
ಬರ್ತಡೇ ಡೇ ಗಿಫ್ಟ್....
ಆರೋಹಿ ನಾರಾಯಣ್ ಜ.26ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಇದೇ ವರ್ಷ ಶುರುವಾಗುವ ಹೊಸದೊಂದು ರೊಮ್ಯಾಂಟಿಕ್ ಚಿತ್ರಕ್ಕೆ ತಾವು ನಾಯಕಿ ಆಗಲಿದ್ದೀರಿ ಎಂಬ ಆಶ್ವಾಸನೆ ಮೂಲಕ ಬತ್‌ರ್‍ಡೇ ವಿಶ್ ಮಾಡಿದ್ದಾರೆ. ಇದರಿಂದ ಆರೋಹಿ ನಾರಾಯಣ್ ಫುಲ್‌ಖುಷ್ ಆಗಿದ್ದಾರೆ.
ನೆನಪಿರಲಿ ಪ್ರೇಮ್ ಫ್ಯಾಮಿಲಿ ಇದು, ತಂದೆ, ನಡೆದು ಬಂದ ದಾರಿ
ಶಿವಾಜಿಯಲ್ಲಿ ಮಹತ್ವದ ಪಾತ್ರ
ಆರೋಹಿ ನಾರಾಯಣ್ ಅಭಿನಯಿಸಿರುವ ಎರಡು ಚಿತ್ರಗಳ ಪೈಕಿ ಶಿವಾಜಿ ಸುರತ್ಕಲ್ ಫೆ.21ಕ್ಕೆ ರಿಲೀಸ್ ಆಗುತ್ತಿದೆ. ‘ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಇನ್ವೆಸ್ಟಿಗೇಟಿವ್ ಸಿನಿಮಾ. ಕತೆಯ ಪ್ರತಿ ಸನ್ನಿವೇಶವೂ ಥ್ರಿಲ್ಲಿಂಗ್ ಆಗಿದೆ. ಇಲ್ಲಿ ನನಗೆ ಮಹತ್ವದ ಪಾತ್ರವೇ ಸಿಕ್ಕಿದೆ. ಸಿಕ್ಕಿರುವ ಅವಕಾಶದಲ್ಲಿ ನಟಿಯಾಗಿ ನನ್ನನ್ನು ನಾನು ಗುರುತಿಸಿಕೊಳ್ಳಲು ಸಾಧ್ಯವಾಗುವಂತಹ ಪಾತ್ರ. ಅದಕ್ಕೆ ನ್ಯಾಯ ಒದಗಿಸಿದ್ದೇನೆ ಎನ್ನುವ ವಿಶ್ವಾಸವಿದೆ’ ಎನ್ನುತ್ತಾರೆ ಆರೋಹಿ.
ಏನೇನ್ ಅವತಾರ ತಾಳ್ತಾಳೋ ಡಿಪ್ಪಿ? ಇದು ಪದ್ಮಾವತಿಯ ದಶಾವತಾರಗಳು!
ನಳಮಹಾರಾಜನ ಮೇಲೆ ನಂಬಿಕೆ...
ಆರೋಹಿ ಪೂರ್ಣ ಪ್ರಮಾಣದಲ್ಲಿ ನಾಯಕಿ ಆಗಿ ಅಭಿನಯಿಸಿರುವ ಸಿನಿಮಾ ‘ಭೀಮಸೇನ ನಳಮಹಾರಾಜ’. ‘ನನ್ನ ಸಿನಿ ಜರ್ನಿಗೆ ಇದೊಂದು ಮಹತ್ವದ ಚಿತ್ರ. ಅದಕ್ಕೆ ಕಾರಣ ಚಿತ್ರದ ಕತೆ ಹಾಗೂ ನನ್ನ ಪಾತ್ರವೂ ಸೇರಿದಂತೆ ಮೇಕಿಂಗ್ ದೃಷ್ಟಿಯಿಂದಲೂ ಹೌದು’ ಎನ್ನುವುದು ಆರೋಹಿ ನಾರಾಯಣ್ ವಿಶ್ವಾಸ, ನಂಬಿಕೆ, ಭರವಸೆಯ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.