ಪಿಸಿಯೋಥೆರಪಿಗೆ ಅಸ್ತು ಅಂದಿದ್ದೇಕೆ, ಮೈಸೂರಿನಲ್ಲಿ ನಟ ದರ್ಶನ ಈಗ ಏನ್ಮಾಡ್ತಿದಾರೆ?

Published : Jan 15, 2025, 02:33 PM ISTUpdated : Jan 15, 2025, 02:46 PM IST
ಪಿಸಿಯೋಥೆರಪಿಗೆ ಅಸ್ತು ಅಂದಿದ್ದೇಕೆ, ಮೈಸೂರಿನಲ್ಲಿ ನಟ ದರ್ಶನ ಈಗ ಏನ್ಮಾಡ್ತಿದಾರೆ?

ಸಾರಾಂಶ

ದರ್ಶನ್‌ಗೆ ಬೆನ್ನುನೋವು ಚಿಕಿತ್ಸೆಗಾಗಿ ಮೈಸೂರಿನಲ್ಲಿ ಫಿಸಿಯೋಥೆರಪಿ ಪಡೆಯುತ್ತಿದ್ದಾರೆ. ನೋವು ಶೇ.೨೦ಕ್ಕಿಂತ ಹೆಚ್ಚು ಕಡಿಮೆಯಾಗಿದ್ದು, ಚಿಕಿತ್ಸೆ ಮುಂದುವರಿಯಲಿದೆ. ವೈದ್ಯರು ಎಪಿಡ್ಯೂರಲ್ ಇಂಜೆಕ್ಷನ್ ಮತ್ತು ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ್ದು, ದರ್ಶನ್ ಕುಟುಂಬ ಸಮೇತ ಮುಂದಿನ ನಿರ್ಧಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

ಕನ್ನಡದ ಸ್ಟಾರ್ ನಟ ದರ್ಶನ್ (Actor Darshan) ಅವರು ತೀವ್ರ ಬೆನ್ನುನೋವಿನಿಂದ ನರಳುತ್ತಿರುವುದು ಗೊತ್ತೇ ಇದೆ. ಇದಕ್ಕಾಗಿ ಅವರು ಮೈಸೂರಿನಲ್ಲಿ ಪಿಸಿಯೋಥೆರಪಿಗೆ ಮೊರೆ ಹೋಗಿದ್ದಾರೆ. ದರ್ಶನ್‌ಗೆ ಪಿಸಿಯೋ ಥೆರಪಿಯಿಂದ ಬೆನ್ನು ನೋವು ಸ್ವಲ್ಪ ಗುಣಮುಖ ಕಾಣುತ್ತಿದೆ ಎನ್ನಲಾಗಿದೆ. 20 ದಿನದ ಹಿಂದೆ ಇದ್ದ ನೋವಿಗೂ ಇಂದಿಗೂ ಬಹಳ ವ್ಯತ್ಯಾಸ ಕಂಡುಬರುತ್ತಿದೆ ಎಂಬ ಮಾಹಿತಿ ಇದೆ.

ನಟ ದರ್ಶನ್‌ಗೆ ಮೊದಲು ಇದ್ದ ಬೆನ್ನುನೋವಿನಲ್ಲಿ ಶೇ 20% ಗಿಂತ ಹೆಚ್ಚು ಚೇತರಿಕೆ ಕಂಡುಬಂದಿದೆಯಂತೆ. ಇನ್ನೂ ಹೆಚ್ಚಿನ ಫಲಿತಾಂಶ ಇದರಿಂದಲೇ ದೊರೆಯಲಿದೆ ಎಂದಿದ್ದಾರಂತೆ ಅವರಿಗೆ ಟ್ರೀಟ್‌ಮೆಂಟ್ ಮಾಡುತ್ತಿರುವ ವೈದ್ಯರು. ಆ ವೈದ್ಯರ ಮಾತು ಕೇಳಿ ನಟ ದರ್ಶನ್ ಖುಷಿಯಾಗಿದ್ದಾರೆ ಎನ್ನಲಾಗಿದೆ. ಜೊತೆಗೆ, ಇದೇ ಪಿಸಿಯೋಥೆರಪಿ ಮುಂದುವರೆಸುವಂತೆ ಸೂಚನೆ‌ಯನ್ನು ಕೂಡ ನಟ ದರ್ಶನ್‌ ನೀಡಿದ್ದಾರೆ ಎನ್ನಲಾಗಿದೆ. 

ಮೈಸೂರಿಗೆ ತೆರಳಲು ಅನುಮತಿ ಪಡೆದುಕೊಂಡ ನಟ ದರ್ಶನ್ ಮುಂದಿನ ಹೆಜ್ಜೆ?

ಎಪಿಡ್ಯೂರಲ್ ಇಂಜೆಕ್ಷನ್ ಕೊಡುವ ಮುನ್ನ ದರ್ಶನ್‌ಗೆ ಇಂಜೆಕ್ಷನ್ ಸೈಡ್ ಎಫೆಕ್ಟ್, ಅದು ಕೆಲಸ ಮಾಡುವ ರೀತಿ ಎಲ್ಲವನ್ನು ವೈದ್ಯರು ವಿವವರಿಸಿದ್ದಾರೆ. ವೈದ್ಯರ ವಿವರಣೆ ಕೇಳಿದ ಮೇಲೆ ಆ ಇಂಜೆಕ್ಷನ್ ಕೊಡಲು ದರ್ಶನ್ ಸಮ್ಮತಿ ನೀಡಿದ್ದಾರೆ. ಅಪರೇಷನ್ ನಿಶ್ಚಿತ ಎಂದಾದರೆ ಆಗ  ವೈದ್ಯರು ಸ್ವತಃ ದರ್ಶನ್, ತಮ್ಮ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಾಕರ್, ಹಾಗೂ ಮಗ ವಿನೀಶ್ ಈ ಎಲ್ಲರನ್ನು ಕರೆಸಿ ಅಪರೇಷನ್ ಬಗ್ಗೆ, ಅಪರೇಷನ್ ನಂತರ ಎಫೆಕ್ಟ್ ಬಗ್ಗೆ ಕೌನ್ಸಿಲಿಂಗ್ ರೂಪದಲ್ಲಿ ಮಾಹಿತಿ ನೀಡಲಿದ್ದಾರೆ. 

ಫಿಸಿಯೋಥೆರಪಿ, ಸರ್ಜರಿ, ಇಂಜೆಕ್ಷನ್ ಹಾಗೂ ಅದರ ಸೈಡ್ ಇಫೆಕ್ಟ್ ಹೀಗೆ ಎಲ್ಲ ಮಾಹಿತಿಯನ್ನೂ ನಟ ದರ್ಶನ್‌ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ. ಅಜಯ್ ಹೆಗ್ಡೆ ನೀಡಿದ್ದಾರೆ. ಅದನ್ನೆಲ್ಲ ಕೇಳಿಸಿಕೊಂಡಿರುವ ನಟ ದರ್ಶನ್, 'ಒಂದು ವಾರದ ನಂತರ ಕುಟುಂಬದ ಸಮೇತ  ಆಸ್ಪತ್ರೆಗೆ ಬರುತ್ತೇನೆ' ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ, ಜಾಮೀನು ಕೊಟ್ಟ ಬಳಿಕ ನಟ ದರ್ಶನ್‌ ಅವರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ. 

ಮೈಸೂರಿಗೆ ತೆರಳಲು ಅನುಮತಿ ಪಡೆದುಕೊಂಡ ನಟ ದರ್ಶನ್ ಮುಂದಿನ ಹೆಜ್ಜೆ?

ಅಂದಹಾಗೆ, ನಟ ದರ್ಶನ್ ಅವರು ತಮ್ಮ ನಟನೆಯ ಅರ್ಧಕ್ಕೆ ನಿಂತಿರುವ 'ಡೆವಿಲ್' ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಬಳಿಕ, ಅನಾರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ಅದರ ಮುಂದಿನ ಭಾಗದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಸದ್ಯ ಮೈಸೂರಿನಲ್ಲಿ ಆಸ್ಪತ್ರೆ ಕೆಲಸಕ್ಕೆ ಬೀಡುಬಿಟ್ಟಿರುವ ನಟ ದರ್ಶನ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್