ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಜೋಡಿಯಾದಿ ಬಜಾರಿ ಪಾತ್ರ ಮಾಡಿದ್ದರು ನಟಿ ಮಂಜುಳಾ. ಅವರು ಆ ಪಾತ್ರದಲ್ಲಿ ಅದೆಷ್ಟು ಖ್ಯಾತಿ ಪಡೆದಿದ್ದರು ಎಂದರೆ ಯಾರಾದರೂ ಸ್ವಲ್ಪ ಗಂಡುಬೀರಿ ತರ ಅಡಿದರೆ ಸಾಕು, ಅವರಿಗೆ ಮಂಜುಳಾ ಎಂದೇ ಆಗಿನ ಕಾಲದಲ್ಲಿ ಕರೆಯುತ್ತಿದ್ದರು. 'ನನ್ನ ನೀನು ಗೆಲ್ಲಲಾರೆ..' ಎಂಬ..
ಖ್ಯಾತ ನಟಿ ಮಂಜುಳಾ (Manjula) ಅವರು 1970 ಹಾಗೂ 1980ರ ದಶಕದಲ್ಲಿ ನಟಿಸಿದ್ದ ಖ್ಯಾತ ನಟಿ. ಕನ್ನಡ ಸಿನಿಮಾಗಳಲ್ಲೇ ಹೆಚ್ಚು ನಟಿಸಿದ್ದ ನಟಿ ಮಂಜುಳಾ ಅವರು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ನಟಿ ಕಲ್ಪನಾ ಅವರು ಉತ್ತುಂಗದಲ್ಲಿದ್ದಾಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಂಜುಳಾ, ಮಿನುಗುತಾರೆ ಕಲ್ಪನಾರ ಸ್ಟಾರ್‌ಡಮ್‌ಗೆ ಪಟ್ಟೆ ಕೊಟ್ಟ ನಟಿ ಎನ್ನಬಹುದು. ನಿಧಾನವಾಗಿ ನಟಿ ಕಲ್ಪನಾ ಕೈಯನ್ನು ಬರಿದು ಮಾಡುತ್ತ ಸ್ಟಾರ್ ನಟಿಯಾಗಿ ಬೆಳೆದ ಮುಂಜುಳಾ ಅವರು ದುರಂತ ಸಾವು ಕಂಡಿದ್ದು ಸ್ವಯಂಕೃತ ಅಪರಾಧ ಎನ್ನಲಾಗಿದೆ.
ಹಾಗಿದ್ದರೆ ನಟಿ ಮಂಜುಳಾ ಜೀವನ ಹಾಗು ಸಾವಿನ ಸತ್ಯ ಕಥೆ ಏನು? ಇಲ್ಲಿದೆ ನೋಡಿ.. 08 ನವೆಂಬರ್ 1954ರಂದು ತುಮಕೂರಿನಲ್ಲಿ ಜನಿಸಿದ್ದ ಮಂಜುಳಾ ಅವರು 1965ರಲ್ಲಿ ಪ್ರಭಾತ್ ಕಲಾವಿದರು ಎಂಬ ನಾಟಕ ಕಂಪನಿಯಲ್ಲಿ ನಟನೆ ಶುರು ಮಾಡಿದ್ದರು. 1966ರಲ್ಲಿ ಮನೆ ಕಟ್ಟಿ ನೋಡು ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಮಂಜುಳಾ. ಬಳಿಕ 1972ರಲ್ಲಿ 'ಯಾರ ಸಾಕ್ಷಿ' ಚಿತ್ರದ ಮೂಲ;ಕ ನಾಯಕಿ ನಟಿಯಾಗಿ ವೃತ್ತಿಜೀವನ ಆರಂಭಿಸಿದ ಮಂಜುಳಾ ಅವರು ಸಾಯುವವರೆಗೂ ನಟಿಸುತ್ತಲೇ ಇದ್ದರು.
ನಟ ಸರಿಗಮ ವಿಜಿ ಇನ್ನಿಲ್ಲ: ಹಿರಿಯ ನಟನ ಹೆಸರಲ್ಲಿ ಸರಿಗಮ ಸೇರಿಕೊಂಡಿದ್ದು ಹೇಗೆ?
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಜೋಡಿಯಾದಿ ಬಜಾರಿ ಪಾತ್ರ ಮಾಡಿದ್ದರು ನಟಿ ಮಂಜುಳಾ. ಅವರು ಆ ಪಾತ್ರದಲ್ಲಿ ಅದೆಷ್ಟು ಖ್ಯಾತಿ ಪಡೆದಿದ್ದರು ಎಂದರೆ ಯಾರಾದರೂ ಸ್ವಲ್ಪ ಗಂಡುಬೀರಿ ತರ ಅಡಿದರೆ ಸಾಕು, ಅವರಿಗೆ ಮಂಜುಳಾ ಎಂದೇ ಆಗಿನ ಕಾಲದಲ್ಲಿ ಕರೆಯುತ್ತಿದ್ದರು. 'ನನ್ನ ನೀನು ಗೆಲ್ಲಲಾರೆ..' ಎಂಬ ಹಾಡಂತೂ ಇಂದಿಗೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. 1972-1986ರ ಅವಧಿಯಲ್ಲಿ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಕನ್ನಡದಲ್ಲಿ ಮಾತ್ರವಲ್ಲದೇ 4 ತಮಿಳು ಹಾಗೂ ಎರಡು ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಮಂಜುಳಾ. ಆದರೆ, ದುರಾದೃಷ್ಟ ಎಂಬಂತೆ ನಟಿ ಮಂಜುಳಾ ಅವರು ಲವ್‌ನಲ್ಲಿ ಬಿದ್ದರು, ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದ ಮಂಜುಳಾ ಅವರನ್ನು ಅಂದಿನ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಅಕ್ಕನ ಮಗ ಅಮೃತಂ ಎರಡನೇ ಮದುವೆ ಆಗಿದ್ದರು. ಆದರೆ ಆ ಮದುವೆ ಬಹಳ ಕಾಲ ಬಾಳಲಿಲ್ಲ. ಆ ಬಳಿಕ ಅವರು ಚಾಮರಾಜನಗರದ ಹುಡುಗನೊಬ್ಬನ ಪ್ರೀತಿಯಲ್ಲಿ ಬಿದ್ದಿದ್ದರು.
ಹಬ್ಬದ ಹೋಳಿಗೆ ಹೊತ್ತಲ್ಲಿ ತುಪ್ಪದ ಬೆಡಗಿಗೆ ಬಿಗ್ ರಿಲೀಫ್, ಡ್ರಗ್ಸ್ ಕೇಸ್ ಢಮಾರ್!
ಚಾಮರಾಜನಗರದ ಹುಡುಗ ಹಾಗು ನಟಿ ಮಂಜುಳಾ ಅವರು ಮದುವೆ ಆಗಲೆಂದು ತಿರುಪತಿಗೆ ಹೊರಟಿದ್ದರು. ಆದರೆ, ರಸ್ತೆ ಮಧ್ಯೆ ಆ ಹುಡುಗ 'ನಂಗೆ ಯಾಕೋ ಹೀಗೆ ನಾವು ಕದ್ದು ಮದುವೆ ಆಗುತ್ತಿರುವುದು ಸರಿ ಎನಿಸುತ್ತಿಲ್ಲ. ನಾವು ನಮ್ಮ ಅಪ್ಪ-ಅಮ್ಮನ ಆಶೀರ್ವಾದ ಪಡೆದು ಮತ್ತೆ ಬರುವಾ' ಎಂದು ಹೇಳಿ ವಾಪಸ್ ಹೊರಟ. ಅವನ ಜೊತೆ ವಾಪಸ್ ಹೋದರು ನಟಿ ಮಂಜುಳಾ. ಆದರೆ ಇಬ್ಬರೂ ಸೇರಿ ಮುಂಜುಳಾ ಮನೆಗೆ ಹೋಗಿ ಮದುವೆಯ ಚರ್ಚೆಯಲ್ಲಿ ತೊಡಗಿಕೊಂಡರು. ಪರಸ್ಪರ ವಾಗ್ವಾದ ಕೂಡ ನಡೆಯಿತು.
ನಟಿ ಮಂಜುಳಾಗೆ ಆತ ತನ್ನನ್ನು ಮದುವೆಯಾಗುವುದು ಸುಳ್ಳು ಎನ್ನಿಸಿತ್ತು. ಅವರು ಪದೇಪದೇ ಅದನ್ನೇ ಕೇಳುತ್ತ 'ನೀವು ನಿಜವಾಗಿಯೂ ನನ್ನ ಮದುವೆ ಆಗ್ತೀಯಾ? ನಿನ್ನ ಅಪ್ಪ-ಅಮ್ಮ ಒಪ್ಕೋತಾರಾ? ನೀನು ಮದುವೆ ಆಗಿಲ್ಲ ಅಂದ್ರೆ ನಾನು ಪ್ರಾಣ ಕಳ್ಕೋತೀನಿ' ಎನ್ನುತ್ತಾ ಆತನನ್ನು ಹೆದರಿಸಲು (ಬ್ಲಾಕ್‌ಮೇಲ್?) ಮಾಡಲು ಸೀಮೆಎಣ್ಣೆ ಸುರಿದುಕೊಂಡರು. ಅಲ್ಲೇ ಇದ್ದ ಬೆಂಕಿಪೊಟ್ಟಣದಿಂದ ಒಂದು ಕಡ್ಡಿ ಗೀರಿಕೊಂಡರು ಅಷ್ಟೇ. ನಟಿ ಮಂಜುಳಾ ಮೈಗೆ ಬೆಂಕಿ ಹೊತ್ತಿಕೊಂಡಿತು. ಆರಿಸಲು ಪ್ರಯತ್ನಪಟ್ಟರೂ ಆ ಹುಡುಗನಿಗೆ ಸಾಧ್ಯವಾಗಲಿಲ್ಲ. ಬಹಳಷ್ಟು ಸುಟ್ಟುಹೋಗಿದ್ದ ಮಂಜುಳಾರನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕಿ ಉಳಿಯಲಿಲ್ಲ.
ತಮಿಳುನಾಡಿನ ಎಂ ಕರುಣಾನಿಧಿ ಅವರ ಅಕ್ಕನ ಮಗ ಅಮೃತಂ ಜತೆ ನಟಿ ಮಂಜುಳಾ ಮದುವೆ ಮಾಡಿಕೊಳ್ಳುತ್ತೇನೆ ಎಂದಾಗಲೂ ಹಲವು ಹಿರಿಯರು 'ಬೇಡ' ಎಂದಿದ್ದರಂತೆ. ಆದರೆ, 'ನಾನು ನನ್ನ ಹೃದಯ ಕೊಟ್ಟುಬಿಟ್ಟಿದ್ದೇನೆ' ಎಂದು ಹೇಳಿ ಮದುವೆ ಮಾಡಿಕೊಂಡಿದ್ದರಂತೆ. ಮಂಜುಳಾ ಸ್ಟಾರ್‌ಗಿರಿ ಕಡಿಮೆ ಆಗುತ್ತಿದ್ದಂತೆ ಆತ ಅವರಿಂದ ದೂರಾವಾದರು. ಬಳಿಕ, ಚಾಮರಾಜನಗರದ ಹುಡುಗ ಲವ್ ಮಾಡಿದ್ದು ಹೌದು, ಆದರೆ, ಮದುವೆ ಅಂತ ಬಂದಾಗ ಮನೆಯವರ ಆಶೀರ್ವಾದ ಬೇಕು ಅಂದ. ಆದರೆ, ಅದೇನೋ ಸಂಶಯ ಹೊಂದಿದ್ದ ಮಂಜುಳಾ ತಾವೇ ತಮ್ಮ ಜೀವಕ್ಕೆ ಅಂತ್ಯ ಕೊಟ್ಟುಕೊಂಡುಬಿಟ್ಟರು. ಅದು ಉದ್ಧೇಶಪೂರ್ವಕ ಆತ್ಮಹತ್ಯೆ ಆಗಿರಲಿಲ್ಲ, ಆದರೆ, ಸ್ವಯಂಕೃತ ಅಪರಾಧ ಆಗಿತ್ತು ಎನ್ನಹುದೇ?
ನನಗೆ ಸಹಾಯ ಮಾಡಿದ್ದು ರಿಷಬ್ ಶೆಟ್ಟಿ ಹಾಗೂ ದರ್ಶನ್ ಮಾತ್ರ; ಮಂಡ್ಯ ರಮೇಶ್
ಕನ್ನಡದ ಹಿರಿಯ ನಟ ರಾಜೇಶ್ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿದ್ದಾರೆ. ನಟಿ ಮುಂಜಾಳ ಜೊತೆಗೆ ಅಭಿನಯಿಸಿದ್ದ ಅವರು ಅಂದಿನ ಕಾಲಘಟ್ಟದ ಕೆಲವು ಘಟನೆಗಳ ಬಗ್ಗೆ ಹೇಳಿದ್ದಾರೆ. ಅದರಲ್ಲಿ, ನಟಿ ಮಂಜುಳಾ ಅವರ ಸಾವಿನ ಸೀಕ್ರೆಟ್ ಕೂಡ ಬಾಯ್ಬಿಟ್ಟಿದ್ದಾರೆ. ಒಟ್ಟಿನಲ್ಲಿ, ನಟಿ ಮಂಜುಳಾ ಅವರದು ದುರಂತ ಸಾವಂತೂ ಹೌದು.