ನಟ ಜಗ್ಗೇಶ್ ತಮ್ಮ ಮೈ ಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಈ ಸಲ ತಾವು ಬಳಸುವ ಪ್ಯಾನ್ ಪೇಕ್ ಬಗ್ಗೆ ರಿವೀಲ್ ಮಾಡಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಟ, ನಟಿಯರು ಎಷ್ಟೇ ಹೆಸರು, ಹಣ ಮತ್ತು ಜನ ಸಂಪಾದನೆ ಮಾಡಿದರೂ ಕೆಲವು ಕಿಡಿಕೇಡಿಗಳಿಂದ ಬಾಡಿ ಶೇಮಿಂಗ್‌ಗೆ ಒಳಗಾಗುತ್ತಾರೆ. ಎಷ್ಟೇ ಮೆಚ್ಚಿಸಲು ಪ್ರಯತ್ನ ಪಟ್ಟರೂ ಕೊಂಕು ಹುಡುಕುವುದು ಬಿಡಲ್ಲ. ನೂರಾರು ಸಿನಿಮಾ, ಕಿರುತೆರೆ ರಿಯಾಲಿಟಿ ಶೋ...ಏನೇ ಮಾಡಿದ್ದರೂ ಯಶಸ್ಸು ಮೆಚ್ಚುವುದು ಬಿಟ್ಟು ತಪ್ಪು ಹುಡುಕುತ್ತಾರೆ. ಈಗ ಅದೇ ಬಣ್ಣ ತಾರತಮ್ಯ ಬಗ್ಗೆ ನಟ ಜಗ್ಗೇಶ್ ಪೋಸ್ಟ್ ಹಾಕಿದ್ದಾರೆ.
'ನನ್ನ ಕಪ್ಪು ಎಂದು ಅಣಕ ಮಾಡುತ್ತಿದ್ದವರು ಬಾಲ್ಯದಲ್ಲಿ ಎಲ್ಲರು. ಬಹಳ ಸಿಟ್ಟು ಬರುತ್ತಿತ್ತು ಆಗ ನನಗೆ. ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು ಯವನದಲ್ಲಿ' ಎಂದು ನಟ ಜಗ್ಗೇಶ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
PCOS ಒಳಗಾಗಿರುವ ಹೆಣ್ಣು ಮಕ್ಕಳಿಗೆ ಈ ಟೆಸ್ಟ್ ಕಡ್ಡಾಯ; ಪರಿಮಳಾ ಜಗ್ಗೇಶ್ ಕೊಟ್ಟ ಟಿಪ್ಸ್
'ನಟನಾದ ಮೇಲೆ ನನ್ನ ಮ್ಯಾಕ್ಸ್ ಫ್ಯಾಕ್ಟರ್ (ಲಂಡನ್) ಮೇಕಪ್ ಮ್ಯಾನ್ ಅಂಬರೀಶ್ ಅವರು ರಜನಿ ಯವರು, ವಿಜಯ್ ಕಾಂತ್, ಶಿವಣ್ಣ ಮತ್ತು ನಾನು ಬಳಸುತ್ತಿದ್ದ ಪ್ಯಾನ್‌ಕೇಕ್ ಇಂದು ವಿಶ್ವದಲ್ಲಿ ಮರೆಯಲಾದ ಪ್ಯಾನ್ ಕೇಕ್. ಆದರೆ ನನ್ನ ಅದೃಷ್ಟ ಅದು ನನ್ನ ಬಳಿ ಇನ್ನು 50 ಸಿನಿಮಾಗೆ ಸಾಕಾಗುತ್ತದೆ ಅಷ್ಟಿದೆ. ಅನೇಕರು ಕೇಳಿದರೂ ನಾನು ನೀಡುವುದಿಲ್ಲ. ಕಾರಣ ಅದರ ಮೇಲಿನ ವಿಪರೀತ ಪ್ರೀತಿ ಹಾಗೂ ಭಕ್ತಿ ಹಾಗೂ ಎಲ್ಲೂ ಸಿಗದು' ಎಂದು ಜಗ್ಗೇಶ್ ಹೇಳಿದ್ದಾರೆ.
'ಅದನ್ನು ಹಚ್ಚಿದರೆ ನಾನು ಕಪ್ಪು ಅಂದವರು ಮೌನವಾಗುತ್ತಾರೆ. ಇದು ಬಳಸುವಾಗ ಅಯ್ಯೋ ನಾನು ನಿಜವಾಗಲು ಈ ಬಣ್ಣ ಇದ್ದಿದ್ದರೆ ಎನ್ನಿಸುತ್ತದೆ ಆದರೆ ನನ್ನ ಮೊಮ್ಮಗ ಅರ್ಜುನ ಯಾವ ಪ್ಯಾನ್‌ಕೇಕ್ ಬಳಸದಂತೆ ಬಣ್ಣ ಹಚ್ಚಿ ಬಂದಿದ್ದಾನೆ ಭೂಮಿಗೆ. ಇಷ್ಟು ಹೇಳಲು ಕಾರಣ ಇಂದು ಅವನ 9ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ ಅಂದರೆ ಅವನ ಹುಟ್ಟುಹಬ್ಬ' ಎಂದಿದ್ದಾರೆ ಜಗ್ಗೇಶ್.
ನನ್ನ ಸಿನಿಮಾಗಳು ಸೋತು ಆತ್ಮಹತ್ಯೆಗೆ ಯತ್ನಿಸಿದಾಗ ಅಣ್ಣಾವ್ರೇ ಬದುಕಿಸಿದ್ದರು ; ಕಹಿ ಘಟನೆ ಬಿಚ್ಚಿಟ್ಟ ನಟ ಜಗ್ಗೇಶ್
ಸರ್ ನೀವು ಯಾವ ಬಣ್ಣ ಇದ್ದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನೆಗೆಟಿವ್ ಕಾಮೆಂಟ್ ಮಾಡುವವರ ಬಗ್ಗೆ ನೀವೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಕಲೆಯನ್ನು ನಾವು ಮಾತ್ರವಲ್ಲ ಆ ಸರಸ್ವತಿ ದೇವಿನೇ ಮೆಚ್ಚಿಕೊಂಡಿದ್ದಾಳೆ ಎಂದು ನೆಟ್ಟಿಗರು ಕಾಮೆಂಟ್ ಮೂಲಕ ಜಗ್ಗಣ್ಣನಿಗೆ ಸಪೋರ್ಟ್ ಮಾಡಿದ್ದಾರೆ.