'24 ಕಿಸಸ್' ನಟನಿಗಾಗಿ ತೆಲುಗಿಗೆ ಹಾರಿದ ಕನ್ನಡ ನಟಿ!

Kannadaprabha News   | Asianet News
Published : Mar 19, 2020, 05:16 PM IST
'24 ಕಿಸಸ್' ನಟನಿಗಾಗಿ ತೆಲುಗಿಗೆ ಹಾರಿದ ಕನ್ನಡ ನಟಿ!

ಸಾರಾಂಶ

ಕನ್ನಡ ನಟಿ ಪಾಯಲ್‌ ರಾಧಾ​ಕೃಷ್ಣ ತೆಲು​ಗಿಗೆ ಹಾರಿ​ದ್ದಾರೆ. ಇನ್ನೂ ಹೆಸ​ರಿ​ಡದ ತೆಲುಗು ಚಿತ್ರದ ಶೂಟಿಂಗ್‌​ನಲ್ಲಿ ಬ್ಯುಸಿ ಆಗಿ​ದ್ದಾರೆ. ‘24 ಕಿಸಸ್‌’ ಚಿತ್ರ ಖ್ಯಾತಿಯ ಆದಿತ್ಯ ಅರುಣ್‌ ಅವ​ರಿಗೆ ನಾಯ​ಕಿ​ಯಾಗಿ ನಟಿ​ಸು​ತ್ತಿ​ದ್ದಾರೆ.

ಕನ್ನಡ ನಟಿ ಪಾಯಲ್‌ ರಾಧಾ​ಕೃಷ್ಣ ತೆಲು​ಗಿಗೆ ಹಾರಿ​ದ್ದಾರೆ. ಇನ್ನೂ ಹೆಸ​ರಿ​ಡದ ತೆಲುಗು ಚಿತ್ರದ ಶೂಟಿಂಗ್‌​ನಲ್ಲಿ ಬ್ಯುಸಿ ಆಗಿ​ದ್ದಾರೆ. ‘24 ಕಿಸಸ್‌’ ಚಿತ್ರ ಖ್ಯಾತಿಯ ಆದಿತ್ಯ ಅರುಣ್‌ ಅವ​ರಿಗೆ ನಾಯ​ಕಿ​ಯಾಗಿ ನಟಿ​ಸು​ತ್ತಿ​ದ್ದಾರೆ.

ಈ ನಡುವೆ ಕನ್ನ​ಡ​ದಲ್ಲೇ ಮತ್ತೊಂದು ಆಲ್ಬಂ ಆಡಿಯೋ ಗೀತೆಗೆ ಹೆಜ್ಜೆ ಹಾಕಿ​ದ್ದಾರೆ. ಅರ್ಜುನ್‌ ಕಿಶೋರ್‌ಚಂದ್ರ ಜತೆ​ಗೂಡಿ ‘ಸೇರು ನನ್ನ ತೋಳಲ್ಲಿ’ ಎಂಬ ಆಲ್ಬಂ ಗೀತೆ ರೂಪಿ​ಸಿ​ದ್ದಾರೆ. ಯೂಟ್ಯೂ​ಬ್‌​ನಲ್ಲಿ ಈಗಾ​ಗಲೇ ಈ ಆಲ್ಬಂ ಗೀತೆ ಬಿಡು​ಗ​ಡೆ​ಯಾ​ಗಿದ್ದು, ಕೇಳು​ಗ​ರಿಂದ ಒಳ್ಳೆಯ ಪ್ರತಿ​ಕ್ರಿ​ಯೆ​ಗಳು ಬರು​ತ್ತಿವೆ.

ರಕ್ಷಿತ್‌ ಹೊಸ ಸಿನಿಮಾ ಫಿಕ್ಸ್; 'ಸಪ್ತಸಾಗರದಾಚೆ ಎಲ್ಲೋ' ದಾಟ್ತಾರಾ ಶೆಟ್ರು?

ವಿನಾ​ಯಕ್‌ ಜೋಷಿ ಕೂಡ ಕಾಣಿ​ಸಿ​ಕೊಂಡಿ​ದ್ದಾ​ರೆ. ಐದು ನಿಮಿಷದ ಈ ವಿಡಿಯೋ ಆಲ್ಬಂ ಸಾಂಗ್‌ ಇದು. ‘ಲೈಫ್‌ 360’, ‘ಬೆಂಗ​ಳೂರು ಅಂಡ​ರ್‌​ವ​ಲ್ಡ್‌ರ್‍’ ಹಾಗೂ ‘ಭಿನ್ನ’ ಚಿತ್ರ​ಗ​ಳಲ್ಲಿ ನಟಿ​ಸಿರುವ ಪಾಯಲ್‌ ರಾಧಾ​ಕೃಷ್ಣ, ‘ಸದ್ಯ ನಾನು ತೆಲುಗು ಚಿತ್ರ​ದಲ್ಲಿ ನಟಿ​ಸು​ತ್ತಿ​ರುವೆ. ಜತೆಗೆ ‘ಸೇರು ನನ್ನ ತೋಳಲ್ಲಿ, ನನ್ನಾಣೆ ನೀನೇ ನನ್ನ ಉಸಿರಲ್ಲಿ’ ಎನ್ನುವ ಆಲ್ಬಂ ಗೀತೆಗೆ ಒಳ್ಳೆಯ ಪ್ರತಿ​ಕ್ರಿ​ಯೆ​ಗಳು ಕೇಳಿ ಬರು​ತ್ತಿವೆ. ಎಲ್ಲ ಎಲ್ಲೆಗಳನ್ನು ಮೀರಿದ ನಿಜವಾದ ಪ್ರೀತಿ ಹೇಗಿರುತ್ತದೆ ಎಂಬುದನ್ನು ಹೇಳಲಾಗಿದೆ’ ಎನ್ನುತ್ತಾರೆ.

ಸಂಗೀತ, ಗಾಯನ ಹಾಗೂ ನಿರ್ದೇಶನ ಅದ್ವಿಕ್‌ ಅವ​ರ​ದ್ದು. ಛಾಯಾಗ್ರಹಣ ಅಭಿಮನ್ಯು ಸದಾನಂದ್‌ ಮಾಡಿ​ದ್ದಾ​ರೆ. ಗಗನ್‌ ಜೆ ಗೌಡ ಸುನಿಲ್‌ ಕುಮಾರ್‌ ಅವರು ನಿರ್ಮಿ​ಸಿ​ದ್ದಾ​ರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?