
ರಕ್ಷಿತ್ ಶೆಟ್ಟಿಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ‘777 ಚಾರ್ಲಿ’ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿಮುಂದಿನ ಚಿತ್ರಕ್ಕೆ ಹೇಮಂತ್ ರಾವ್ ನಿರ್ದೇಶನ ಹೇಳುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಹೆಸರು ‘ಸಪ್ತಸಾಗರದ ಆಚೆ ಎಲ್ಲೋ’.
‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ನಂತರ ಸೇಮ್ ಕಾಂಬಿನೇಷನ್ ಮತ್ತೊಮ್ಮೆ ಜತೆಯಾಗುತ್ತಿದೆ. ಜೂನ್ ತಿಂಗಳಲ್ಲಿ ಈ ಸಿನಿಮಾ ಶೂಟಿಂಗ್ ಮೈದಾನಕ್ಕೆ ಇಳಿಯಲಿದೆ. ಅಪ್ಪಟ ಪ್ರೇಮಕತೆ ಹಾಗೂ ಆ್ಯಕ್ಷನ್ ಕೇಂದ್ರವಾಗಿಟ್ಟುಕೊಂಡು ಈ ಚಿತ್ರಕ್ಕೆ ಹೇಮಂತ್ ರಾವ್ ಅವರೇ ಕತೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಈ ಚಿತ್ರಕ್ಕೆ ಹಣ ಕೊಡ್ತೇವೆ, ರೀ ರಿಲೀಸ್ ಮಾಡಿ ಎನ್ನುತ್ತಿದ್ದಾರೆ ಪ್ರೇಕ್ಷಕರು!
ಈ ಹಿಂದೆ ಬಂದ ‘ಗೋಧಿ ಬಣ್ಣ ಸಾಧಾರಾಣ ಮೈಕಟ್ಟು’ ಹಾಗೂ ‘ಕವಲುದಾರಿ’ ಚಿತ್ರಗಳಂತೆ ಈ ಚಿತ್ರವನ್ನೂ ಹೊಸ ರೀತಿಯಲ್ಲಿ ರೂಪಿಸುವ ಪ್ಲಾನ್ ಹೇಮಂತ್ ಅವರದ್ದು. ‘ಈ ಚಿತ್ರದ ಕತೆ ರಕ್ಷಿತ್ ಶೆಟ್ಟಿಅವರಿಗೆ ತುಂಬಾ ಸೂಕ್ತವಾಗಿದೆ. ಪ್ರಯೋಗದ ಜತೆಗೆ ಒಂದು ದೊಡ್ಡ ಕಮರ್ಷಿಯಲ್ ಸಿನಿಮಾ ಇದು.
ಸಿನಿಮಾ ನಿರ್ಮಾಣದಲ್ಲಿ ತುಂಬಾ ಕನಸುಗಳನ್ನು ಕಟ್ಟಿಕೊಂಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದರಿಂದ ನಾನು ನಿರೀಕ್ಷೆ ಮಾಡಿದಂತೆ ಈ ಚಿತ್ರ ಬರಲಿದೆ. ಬೆಂಗಳೂರು ಸುತ್ತಮುತ್ತ 65 ರಿಂದ 75 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ ನಿರ್ದೇಶಕ ಹೇಮಂತ್ ರಾವ್.
ಅದ್ವೈತ್ ಗುರುಮೂರ್ತಿ ಕ್ಯಾಮೆರಾ, ಚರಣ್ ಸಂಗೀತ ಈ ಚಿತ್ರಕ್ಕಿದೆ. ಹೇಮಂತ್ ರಾವ್ ಹಾಗೂ ರಕ್ಷಿತ್ ಕಾಂಬಿನೇಷನ್ನಲ್ಲಿ ‘ತೆನಾಲಿ’ ಸಿನಿಮಾ ಬರಬೇಕಿತ್ತು. ಇದು ದೊಡ್ಡ ಕತೆಯ ಚಿತ್ರ. ಸ್ವಾತಂತ್ರ್ಯದ ದಿನಗಳ ಹಿನ್ನೆಲೆಯಲ್ಲಿ ಮೂಡುವ ಕತೆ. ಹೀಗಾಗಿ ಇದಕ್ಕೆ ಸಾಕಷ್ಟುತಯಾರಿ ಬೇಕು. ಸಮಯ ತೆಗೆದುಕೊಂಡು ಈ ಸಿನಿಮಾ ಮಾಡಬೇಕಿದ್ದರಿಂದ ಈ ಮೊದಲೇ ಕೇಳಿ ಮೆಚ್ಚಿದ್ದ ‘ಸಪ್ತಸಾಗರದ ಆಚೆ ಎಲ್ಲೋ’ ಚಿತ್ರವನ್ನು ಶುರು ಮಾಡುತ್ತಿದ್ದಾರೆ.
ರಕ್ಷಿತ್ ನಟನೆಯ ‘777 ಚಾರ್ಲಿ’ ಚಿತ್ರಕ್ಕೆ ಶೂಟಿಂಗ್ ಮುಗಿಯುತ್ತಾ ಬಂದಿದೆ. ಏಪ್ರಿಲ್ ತಿಂಗಳ ಮೊದಲ ವಾರದ ಹೊತ್ತಿಗೆ ಈ ಚಿತ್ರಕ್ಕೆ ಚಿತ್ರೀಕರಣ ಕೆಲಸಗಳು ಮುಕ್ತಾಯವಾಗಿಲಿದ್ದು, ಈ ನಂತರ ಹೇಮಂತ್ ರಾವ್ ನಿರ್ದೇಶನ ಮಾಡಲಿರುವ ‘ಸಪ್ತಸಾಗರದ ಆಚೆ ಎಲ್ಲೋ’ ಸಿನಿಮಾ ಸೆಟ್ಟೇರಲಿದೆ.
‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಎರಡು ಗೆಟಪ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಗಷ್ಟೆಕಾಲೇಜು ಮುಗಿಸಿದ ಹುಡುಗ ಹಾಗೂ ಹತ್ತು ವರ್ಷಗಳ ನಂತರದ ಕಾಲೇಜು ಹುಡುಗನ ಪಾತ್ರ ಹೀಗೆ ಭಿನ್ನ ರೀತಿಯ ಪಾತ್ರ ಮಾಡುತ್ತಿದ್ದಾರೆ.
- ಹೇಮಂತ್‌ರಾವ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.