ಏಪ್ರಿಲ್‌ 9ರಂದು 'ರಾಬರ್ಟ್‌' ರಿಲೀಸ್‌ ಇಲ್ಲ; ಡಿ-ಬಾಸ್‌ ಫ್ಯಾನ್ಸ್‌ಗೆ ಸ್ಯಾಡ್‌ ನ್ಯೂಸ್!

By Suvarna News  |  First Published Mar 18, 2020, 3:46 PM IST

ಕೊರೋನಾ ವೈರಸ್‌ ಭೀತಿಯಿಂದ ಚಿತ್ರಮಂದಿರಗಳು, ಮಾಲ್‌ಗಳು ಇನ್ನಷ್ಟುದಿನ ಬಂದ್‌ ಆಗುವ ಆತಂಕ ಎದುರಾಗಿದ್ದು, ಇದರ ಪರಿಣಾಮ ಈಗ ರಿಲೀಸ್‌ ಆಗಬೇಕಿದ್ದ ಸಿನಿಮಾಗಳಿಗೂ ಹೊಡೆತ ನೀಡಿದೆ. ಏಪ್ರಿಲ್‌ 9 ಗುಡ್‌ಫ್ರೈಡೇ ದಿನ ರಿಲೀಸ್‌ ಆಗಲಿದೆ ಎನ್ನಲಾಗಿದ್ದ ದರ್ಶನ್‌ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್‌’ ಅವತ್ತು ಬಿಡುಗಡೆಯಾಗುವುದಿಲ್ಲ ಎಂಬ ಸುದ್ದಿ ಬಂದಿದೆ.


ದುನಿಯಾ ವಿಜಯ್‌ ನಿರ್ದೇಶಿಸಿ, ಅಭಿನಯಸಿರುವ ‘ಸಲಗ’ ಹಾಗೂ ರವಿಚಂದ್ರನ್‌ ಪುತ್ರ ಮನುರಂಜನ್‌ ಅಭಿನಯದ ‘ಪ್ರಾರಂಭ’ ಚಿತ್ರಗಳ ರಿಲೀಸ್‌ ಕೂಡ ಮುಂದಕ್ಕೆ ಹೋಗಲಿದೆ. ಸದ್ಯಕ್ಕೆ ಯಾವುದೇ ಚಿತ್ರತಂಡಗಳು ಆ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೂ ಕೊರೋನಾ ಭೀತಿಯ ಪರಿಣಾಮ ಚಿತ್ರತಂಡಗಳು ಕಂಗಾಲಾಗಿರುವುದು ನಿಜ.

'ಜೈ ಶ್ರೀರಾಮ' ಹಾಡಿನ ಸ್ಟೆಪ್‌ ವೈರಲ್‌! ಟಿಕ್‌ಟಾಕ್‌ ವಿಡಿಯೋ ನೋಡಿ

Tap to resize

Latest Videos

ನಾವು ರಿಲೀಸ್‌ಗೆ ರೆಡಿ ಇದ್ದಿದ್ದು ನಿಜ, ಆದರೆ ಅಧಿಕೃತ ದಿನಾಂಕ ಪ್ರಕಟಿಸಿರಲಿಲ್ಲ. ಸಾಧ್ಯವಾದರೆ ಈ ತಿಂಗಳ ಕೊನೆಯ ವಾರ, ಇಲ್ಲವೇ ಏಪ್ರಿಲ್‌ ಮೊದಲ ವಾರ ಬರುವ ಪ್ಲ್ಯಾನ್‌ ಇತ್ತು. ಆದರೆ ಈಗ ಕೊರೋನಾ ಭೀತಿಯ ಪರಿಣಾಮ ಚಿತ್ರೋದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇದು ನಿಯಂತ್ರಣಕ್ಕೆ ಬರುವ ತನಕ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.- ಕೆ.ಪಿ. ಶ್ರೀಕಾಂತ್‌

ಎಲ್ಲವೂ ಅಂದುಕೊಂಡಂತಾಗಿದ್ದರೆ ಮಾ.20ಕ್ಕೆ ಹೊಸಬರ ಮೂರ್ನಾಲ್ಕು ಚಿತ್ರಗಳು ಬರಲಿದ್ದವು. ಮಾ.27ಕ್ಕೆ ಮನುರಂಜನ್‌ ಅಭಿನಯದ ‘ಪ್ರಾರಂಭ ’ಹಾಗೂ ದುನಿಯಾ ವಿಜಯ್‌ ಅಭಿನಯದ ‘ಸಲಗ’ ರಿಲೀಸ್‌ಗೆ ಸಿದ್ಧತೆ ನಡೆದಿತ್ತು. ಈಗ ಚಿತ್ರತಂಡಗಳಿಗೆ ರಿಲೀಸ್‌ ದಿನಾಂಕ ಮುಂದಕ್ಕೆ ಹಾಕುವುದು ಅನಿವಾರ್ಯವಾಗಿದೆ. ಏಪ್ರಿಲ್‌ ಮೊದಲ ವಾರ ತೆರೆಗೆ ಬರಲಿದ್ದ ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಅರ್ಜುನ್‌ ಗೌಡ’ ಚಿತ್ರದ ರಿಲೀಸ್‌ ದಿನಾಂಕವೂ ಏರುಪೇರು ಆಗುವುದು ಗ್ಯಾರಂಟಿ ಆಗಿದೆ.

"

click me!