ರಮೇಶ್ ಅರವಿಂದ್ ನಟಿಸಿ, ನಿರ್ದೇಶನ ಮಾಡಿರುವ '100' ಚಿತ್ರವನ್ನು ವೀಕ್ಷಿಸಲು ಆಗಮಿಸುವಂತೆ ಚಿತ್ರತಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆಹ್ವಾನ ನೀಡಿದೆ. ಈ ಬಗ್ಗೆ ಸಚಿವರು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು, (ನ.11): ರಮೇಶ್ ಅರವಿಂದ್ (Ramesh Aravind) ನಟಿಸಿ, ನಿರ್ದೇಶನ ಮಾಡಿರುವ '100' ಚಿತ್ರವನ್ನು ವೀಕ್ಷಿಸಲು ಆಗಮಿಸುವಂತೆ ಚಿತ್ರತಂಡ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರಿಗೆ ಆಹ್ವಾನ ನೀಡಿದೆ. ಇಂದು ಗೃಹ ಸಚಿವರ ನಿವಾಸದಲ್ಲಿ ಭೇಟಿ ಮಾಡಿದ ನಟ ರಮೇಶ್ ಅರವಿಂದ್ ಚಿತ್ರತಂಡ, ನವೆಂಬರ್ 19 ರಂದು ಬಿಡುಗಡೆಯಾಗಲಿರುವ ಚಿತ್ರವನ್ನು ವೀಕ್ಷಿಸಲು ಆಗಮಿಸಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸಚಿವರು, ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಅವರು ಇಂದು ನಮ್ಮ ನಿವಾಸಕ್ಕೆ ಭೇಟಿ ನೀಡಿ, ಬಿಡುಗಡೆಗೆ ಸಿದ್ಧವಿರುವ ತಮ್ಮ '100' ಸಿನೆಮಾ ಕುರಿತು ವಿವರಣೆ ನೀಡಿದರು. ಸೈಬರ್ ಕ್ರೈಂ ಆಧಾರಿತ ಕಥಾ ಹಂದರವುಳ್ಳ ಈ ಚಿತ್ರ ವೀಕ್ಷಣೆಗೆ ನನ್ನನ್ನು ಆಹ್ವಾನಿಸಿದರು. ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ಸದಾಶಿವ ಶೆಣೈ ಅವರು ಉಪಸ್ಥಿತರಿದ್ದರು ಎಂದು ಟ್ವೀಟ್ (Tweet) ಮಾಡಿದ್ದಾರೆ.
ರಮೇಶ್ ಅರವಿಂದ್ ಈ ಚಿತ್ರದಲ್ಲಿ ಇನ್ಸ್‌ಪೆಕ್ಟರ್ ವಿಷ್ಣು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ (YouTube) ಧೂಳೆಬ್ಬಿಸಿತ್ತು. ಪ್ರತಿಕಥೆಯಲ್ಲೂ ಒಬ್ಬ ಹಿರೋ, ಒಬ್ಬ ವಿಲನ್ ಇರ್ತಾನೆ, ಆದರೆ ನಮ್ಮ ಕಥೆಯಲ್ಲಿ ಹಿರೋನೇ ಇಲ್ಲ, ಇಬ್ರೂನೂ ವಿಲನ್ನೇ?. ಈ ಸಾವುಗಳ ಹಿಂದಿರೋ ನಿಗೂಢತೆಯನ್ನು ಭೇದಿಸೋರು ಯಾರು?. ನಾನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿಲ್ಲ?. ಒಂದು ನಿಮಿಷ ಫೋನ್ ಇಲ್ಲದೇ ಇರೋಕೆ ಆಗಲ್ವಾ ನಿನಗೆ?. ಈ ಫೋನ್ ದಿನ ಎಲ್ಲ ಹೀಗೆ ಬರ್ತಾಯಿರುತ್ತೆ ಕಣೋ?. ಟೆಕ್ನಾಲಜಿ ಇಸ್ ಕಿಲ್ಲಿಂಗ್ ಮಿ?. ವೆಟಿಂಗ್ ಫಾರ್ 100?. ಈ ಎಲ್ಲ ಸಂಭಾಷಣೆಗಳು ಚಿತ್ರದ ಟ್ರೇಲರ್‌ನಲ್ಲಿ ಹೈಲೆಟ್ ಆಗಿದ್ದವು. ಒಂದು ಮೊಬೈಲ್ ಫೋನ್‌ನಿಂದ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಒಂದು ಫ್ಯಾಮಿಲಿಯೊಳಗಿನ ಘಟನೆಗಳ ಮೂಲಕ ಚಿತ್ರದಲ್ಲಿ ಹೇಳಲಾಗಿದೆ.
ಮನೆಯೊಳಗೆ ನುಸುಳೋ ಸೈಬರ್ ಜಗತ್ತಿನ ಕತೆ ಹೇಳುವ '100'!
'100' ಸಿನಿಮಾ ಸೈಬರ್ ಕ್ರೈಮ್ ಆಧಾರಿತ ಸಿನಿಮಾವಾಗಿದೆ. ರಮೇಶ್ ಅರವಿಂದ್ ಜತೆ ರಚಿತಾ ರಾಮ್, ಪೂರ್ಣಾ ನಟಿಸಿದ್ದು, ಇದು ಫ್ಯಾಮಿಲಿ ಥ್ರಿಲ್ಲರ್ ಜಾನರ್‌ನ ಸಿನಿಮಾವಾಗಿದೆ. ವಿಶೇಷ ಎಂದರೆ ರಮೇಶ್ ಅರವಿಂದ್ ಫ್ಯಾಮಿಲಿ ಮ್ಯಾನ್ ಆಗಿ ಕುಟುಂಬದ ರಕ್ಷಣೆ ಮತ್ತು ಪೊಲೀಸ್ ನಾಗಿ ತಮ್ಮ ಕರ್ತವ್ಯ ಎರಡು ಶೆಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುರ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಚಿತ್ರ ತಯಾರಾಗಿದ್ದು, ಉಮಾ, ಎಂ. ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಕೈಚಳಕ, ಶ್ರೀನಿವಾಸ್ ಕಲಾಲ್ ಸಂಕಲನ, ಗುರು ಕಶ್ಯಪ್ ಸಂಭಾಷಣೆ, ಧನ೦ಜಯ ನೃತ್ಯ ಸಂಯೋಜನೆ, ಜಾಲಿ ಬಾಸ್ಟಿನ್, ಡಾ.ರವಿವರ್ಮ ಸಾಹಸ ಈ ಚಿತ್ರಕ್ಕಿದೆ. ರಚಿತಾ ರಾಮ್, ಪೂರ್ಣ, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ, ಮಾಲತಿ ಸುಧೀರ್, ಬೇಬಿ ಸ್ಮಯ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ.
ಕನ್ನಡಿಗರ ಗಮನ ಸೆಳೆದ ರಮೇಶ್ ಅರವಿಂದ್ '100' ಟ್ರೈಲರ್!
ಇನ್ನು ರವಿ ಬಸ್ರೂರು ಸಂಗೀತ ಸಂಯೋಜನೆಯಿರುವ ಈ ಚಿತ್ರದಲ್ಲಿ ನಾಲ್ಕು ಫೈಟ್‌ಗಳಿದ್ದು, ಒಂದೊಂದಕ್ಕೂ ಗಟ್ಟಿಯಾದ ಭಾವನಾತ್ಮಕ ಕಾರಣಗಳಿವೆಯಂತೆ. ಎರಡು ಫೈಟ್ ದೃಶ್ಯಗಳನ್ನು ಜಾಲಿ ಬಾಸ್ಟಿನ್ ಮತ್ತೆರೆಡು ಫೈಟ್ ದೃಶ್ಯಗಳನ್ನು ರವಿವರ್ಮ ಮಾಡಿದ್ದಾರಂತೆ. ಹಾಗೂ ಸಿನಿಮಾದಲ್ಲಿರುವ ಚೇಸಿಂಗ್ ದೃಶ್ಯಕ್ಕೆ (Chasing scene) 100ರಿಂದ 150 ಕಾರುಗಳನ್ನು ಬಳಸಲಾಗಿದೆ. ಇಡೀ ರಸ್ತೆ ಬಾಡಿಗೆಗೆ ತೆಗೆದುಕೊಂಡು ಆ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿದೆ. ಈ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದೇ ಒಂದು ದೊಡ್ಡ ಥ್ರಿಲ್ಲಿಂಗ್ ಅನುಭವ. ರವಿವರ್ಮಾ ಅದ್ಭುತ ತಂತ್ರಜ್ಞರು ಅವರು ಚಿತ್ರಮಂದಿರದ ಒಳಗೆ ಒಂದು ಫೈಟ್ ಸನ್ನಿವೇಶ ಶೂಟ್ ಮಾಡಿದ್ದಾರೆ. ನಿರ್ಮಾಪಕರು ರಮೇಶ್ ರೆಡ್ಡಿ ಯಾವುದಕ್ಕೂ ಕಡಿಮೆ ಮಾಡದೇ ಆ ದೃಶ್ಯಗಳಿಗಾಗಿ ಖರ್ಚು ಮಾಡಿದ್ದಾರೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ. ಚಿತ್ರವು ಇದೇ ನವೆಂಬರ್ 19ರಂದು ತೆರೆ ಕಾಣಲಿದೆ.
ಖ್ಯಾತ ಚಲನಚಿತ್ರ ನಟ ಶ್ರೀ ರವರು ಇಂದು ನಮ್ಮ ನಿವಾಸಕ್ಕೆ ಭೇಟಿನೀಡಿ, ಬಿಡುಗಡೆಗೆ ಸಿದ್ಧವಿರುವ ತಮ್ಮ '100' ಸಿನೆಮಾ ಕುರಿತು ವಿವರಣೆ ನೀಡಿದರು. ಸೈಬರ್ ಕ್ರೈಂ ಆಧಾರಿತ ಕಥಾ ಹಂದರವುಳ್ಳ ಈ ಚಿತ್ರ ವೀಕ್ಷಣೆಗೆ ನನ್ನನ್ನು ಆಹ್ವಾನಿಸಿದರು. ನಿರ್ಮಾಪಕ ಶ್ರೀ ರಮೇಶ್ ರೆಡ್ಡಿ ಹಾಗೂ ಶ್ರೀ ಸದಾಶಿವ ಶೆಣೈ ಅವರು ಉಪಸ್ಥಿತರಿದ್ದರು. pic.twitter.com/wgrwRcAsIm
— Araga Jnanendra (@JnanendraAraga)