಾನು ಲೈಟಾಗಿ ರೊಮ್ಯಾನ್ಸ್ ಮಾಡೋ ದೃಶ್ಯದಲ್ಲಿ ಕಾಣಿಸಿಕೊಂಡಿದ್ದೇನೆ. ಹಿಂದೆ ಬೋಲ್ಡ್ ಆಗಿ ನಟಿಸಲ್ಲ ಅಂತ ಹೇಳಿ ಇಲ್ಲಿ ಹೀಗೆ ಕಾಣಿಸಿಕೊಂಡಿರೋದಕ್ಕೆ ಒಂದು ಕಾರಣ ಇದೆ. ಅದೇನು ಅಂತ ಸಿನಿಮಾದಲ್ಲೇ ರಿವೀಲ್ ಆಗಿತ್ತೆ’ ಅಂದರು. ಇದಕ್ಕೂ ಮುನ್ನ ಹಾಡಿನ ಬಿಡುಗಡೆ ವೇಳೆ ಮಾತನಾಡಿದ ಅವರು, ‘ನಮಗಿರೋದು ಒಂದೇ ಜೀವನ, ಖುಷಿಯಾಗಿರೋಣ. ಬೇರೆಯವರ ಬಗ್ಗೆ ಇಷ್ಟಆದ್ರೆ ಮಾತ್ರ ಮಾತಾಡೋಣ, ಡಬಲ್ ಸ್ಟಾಂಡ್ ಬೇಡ. ಅಪ್ಪು ನಮಗೆಲ್ಲ ಸೈಲೆಂಟ್ ಆಗಿ ಮೆಸೇಜ್ ಕೊಟ್ಟು ಹೋಗಿದ್ದಾರೆ, ಈಗಲಾದ್ರೂ ಎಚ್ಚೆತ್ತುಕೊಳ್ಳೋಣ’ ಎಂದರು.
ಸಿದ್‌್ದ ಶ್ರೀರಾಮ್ ದನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ನಾಯಕ ಅಜಯ್ ರಾವ್ ಕೊರಿಯೋಗ್ರಫಿ ಮಾಡಿದ್ದಾರೆ. ‘ಇದು ನನ್ನ ಪ್ರೊಡಕ್ಷನ್‌ನಲ್ಲಿ ಬರಬೇಕಿದ್ದ ಸಿನಿಮಾ. ಆದರೂ ಈ ಸಿನಿಮಾಗಾಗಿ ಸಾಕಷ್ಟುಕೆಲಸ ಮಾಡಿದ್ದೇನೆ. ಚಿತ್ರದ ಮೇಕಿಂಗ್ ವೇಳೆ ಘರ್ಷಣೆಗಳಾಗಿವೆ. ಒಂದು ಡೈಮಂಡ್ ಹೊರಬರಬೇಕು ಅಂದರೆ ಅನೇಕ ಕಠಿಣತೆಗಳನ್ನು ಹಾದು ಬರುವುದು ಅನಿವಾರ್ಯ. ನಮ್ಮ ಈ ಸಿನಿಮಾ ರೆಕಾರ್ಡ್ ಕ್ರಿಯೇಟ್ ಮಾಡುವ ವಿಶ್ವಾಸ ಇದೆ. ಎಲ್ಲ ಸನ್ನಿವೇಶಗಳನ್ನೂ ಸಮಚಿತ್ತದಿಂದ ನಿಭಾಯಿಸುವ ಗಂಡನ ಪಾತ್ರವನ್ನಿಲ್ಲಿ ನಿಭಾಯಿಸಿದ್ದೇನೆ’ ಎಂದರು.
Hot ಲುಕ್‌ಗೆ ಹೆಸರುವಾಸಿ ಆಗ್ತಿದ್ದಾರಾ ರಚಿತಾ ರಾಮ್!undefined
ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಈ ಚಿತ್ರದ ಶೂಟಿಂಗ್ ವೇಳೆ ವಿದ್ಯುತ್ ಆಕಸ್ಮಿಕದಲ್ಲಿ ಫೈಟರ್ ತೀರಿಕೊಂಡ ಬಳಿಕದ ತಾವು ಅನುಭವಿಸಿದ ನೋವನ್ನು ಹೊರಹಾಕಿದರು. ‘ಇಂಡಸ್ಟ್ರಿಗೆ ಬಂದು 21 ವರ್ಷಗಳಾದವು. ಆ ಒಂದು ಘಟನೆಯಿಂದ ನನ್ನ ಈ 21 ವರ್ಷದ ಸಾಧನೆಯನ್ನು ಅಳೆಯಬಾರದು ಅಂದುಕೊಂಡೆ. ಆ ಕಾರಣಕ್ಕೆ ಸಿನಿಮಾವೇ ಬೇಡ ಅಂತ ಕೂತವನು ನಿರ್ಧಾರ ಬದಲಿಸಿದೆ. ಸದ್ಯದಲ್ಲೇ ಚಿತ್ರ ರಿಲೀಸ್ ಮಾಡುವ ಸಾಧ್ಯತೆ ಇದೆ ಎಂದರು.
ನಿರ್ದೇಶಕ ಶಂಕರ್, ಹಿರಿಯ ನಿರ್ಮಾಪಕ ಕೆ ಮಂಜು, ಆನಂದ್ ಆಡಿಯೋದ ಶ್ಯಾಮ್ ಹಾಗೂ ಚಿತ್ರತಂಡದವರು ಹಾಜರಿದ್ದರು.
'ಲವ್ ಯು ರಚ್ಚು ರಾಮನಗರದಲ್ಲಿ ಚಿತ್ರೀಕರಣದ ವೇಳೆ ಫೈಟರ್ ವಿವೇಕ್‌ಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಈ ಪ್ರಕರಣದ ಸಮಯದಲ್ಲಿ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ, ಸೆಲ್ಫಿ ಹಂಚಿಕೊಳ್ಳುತ್ತಿದ್ದಾರೆ ಆದರೆ ಘಟನೆ ಬಗ್ಗೆ ಮಾತನಾಡಿಲ್ಲ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೀಗ ರಚಿತಾ ಸ್ಪಷ್ಟನೆ ನೀಡಿದ್ದಾರೆ.
ಅಜಯ್ ರಾವ್ ಜೊತೆ Bedroomನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ರಚಿತಾ ರಾಮ್!'ನೀವೆಲ್ಲರೂ ಕ್ಷೇಮವಾಗಿದ್ದೀರಿ ಅಂತ ನಂಬಿದ್ದೀನಿ. ದಯವಿಟ್ಟು ಎಲ್ಲರೂ ಹುಷಾರಾಗಿರಿ ಅಂತ ನಿಮ್ಮೆಲ್ಲರಲ್ಲಿ ನಾನು ರಿಕ್ವೆಸ್ಟ್ ಮಾಡುತ್ತೇನೆ. ಲವ್ ಯು ರಚ್ಚು ಸಿನಿಮಾ ಸೆಟ್‌ನಲ್ಲಿ ಒಂದು ನಡೆಯವಾರದ ಘಟನೆ ನಡೆದಾಗಿನಿಂದ, ಆ ಅಘಾತ ನನ್ನನ್ನು ಸೈಲೆಂಟ್ ಆಗುವಂತೆ ಮಾಡಿತ್ತು. ಆದರೆ ನನ್ನ ಮೌನ ಕೆಲವರಿಗೆ ತಪ್ಪಾಗಿ ಅರ್ಥವಾಗಿದೆ, ತಪ್ಪಾಗಿ ಬಳಕೆ ಆಗುತ್ತಿದೆ. ಇದು ನನಗೆ ನಿಜಕ್ಕೂ ನೋವು ಕೊಟ್ಟಿದೆ' ಎಂದು ರಚಿತಾ ರಾಮ್ ಬರೆದುಕೊಂಡಿದ್ದಾರೆ.
ರಚಿತಾ ರಾಮ್‌ಗೆ ಸಖತ್ ಸೆಲ್ಫೀ ಕ್ರೇಜ್ ಇದೆ ಇಲ್ನೋಡಿ....ನೀವು ಏನಂತೀರಾ?'ಆ ದುರ್ಘಟನೆ ನಡೆದಾಗ ನಾನು ಸೆಟ್‌ನಲ್ಲಿ ಇರಲಿಲ್ಲ. ಆಗಸ್ಟ್ 2ನೇ ತಾರೀಖಿನಿಂದ ನಾನು ಶಬರಿ ಸಿನಿಮಾ ಶೂಟಿಂಗ್‌ಗೋಸ್ಕರ ಮೈಸೂರಿನಲ್ಲಿದ್ದೆ. ಆ ಘಟನೆ ನಡೆದಾಗ ನಾನು ಆ ಜಾಗದಲ್ಲಿ ಇರ್ಲಿಲ್ಲ. ಸತ್ಯವನ್ನು ಒಂದೇ ಒಂದು ಸಲ ಪುನರ್ ಪರಿಶೀಲಿಸಿದ್ದರೆ ನನ್ನ ಬಗ್ಗೆ ಕಟ್ಟ ಕಮೆಂಟ್‌ಗಳು ಬರೆಯೋ, ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡೋ ಪ್ರಮೇಯ ಬದಗಿ ಬರ್ತಿರಲಿಲ್ಲ ಅನಿಸುತ್ತದೆ. ಆ ಜಾಗದಲ್ಲಿ ನಾನು ಇರಲಿ, ಇಲ್ಲದಿರಲಿ ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ದುರ್ಘಟನೆ ಬಲಿಯಾಗಿದ್ದಾರೆ ಅನ್ನೋ ನೋವು ನನ್ನನ್ನೂ ಕಾಡುತ್ತಿದೆ. ಆ ಕುಟುಂಬಕ್ಕಾಗಿರುವ ನಷ್ಟಕ್ಕೆ ನನ್ನ ವಿಷಾದವಿದೆ. ಈ ದುಃಖವನ್ನು ಭರಿಸೋ ಶಕ್ತಿ ಭಗವಂತ ಆ ಕುಟುಂಬಕ್ಕೆ ಕೊಡಲಿ ಅಂತ ನಾನು ಬೇಡಿಕೊಳ್ಳುತ್ತೇನೆ. ನನ್ನನ್ನು ಬೆಳಸಿರುವ ಜನ ನನ್ನ ಮಾತುಗಳನ್ನು ನಂಬುತ್ತಾರೆ ಅಂತ ನಂಬಿದ್ದೀನಿ. ಆರೋಪಗಳು ಎನೇ ಇದ್ರೂ ತಪ್ಪು ಸರಿಗಳ ಲೆಕ್ಕ ಆ ಭಗವಂತನ ಬಳಿ ಇರುತ್ತದೆ ಎಂದೂ ನಂಬಿದ್ದೀನಿ' ಎಂದು ರಚಿತಾ ರಾಮ್ ಹೇಳಿದ್ದಾರೆ.