ಚಿತ್ರದ ಟ್ರೇಲರ್‌ಗೆ ಧ್ವನಿ ನೀಡುವುದರಿಂದ ಆರಂಭಗೊಂಡ, ಚಿತ್ರದ ಆಡಿಯೋ ಬಿಡುಗಡೆ ವರೆಗೂ ಸುದೀಪ್ ಅವರ ಬೆಂಬಲವನ್ನು ಪಡೆದುಕೊಂಡ ಸಿನಿಮಾ ‘ಲವ್ ಮ್ಯಾಕ್ಟೇಲ್’. ಟ್ರೇಲರ್, ಹಾಡುಗಳ ನಂತರ ಈಗ ಸಿನಿಮಾ ತೆರೆಗೆ ಸಜ್ಜಾಗಿದೆ.
ನಟ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯರ್ ಚಿತ್ರದ ಜೋಡಿ. ಇತ್ತೀಚೆಗೆ ಆಡಿಯೋ ಬಿಡುಗಡೆ ಮಾಡಿದ್ದು ನಟ ಸುದೀಪ್ ಅವರು. ಡಾರ್ಲಿಂಗ್ ಕೃಷ್ಣ ಅವರು ಸಿಸಿಎಲ್ ಮೂಲಕ ಸುದೀಪ್ ಅವರಿಗೆ ಪರಿಚಯವಾದವರು. ಹೀಗಾಗಿ ಕೃಷ್ಣ ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸುತ್ತೇನೆ ಎಂದಾಗ ಬೆಂಬಲವಾಗಿ ನಿಂತವರು ಸುದೀಪ್. ‘ಹಾಡುಗಳನ್ನು ಕೇಳಿದಾಗ ಚೆನ್ನಾಗಿದೆ ಅನಿಸಿತು. ಹಾಗೆ ಟ್ರೇಲರ್ ಕೂಡ ಚೆನ್ನಾಗಿದೆ. ಹೀಗಾಗಿ ಕೃಷ್ಣನ ಜತೆಗೆ ನಿಂತೆ. ಒಳ್ಳೆಯ ರೀತಿಯಲ್ಲಿ ಈ ಸಿನಿಮಾ ಗೆಲ್ಲುವಂತಾಗಲಿ’ ಎಂದು ಹಾರೈಸಿದರು.
'ಲವ್ ಮಾಕ್‌ಟೈಲ್' ನಲ್ಲಿ ಕಿಚ್ಚ ಸುದೀಪ್
undefined
ಇದೇ ತಿಂಗಳು ಜ.31ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ನಟಿಯಾಗಿ ಚಿತ್ರರಂಗಕ್ಕೆ ಬಂದ ಮಿಲನಾ ನಾಗರಾಜ್, ಈ ಚಿತ್ರದ ಮೂವಕ ನಿರ್ಮಾಪಕಿ ಆಗುತ್ತಿದ್ದಾರೆ. ‘ಬೃಂದಾವನ ಚಿತ್ರದಲ್ಲಿ ನನ್ನ ಅಭಿನಯ ನೋಡಿ ಬೆಂಬಲ ನೀಡಿದ್ದೀರಿ. ಈಗ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಜತೆಗೆ ನಿರ್ಮಾಪಕಿಯೂ ಆಗಿದ್ದೇನೆ. ನಮ್ಮ ಇಡೀ ಚಿತ್ರಕ್ಕೆ ಸುದೀಪ್ ಅವರ ಬೆಂಬಲವನ್ನು ಮರೆಯುವಂತಿಲ್ಲ. ಕತೆ ಚೆನ್ನಾಗಿತ್ತು, ಈಗ ಜನರೇಷನ್‌ಗೆ ಸೂಕ್ತ ಎನಿಸುವ ಸಿನಿಮಾ. ಈ ಕಾರಣಕ್ಕೆ ಈ ಚಿತ್ರಕ್ಕೆ ನಿರ್ಮಾಪಕಿ ಆದೆ. ಇನ್ನೇನು ಸಿನಿಮಾ ತೆರೆ ಮೇಲೆ ಮೂಡುತ್ತಿದೆ. ಎಲ್ಲರು ನೋಡಿ’ ಎಂದರು ಮಿಲನಾ ನಾಗರಾಜ್. ರಘುದೀಕ್ಷಿತ್ ಸಂಗೀತ, ಕ್ರೇಜಿಮೈಂಡ್ ಶ್ರೀ ಕ್ಯಾಮೆರಾ ಚಿತ್ರಕ್ಕಿದೆ.
ರಾಬರ್ಟನಿಗೆ ಒಲಿದು ಬಂದ ಮೈಸೂರು ರಾಣಿ, ಯಾರಿವಳು?
‘ಮೂರು ಕಾಲದ ಪ್ರೇಮ ಕತೆಯನ್ನು ಒಳಗೊಂಡ ಸಿನಿಮಾ ಇದು. ಚಿತ್ರಕ್ಕೆ ‘ಲವ್ ಮ್ಯಾಕ್ಟೇಲ್’ ಎನ್ನುವ ಹೆಸರಿಟ್ಟಿದ್ದು ಈ ಕಾರಣಕ್ಕೆ. ನಾನು ಕೂಡ ಮೂರು ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ. ನಿರ್ದೇಶನ ನನಗೆ ಹೊಸ ಅನುಭವ. ನನಗೆ ಬೆನ್ನೆಲುಬಾಗಿ ನಿಂತಿರುವುದು’ ಎಂದರು ಕೃಷ್ಣ. ಬೆಂಗಳೂರು, ಚಿಕ್ಕಮಗಳೂರು, ಕಳಸ,ಮೈಸೂರು, ಉಡುಪಿದಲ್ಲಿ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.