Breaking ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಬಿ-ಟೌನ್ ಬೇಬೋ ಕರೀನಾ ಕಪೂರ್?

Published : Jan 04, 2024, 12:02 PM IST
Breaking ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಬಿ-ಟೌನ್ ಬೇಬೋ ಕರೀನಾ ಕಪೂರ್?

ಸಾರಾಂಶ

ಕನ್ನಡ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ಸ್‌. ಮೊದಲ ಕನ್ನಡ ಸಿನಿಮಾ ಸಹಿ ಮಾಡಿದ್ರಾ ಬಾಲಿವುಡ್ ಬೇಬೋ?

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾ ಟಾಕ್ಸಿಕ್‌ ಎಂದು ಅನೌನ್ಸ್ ಮಾಡಿದ್ದಾರೆ. ಕೆವಿಎನ್‌ ನಿರ್ಮಾಣ ಸಂಸ್ಥೆ ಜೊತೆ ಕೈ ಜೋಡಿಸಿರುವ ರಾಖಿ ಹೊಸ ಲುಕ್‌ ನೋಡಿ ಸಿನಿ ರಸಿಕರು ಥ್ರಿಲ್ ಆಗಿದ್ದಾರೆ. ಚಿತ್ರದ ನಾಯಕಿ ಯಾರು? ಯಾರೆಲ್ಲಾ ನಟಿಸಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿತ್ತು ಸದ್ಯ ಬಂದಿರುವ ಬ್ರೇಕಿಂಗ್ ನ್ಯೂಸ್ ಅಂದ್ರೆ....ಟಾಕ್ಸಿಕ್‌ ಚಿತ್ರಕ್ಕೆ ಬಾಲಿವುಡ್ ಬೇಬೋ ಕರೀನಾ ಕಪೂರ್ ಸಾಥ್ ಕೊಟ್ಟಿರುವುದು. 

ಹೌದು! ಬಾಲಿವುಡ್ ಮಿಲ್ಕ್‌ ಬ್ಯೂಸಿ ಕರೀನಾ ಕಪೂರ್ ಟಾಕ್ಸಿಕ್‌ ಚಿತ್ರದಲ್ಲಿ ನಟಿಸಲಿದ್ದಾರೆ ಅಂತ ಫಿಲ್ಮ್‌ ಫೇರ್‌ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಯಾವ ಪಾತ್ರಕ್ಕೆ ಅನ್ನೋ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡನೇ ರಿವೀಲ್ ಮಾಡಬೇಕು. ಈ ಹಿಂದೆ ಕೆಜಿಎಫ್ ಸಿನಿಮಾದಲ್ಲಿ ಯಶ್ ಜೊತೆ ಬಾಲಿವುಡ್ ಸ್ಟಾರ್‌ಗಳಾದ ರವೀಣಾ ಟೆಂಡನ್ ಮತ್ತು  ಸಂಜಯ್ ದತ್ ಕಾಣಿಸಿಕೊಂಡಿದ್ದರು. ಈಗ ಬೇಬೋ ಬರ್ತಿದ್ದಾರೆ ಅಂತ ತಿಳಿದ ಮೇಲೆ ನೆಟ್ಟಿಗರು ಖುಷ್ ಆಗಿದ್ದಾರೆ. ನನ್ನ ಯಶ್‌ ಬಿ-ಟೌನ್‌ ಮಂದಿನ ಕರ್ಕೊಂಡು ಬರ್ತಿದ್ದಾರೆ ಅನ್ನೋ ಖುಷಿ ಹೆಚ್ಚಾಗುತ್ತಿದೆ. 

ಯಶ್ ಹೊಸ ಚಿತ್ರ ಟಾಕ್ಸಿಕ್: 55, 19, ಸಂಖ್ಯಾಶಾಸ್ತ್ರದೊಂದಿಗಿನ ನಂಟೇನು?

ಡಿಸೆಂಬರ್ 8ರಂದು  ಯಶ್ ನಟನೆಯ 19ನೇ ಸಿನಿಮಾದ ಶೀರ್ಷಿಗೆ ಬಿಡುಗಡೆ ಮಾಡಿದ್ದರು. ಮೋನ್‌ಸ್ಟಾರ್‌ ಮೈಂಡ್‌ ಕ್ರಿಯೆಶನ್ಸ್‌ ನಲ್ಲಿ ಮೂಡಿಬರಲಿರುವ ಟಾಕ್ಸಿಕ್ ಸಿನೆಮಾದ  ಟೈಟಲ್ ಅನ್ನು 11 ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿತ್ತು. ಚಿತ್ರದ ಟೈಟಲ್ ಅನೌನ್ಸ್ ದಿನವೇ ಸಿನಿಮಾ ಏಪ್ರಿಲ್ 10 2025ರಲ್ಲಿ ರಿಲೀಸ್‌ ಎಂದು ರಿವೀಲ್ ಮಾಡಿದ್ದರು. ಟಾಕ್ಸಿಕ್‌ ಚಿತ್ರಕ್ಕೆ ಗೀತು ಮೋಹನದಾಸ್  ಅಕ್ಷನ್ ಕಟ್ ಹೇಳಲಿದ್ದಾರೆ.  ಲಯರ್ಸ್ ಡೈರಿ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಸೇರಿದಂತೆ ವಿಶ್ವದಾದ್ಯಂತ 6 ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದಿದ್ದಾರೆ. 

ಯಶ್ ಟಾಕ್ಸಿಕ್‌ ಚಿತ್ರಕ್ಕೆ ಮಹಿಳಾ ಸ್ಟಾರ್‌ ನಿರ್ದೇಶಕಿ, ಯಾರೀಕೆ ಗೀತು ಮೋಹನ್‌ದಾಸ್‌

ಈ ಹಿಂದೆ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ಬರಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಸಾಯಿ ಪಲ್ಲವಿ ಕಥೆ ಕೇಳಿದ್ದಾರೆ ಪ್ರತಿಕ್ರಿಯೆ ಅಥವಾ ಒಪ್ಪಿಗೆ ನೀಡಿಲ್ಲ ಅಂತ ಹೇಳಲಾಗುತ್ತಿತ್ತು. ಈಗ ಕರೀನಾ ಕಪೂರ್ ಹೆಸರು ಕೇಳಿ ಬಂದಿದೆ. ಕರೀನಾ ಮತ್ತು ಪಲ್ಲವಿ ಇಬ್ರು ಇದ್ರೂ ಸಿನಿಮಾ ಸೂಪರ್ ಎನ್ನಬಹುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್