ಚೆಂದದ ನಟಿಯರಿಗೆ ಮಾಲ್ಡೀವ್ಸ್‌ ಮರ್ಯಾದೆ;ಹೋಗಿದ್ದು ಸ್ವಂತ ಖರ್ಚಲ್ಲಿ ಅಲ್ಲ?

Kannadaprabha News   | Asianet News
Published : Dec 02, 2020, 09:20 AM ISTUpdated : Dec 02, 2020, 09:32 AM IST
ಚೆಂದದ ನಟಿಯರಿಗೆ ಮಾಲ್ಡೀವ್ಸ್‌ ಮರ್ಯಾದೆ;ಹೋಗಿದ್ದು ಸ್ವಂತ ಖರ್ಚಲ್ಲಿ ಅಲ್ಲ?

ಸಾರಾಂಶ

ಇದ್ದಕ್ಕಿದ್ದಂತೆ ಮಾಲ್ಡೀವ್ಸ್ ದ್ವೀಪಗಳಲ್ಲಿ ಸಿನಿಮಾ ನಟಿಯರ ಅತಿವೃಷ್ಟಿಆಗಿದೆ. ಕಳೆದ ಎರಡು ವಾರಗಳಿಂದ ಅನೇಕ ಸಿನಿಮಾ ನಟಿಯರ ಸೋಷಿಯಲ್‌ ಮೀಡಿಯಾ ಪೇಜ್‌ ತೆಗೆದು ನೋಡಿದರೆ ಅಲ್ಲಿ ಮಾಲ್ಡೀವ್‌್ಸ ಹಂಗಾಮ, ವಿವಿಧ ಭಂಗಿಗಳಲ್ಲಿ ತೆಗೆಸಿಕೊಂಡಿರುವ ಫೋಟೋಗಳು, ‘ಕೊರೋನಾ ನಂತರ ನನ್ನ ಹಾಲಿಡೇ ಟ್ರಿಪ್‌ ಮಾಲ್ಡೀವ್‌್ಸನಲ್ಲಿ’ ಎಂದು ಬರೆದಿಕೊಂಡಿರುವ ಸಾಲುಗಳು, ಜತೆಗೆ ಹಾಟ್‌ ಗ್ಲಾಮರ್‌ ಫೋಟೋಗಳೇ ಕಣ್ಣು ಕುಕ್ಕುತ್ತವೆ. ಇದ್ಯಾಕೆ ಹೀಗೆ ಎಂದು ನೋಡಿದರೆ ಇದರೆ ಹಿಂದೆ  ಮಾಲ್ಡೀವ್ಸ್ ಪ್ರವಾಸೋದ್ಯಮ ಕೆಲಸ ಮಾಡಿದ್ದು ಗೊತ್ತಾಗುತ್ತದೆ. ಈ ನಟಿಯರು ನಟಿಯರು ಮಾಲ್ಡೀವ್‌್ಸಗೆ ಹೋಗಿದ್ದು ಸ್ವಂತ ಖರ್ಚಲ್ಲಿ ಅಲ್ಲ!

ರೆಸಾರ್ಟ್‌ ಮಾಲೀಕರ ಕರಾಮತ್ತು

ಸಿನಿಮಾ ನಟಿಯರು ಹೀಗೆ ಮಾಲ್ಡೀವ್ಸ್ ಸಮುದ್ರ ತೀರಗಳಲ್ಲಿ ಮೈ ಚಳಿ ಬಿಟ್ಟು ಪೋಸ್‌ಗಳನ್ನು ಕೊಡುತ್ತಿರುವುದರ ಹಿಂದೆ ಅಲ್ಲಿನ ರೆಸಾರ್ಟ್‌ ಮಾಲೀಕರ ಕರಾಮತ್ತು ಅಡಗಿದೆ. ದ್ವೀಪ ರಾಷ್ಟ್ರವಾಗಿರುವ ಮಾಲ್ಡೀವ್ಸ್ ನ ಆರ್ಥಿಕತೆ ನಿಂತಿರುವುದು ಪ್ರವಾಸಿಗರ ಮೇಲೆ. ಕೊರೋನಾ ನಂತರ ಎಲ್ಲಾ ಕ್ಷೇತ್ರಗಳಂತೆ ಟೂರಿಸಂ ವಹಿವಾಟು ಕೂಡ ನೆಲಕಚ್ಚಿದೆ. ಹೀಗೆ ಪಾತಾಳಕ್ಕೆ ಕುಸಿದ ಪ್ರವಾಸೋದ್ಯಮವನ್ನು ಮತ್ತೆ ಮೇಲೆಕ್ಕೇರಿಸಿಕೊಳ್ಳಲು ಮಾಲ್ಡೀವ್ಸ್ ರೆಸಾರ್ಟ್‌ ಮಾಲೀಕರಿಗೆ ಕಂಡಿದ್ದು ಭಾರತೀಯ ಸಿನಿಮಾ ನಟಿಯರು.

ಮಾಲ್ಡೀವ್ಸ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್..! ಫೋಟೋಸ್ ನೋಡಿ 

ಹಾಲಿಡೇ ಹೆಸರಿನಲ್ಲಿ ಮಾರ್ಕೆಟಿಂಗ್‌ ತಂತ್ರ

ಜಾಹೀರಾತು ಹೆಚ್ಚು ಪ್ರಯೋಜನಕಾರಿಯಲ್ಲ ಎಂದು ತಿಳಿದ ಆಯೋಜಕರು ನಟಿಯರ ಮ್ಯಾನೇಜರ್‌, ಪಿಆರ್‌ಗಳ ಮೂಲಕ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಹೀಗೆ ಎಲ್ಲ ಭಾಷೆಗಳಿಗೂ ಪರಿಚಿತ ಎನಿಸುವ ನಟಿಯರನ್ನು ಸಂಪರ್ಕಿಸಿ ಮಾಲ್ಡೀವ್ಸ್ಗೆ ಅಹ್ವಾನಿಸಿದ್ದಾರೆ. ಪ್ರಯಾಣದ ವೆಚ್ಚ, ಊಟ- ವಸತಿ ಹಾಗೂ ಶಾಪಿಂಗ್‌ ಸೇರಿದಂತೆ ಎಲ್ಲವನ್ನೂ ಆಯೋಜಕರೇ ಒದಗಿಸಿ ಡಜನ್‌ಗಳ ಲೆಕ್ಕದಲ್ಲಿ ನಟಿಯರನ್ನು ಮಾಲ್ಡೀವ್‌್ಸಗೆ ಕರೆಸಿಕೊಂಡಿದ್ದಾರೆ.

ಸೆಲೆಬ್ರಿಟಿಗಳ್ಯಾಕೆ ಈ ಪರಿ ಮಾಲ್ಡೀವ್ಸ್‌ಗೆ ಮುಗಿ ಬೀಳ್ತಿದ್ದಾರೆ! 

ಸಾಲುಗಟ್ಟಿನಿಂತ ನಟಿಯರು

ಕನ್ನಡದ ನಟಿಯರಾದ ಶಾನ್ವಿ ಶ್ರೀವಾಸ್ತವ್‌, ಶರ್ಮಿಳಾ ಮಾಂಡ್ರೆ, ಪ್ರಣೀತಾ ಹಾಗೂ ವೇದಿಕಾ, ರಾಕುಲ್‌ ಪ್ರೀತ್‌ ಸಿಂಗ್‌, ತಾಪ್ಸಿ ಪನ್ನು, ಸಮಂತಾ, ಕಾಜಲ್‌ ಅಗರ್‌ವಾಲ್‌, ಕತ್ರಿನಾ ಕೈಫ್‌, ಸೋನಾಕ್ಷಿ ಸಿನ್ಹಾ, ಇಲಿಯಾನ, ಕರಿನಾ ಕಪೂರ್‌, ವಿವೇಕ್‌ ಒಬೆರಾಯ್‌ ಕುಟುಂಬ, ಮೌನಿ ರಾಯ್‌.. ಹೀಗೆ ಸಾಲು ಸಾಲು ನಟಿಯರು ಮಾಲ್ಡೀವ್ಸ್ ದ್ವೀಪದಲ್ಲಿ ಹಾಟ್‌ ಆಗಿಯೇ ಕಾಣಿಸಿಕೊಂಡಿದ್ದಾರೆ.

ಅಷ್ಟಕ್ಕೂ ಈ ಸ್ಟಾರ್ಸ್ ಎಲ್ಲ ಮಾಲ್ಡೀವ್ಸ್‌ನಲ್ಲಿ ಏನಿಟ್ಟಿದ್ದಾರೆ? 

ನಟಿಯರಿಗೆ ಆಯೋಜಕರ ಷರತ್ತುಗಳು

ಹೀಗೆ ಹೋಗುವ ನಟಿಯರಿಗೆ ಆಯೋಜಕರು ನಟಿಯರ ಫೋಟೋ ತೆಗೆಯಲು ಪ್ರತ್ಯೇಕ ಫೋಟೋಗ್ರಾಫರ್‌ಗಳ ವ್ಯವಸ್ಥೆ ಮಾಡುವ ಜತೆಗೆ ಒಂದಿಷ್ಟುಷರತ್ತುಗಳನ್ನು ಹಾಕಿದ್ದಾರೆ. ಆ ಕರಾರುಗಳು ಹೀಗಿವೆ-

1. ಮಾಲ್ಡೀವ್ಸ್ನಲ್ಲಿ ಇದ್ದಷ್ಟುದಿನ ದಿನಕ್ಕೆ 2 ರಿಂದ 3 ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಕು.

ಶಾನ್ವಿಯ ಮತ್ತೊಂದು 'ಬೋಲ್ಡ್' ಅವತಾರ ಕಂಡು ಬೆಚ್ಚಿಬೀಳಬೇಡಿ! ಪೋಟೋ ಒಳಗಿದೆ 

2. ಪ್ರತಿ ಫೋಟೋದಲ್ಲೂ ನಟಿಯರು ಹಾಟ್‌- ಗ್ಲಾಮರ್‌ ಆಗಿ ಕಾಣಿಸಿಕೊಳ್ಳಬೇಕು.

3. ಈ ಫೋಟೋಗಳು ಉಳಿದುಕೊಂಡಿರುವ ಲೊಕೇಷನ್‌, ರೆಸ್ಟೋರೆಂಟ್‌ ಇತ್ಯಾದಿಗಳನ್ನೇ ಹೆಚ್ಚು ಫೋಕಸ್‌ ಮಾಡಬೇಕು.

4. ಮಾಲ್ಡೀವ್ಸ್ ಕೊರೋನಾ ಫ್ರೀ ಪ್ರವಾಸಿ ಕೇಂದ್ರ ಎಂಬುದನ್ನು ಪರೋಕ್ಷವಾಗಿ ಹೇಳಬೇಕು.

5. ನಟಿಯರ ಈ ಮಾಲ್ಡೀವ್ಸ್ ಪ್ರವಾಸದ ಹಿಂದಿನ ಗುಟ್ಟು ರಟ್ಟಾಗಬಾರದು.

ಮಾಲ್ಡೀವ್ಸ್‌ನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಶೇರ್ ಮಾಡಿಕೊಂಡ ಹಾಟ್ ಫೋಟೋ! 

6. ಕೊರೋನಾ ನಂತರ ನನ್ನ ಹಾಲಿಡೇ ಟ್ರಿಪ್‌ ಮಾಲ್ಡೀವ್ಸ್ನಲ್ಲೇ ಎಂಬುದನ್ನು ನಿರ್ದಿಷ್ಟವಾಗಿ ಹೇಳಬೇಕು.

ಮಾಲ್ಡೀವ್ಸ್ಗೆ ಪ್ರವಾಹದಂತೆ ಹೋಗುತ್ತಿರುವ ಸಿನಿಮಾ ನಟಿಯರ ಈ ಹಾಲಿಡೇ ಪ್ರವಾಸದ ಹಿಂದಿನ ಗುಟ್ಟಬಾಲಿವುಡ್‌ ನಟನೊಬ್ಬರು ಬಹಿರಂಗ ಮಾಡಿದ್ದಾರೆ. ಸದ್ಯ ಇದು ಬಾಲಿವುಡ್‌ ಅಂಗಳದಲ್ಲಿ ಹಾಟ್‌ ಟಾಪಿಕ್‌ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ರಾತ್ರಿ 12 ಗಂಟೆಗೆ ಫೋನ್‌ ಮಾಡಿ ಮಾತಾಡಿದ್ರು: ಕ್ಯಾಮರಾ ಮುಂದೆ ಬಂದ್ರು Vijayalakshmi Darshan
Untold Love Story: ಸ್ಟಾರ್ ನಟನ ಎರಡನೇ ಪತ್ನಿಯ ಲವ್‌ನಲ್ಲಿ ಬಿದ್ದು ಒದ್ದಾಡಿದ್ದ ರಜನಿಕಾಂತ್!