ಅಂದು ಶಾಲೆಗೆ ಸೇರಿಸಲು ಹೋದಾಗ  ಏನಾಯ್ತು ಅಂತ 'ಸಿಂಪಲ್' ಕಥೆ ಹೇಳಿದ 'ಸುನಿ'

By Mahmad Rafik  |  First Published Jun 1, 2024, 2:19 PM IST

ಶಾಲೆ ಶಿಕ್ಷಕರ ಕೃಪೆಯಿಂದ ಜೂನ್ 1ರಂದು ಹುಟ್ಟುಹಬ್ಬ ಆಚರಿಸುತ್ತಿರುವ ಗೆಳೆಯರಿಗೆ ಜನ್ಮದಿನ ಶುಭಾಶಯಗಳು (Birthday Wish) ಎಂಬ ಪೋಸ್ಟ್‌ಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (viral Post) ಆಗುತ್ತಿವೆ.


ಬೆಂಗಳೂರು: ಅಂದು ಶಾಲೆಗೆ ಸೇರಿಸಲು ಹೋದಾಗ  ಏನಾಯ್ತು ಅಂತ ಸಿಂಪಲ್ ಕಥೆಯೊಂದನ್ನು ನಿರ್ದೇಶಕ ಸುನಿ (Director Simple Suni) ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ. ಇಂದು ಜೂನ್ 1, ಯಾರ ಸ್ಟೇಟಸ್ ನೋಡಿದರೂ ಹುಟ್ಟುಹಬ್ಬದ ಶುಭಾಶಯಗಳನ್ನು ನೋಡಬಹುದು. ಫೇಸ್‌ಬುಕ್‌ ನೋಟಿಫಿಕೇಶನ್ (Facebook Notification) ನೋಡಿದ್ರೆ ಬಹುತೇಕರ ಹುಟ್ಟುಹಬ್ಬ ಇವತ್ತು ಎಂಬುವುದು ಗೊತ್ತಾಗುತ್ತದೆ. ಶಾಲೆ ಶಿಕ್ಷಕರ ಕೃಪೆಯಿಂದ ಜೂನ್ 1ರಂದು ಹುಟ್ಟುಹಬ್ಬ ಆಚರಿಸುತ್ತಿರುವ ಗೆಳೆಯರಿಗೆ ಜನ್ಮದಿನ ಶುಭಾಶಯಗಳು (Birthday Wish) ಎಂಬ ಪೋಸ್ಟ್‌ಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (viral Post) ಆಗುತ್ತಿವೆ. ಜೂನ್ 1ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜನರ ಜೀವನದಲ್ಲಿ ಅವರು ಶಾಲೆಗೆ ಸೇರುವ ದಿನ ಏನಾಯ್ತು ಎಂಬುದನ್ನು ಕಥೆ ಮೂಲಕ ಸಿಂಪಲ್ ಸುನಿ ಹೇಳಿದ್ದಾರೆ. 

'ಸಿಂಪಲ್' ಕಥೆ ಹೇಳಿದ 'ಸುನಿ'

Tap to resize

Latest Videos

ಶಾಲೆಗೆ ಸೇರಿಸಲು ಹೋದಾಗ ..?

ಹೆಡ್‌ಮಾಸ್ಟರ್: ಅಯ್ಯೋ ಹುಟ್ಟಿರೋದು september, october ಆ ಮುಂದಿನ ವರ್ಷ ಬನ್ನಿ .
ಪೋಷಕರು: ಏನೋ ಮಾಡಿ ಮೇಷ್ಟ್ರೇ ..ಮನೇಲಿ ತುಂಬಾ ತೀಟೆ ಮಾಡ್ತಾರೆ.
ಹೆಡ್‌ಮಾಸ್ಟರ್: ಸರಿ ಶಾಲೆ ಶುರು ಆಗೋ ದಿನನೇ ಹುಟ್ಟಿದ್ದ ದಿನಾಂಕ ಅಂತ ಮಾಡೋಣ ಬಿಡಿ ..

ಈ ರೀತಿ ಜನುಮ ದಿನ ಆಚರಿಸುತ್ತಿರುವ ಪ್ರತಿಯೊಬ್ಬರಿಗೂ ಜನುಮದಿನದ ಶುಭಾಶಯಗಳು ಎಂದು ಸಿಂಪಲ್ ಸುನಿ ಬರೆದುಕೊಂಡಿದ್ದಾರೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕ್ರಿಕೆಟಿಗರಾದ ದಿನೇಶ್ ಕಾರ್ತಿಕ್, ರಜತ್ ಪಾಟೀದಾರ್ ಫೋಟೋ ಹಂಚಿಕೊಂಡಿದ್ದಾರೆ.

ಸಿಂಪಲ್ ಸುನಿ-ವಿನಯ್ ರಾಜ್ ಜೋಡಿಗೆ ಸಾಥ್ ಕೊಟ್ಟ ರಮ್ಯಾ; ಸೂಫಿ ಶೈಲಿ ಗೀತೆಯ ಝಲಕ್ ಮೆರಗು!

ನೆಟ್ಟಿಗರಿಂದ ಬಂತು ಫನ್ನಿ ಕಮೆಂಟ್ 

ದಿನೇಶ್ ಕಾರ್ತಿಕ್ ಅಭಿಮಾನಿಯೊಬ್ಬರು ಇಂದು ನನ್ನ ತಾಯಿಯ ಹುಟ್ಟುಹಬ್ಬ,  ಶುಭಾಶಯ ತಿಳಿಸಿದ್ದಕ್ಕೆ ಧನ್ಯವಾದಗಳು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ಬಳಕೆದಾರ ನೀವು ಹೇಳಿದ ಕಾರಣದಿಂದ ನಾನಿಂದು ಹುಟ್ಟುಹಬ್ಬವನ್ನು  ಆಚರಿಸಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

ನಿರ್ದೇಶಕ ಸಿಂಪಲ್ ಸುನಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ದೈನಂದಿನ ಬೆಳವಣಿಗೆಯ ಕುರಿತು ತಮ್ಮದೇ ಶೈಲಿಯಲ್ಲಿ ಅಭಿಪ್ರಾಯಗಳನ್ನು ಸಿಂಪಲ್ ಸುನಿ ಹಂಚಿಕೊಳ್ಳುತ್ತಿರುತ್ತಾರೆ. ಐಪಿಎಲ್ ಸಂದರ್ಭದಲ್ಲಿ ಸಿಂಪಲ್ ಸುನಿಯವರ ಟ್ವೀಟ್‌ಗಳು ವೈರಲ್ ಆಗುತ್ತಿದ್ದವು.

'ಈಗ ಅಂಟಿರೋ ಪೀಡೆ ಬಿಡ್ತದೆ.. ಹಾಗಾಗಿ ಈ ಸಲ ಅಂತೂ ಕಪ್ ನಮ್ದೇ..': RCB Unbox ಟ್ರೇಲರ್‌ಗೆ ಸಿಂಪಲ್ ಸುನಿ ಸೇರಿ ನೆಟ್ಟಿಗರು ಫುಲ್

ಸಿಂಪಲ್ ಸುನಿ ಸಿನಿಮಾ ಅಂಗಳದಲ್ಲಿ ಚಲನಚಿತ್ರ ನಿರ್ದೇಶಕ , ನಿರ್ಮಾಪಕ , ಚಿತ್ರಕಥೆಗಾರ ಮತ್ತು ಗೀತರಚನೆಕಾರರಾಗಿ ಗುರುತಿಸಿಕೊಂಡಿದ್ದಾರೆ. ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ತೆರೆಕಂಡ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಸಿಂಪಲ್ ಸುನಿಯಾಗಿ ಚಿರಪರಿಚಿತರಾಗಿದ್ದಾರೆ.

, &

ಶಾಲೆಗೆ ಸೇರಿಸಲು ಹೋದಾಗ ..

Headmaster ::ಅಯ್ಯೋ ಹುಟ್ಟಿರೋದು september october aa ಮುಂದಿನ್ ವರ್ಷ ಬನ್ನಿ ..

Parents :: ಏನೋ ಮಾಡಿ ಮೇಷ್ಟ್ರೇ ..ಮನೇಲಿ
ತುಂಬಾ ತೀಟೆ ಮಾಡ್ತಾರೆ ..

Headmaster :: ಸರಿ ಶಾಲೆ ಶುರು ಆಗೋ ದಿನನೇ ಹುಟ್ಟಿದ್ದ ದಿನಾಂಕ ಅಂತ ಮಾಡೋಣ ಬಿಡಿ ..… pic.twitter.com/WVOfS5d5S5

— ಸುನಿ/SuNi (@SimpleSuni)
click me!