ಮೊನ್ನೆ ಮೊನ್ನೆ ಗಂಡನ ಜೊತೆ ಫೋಟೋ ಹಾಕಿದ್ದೀನಿ ಆಗ್ಲೇ ಡಿವೋರ್ಸ್‌ ಅಂತೀರಾ?; ನೆಟ್ಟಿಗರ ಮೇಲೆ ನಮಿತಾ ಗರಂ

Published : Jun 01, 2024, 04:42 PM ISTUpdated : Jun 01, 2024, 05:03 PM IST
ಮೊನ್ನೆ ಮೊನ್ನೆ ಗಂಡನ ಜೊತೆ ಫೋಟೋ ಹಾಕಿದ್ದೀನಿ ಆಗ್ಲೇ ಡಿವೋರ್ಸ್‌ ಅಂತೀರಾ?; ನೆಟ್ಟಿಗರ ಮೇಲೆ ನಮಿತಾ ಗರಂ

ಸಾರಾಂಶ

ಪದೇ ಪದೇ ಡಿವೋರ್ಸ್ ಸುದ್ದಿ ಕ್ರಿಯೇಟ್ ಮಾಡುತ್ತಿರುವ ನೆಟ್ಟಿಗರ ಮೇಲೆ ನಟಿ ನಮಿತಾ ಫುಲ್ ಗರಂ... 

ನೀಲಕಂಠ, ಇಂದ್ರ, ಹೂ, ನಮಿತಾ ಐ ಲವ್ ಯು ಹಾಗೂ ಬೆಂಕಿ ಬಿರಗಾಳಿ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ನಮಿತಾ ವೈವಾಹಿಕ ಜೀವನ ಆಗಾಗ ಸುದ್ದಿಯಲ್ಲಿರುತ್ತದೆ. 2017ರಲ್ಲಿ ನಮಿತಾ ಮತ್ತು ವೀರೇಂದ್ರ ಚೌಧರಿ ತಿರುಪತಿಯಲ್ಲಿ ಸರಳವಾಗಿ ಮದುವೆ ಮಾಡಿಕೊಂಡರು. ಎರಡು ವರ್ಷಗಳ ಹಿಂದೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 

ಆದರೆ ಪದೇ ಪದೇ ಸುದ್ದಿಯಾಗುವುದು ನಮಿತಾ ಮತ್ತು ವೀರೇಂದ್ರ ಡಿವೋರ್ಸ್‌. ಹೌದು! ನಮಿತಾ ಒಂದು ತಿಂಗಳಿಗೂ ಹೆಚ್ಚಿಗೆ ಪತಿ ಜೊತೆ ಫೋಟೋ ಹಾಕಿಲ್ಲ ಅಂದ್ರೆ ಎಲ್ಲರೂ ಡಿವೋರ್ಸ್‌ ಪಡೆಯುತ್ತಿದ್ದಾರೆ ಎಂದು ಸುದ್ದಿ ಮಾಡಿ ಬಿಡುತ್ತಾರೆ. ಈ ವಿಚಾರದ ಬಗ್ಗೆ ನಮಿತಾ ಆಗಾಗ ಸ್ಪಷ್ಟನೆ ಕೊಡುತ್ತಾರೆ. ಆದರೆ ಈ ಸಲ ಫುಲ್ ಗರಂ ಆಗಿದ್ದಾರೆ. 

ಬೆಳ್ಳಗಾಗಲು ಪ್ಯಾನ್‌ಕೇಕ್‌ ಬಳಸಿದ ಜಗ್ಗೇಶ್; ಕಪ್ಪೆಂದು ಟೀಕಿಸಿದವರಿಗೆ ಮೊಮ್ಮಗನನ್ನು ತೋರಿಸಿದ ನಟ!

'ಮೊನ್ನೆ ಮೊನ್ನೆ ನನ್ನ ಪತಿಯ ಜೊತೆಗಿರುವ ಫೋಟೋ ಶೇರ್ ಮಾಡಿದ್ದೀನಿ. ಮರು ದಿನವೇ ಡಿವೋರ್ಸ್‌ ಎನ್ನುವ ಸುದ್ದಿ ಹಾಕುತ್ತಿದ್ದಾರೆ ಆನ್‌ಲೈನ್‌ನಲ್ಲಿ. ಯಾವುದೇ ಆಧಾರವಿಲ್ಲದೆ ನಾವು ದೂರಾಗುತ್ತೇವೆ ಅಂತ ಹೇಗೆ ಪ್ರಚಾರ ಮಾಡುತ್ತೀರಾ?'ಎಂದು ನಮಿತಾ ಮಾತನಾಡಿದ್ದಾರೆ. 

ಬಾತ್‌ ಟಬ್‌ನಲ್ಲಿ ನಟಿ ಪ್ರಣೀತಾ; ಗಂಡ ಕ್ಲಿಕ್‌ ಮಾಡಿದ ವಿಡಿಯೋ ನೋಡಿ ನೆಟ್ಟಿಗರು ಗರಂ

'ಒಬ್ಬ ನಟಿಯಾಗಿ ನಾನು ಸಾಕಷ್ಟು ವದಂತಿಗಳನ್ನು ಕೇಳಿದ್ದೇನೆ. ಈ ಡಿವೋರ್ಸ್ ವಿಚಾರದ ಬಗ್ಗೆ ನಾನು ಮತ್ತು ನನ್ನ ಪತಿ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನಮ್ಮ ಸ್ನೇಹಿತರು ಮತ್ತು ಆಪ್ತರು ಆಗಾಗ ಕರೆ ಮಾಡಿ ಕೇಳುತ್ತಾರೆ. ಏನಿದು ಸುದ್ದಿ ಆಗಿದೆ ನಿಜಾನಾ ಅಂತ. ನನಗೂ ಸ್ಪಷ್ಟನೆ ಕೊಟ್ಟು ಕೊಟ್ಟು ಸಾಕಾಗಿದೆ. ನಾನು ಬೇರೆ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿ ಇರುತ್ತೀನಿ. ಕೆಲವೊಮ್ಮೆ ಯಾರಿಗೂ ಯಾವುದಕ್ಕೂ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ಆದರೆ ಈ ಸುದ್ದಿ ನೋಡಿ ಜನರು ಕರೆ ಮಾಡುವುದನ್ನು ಕೇಳಿ ನನ್ನ ಪತಿ ಮತ್ತು ನಾನು ಬಿದ್ದು ಬಿದ್ದು ನಗ್ತೀವಿ ಅಷ್ಟೇ ಎಂದು ನಮಿತಾ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!