
ಈ ಚಿತ್ರದ ನಿರ್ದೇಶಕರು ಗಿರಿಕೃಷ್ಣ. ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದರು. ಈಗ ಇದ್ದಕ್ಕಿದ್ದಂತೆ ನಿರ್ದೇಶಕರು ಬದಲಾಗಿ ಆ ಜಾಗಕ್ಕೆ ಕರಣ್ ಅನಂತ್ ಹಾಗೂ ಅನಿರುದ್ಧ ಮಹೇಶ್ ಬಂದಿದ್ದಾರೆ.
ಆರೇಳು ವರ್ಷಗಳ ಹಿಂದೆ ನಟ ರಿಷಬ್ ಶೆಟ್ಟಿ ಮಾಡುತ್ತಿದ್ದ ಬಿಸಿನೆಸ್ ಇದಂತೆ!
ಗಿರಿಕೃಷ್ಣ ಚಿತ್ರದಿಂದ ಹೊರಗೆ ಬಂದಿದ್ದು ಯಾಕೆ ಎಂಬ ಪ್ರಶ್ನೆಗೆ ಖುದ್ದು ಗಿರಿಕೃಷ್ಣ ಉತ್ತರಿಸಿದ್ದಾರೆ. ಮೈಸೂರಿನಲ್ಲಿ ಚಿತ್ರೀಕರಣ ಆರಂಭವಾದ ಕೆಲವು ದಿನಗಳ ನಂತರ ಗಿರಿಕೃಷ್ಣ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಚಿತ್ರೀಕರಣ ನಿಲ್ಲಿಸುವಂತಿರಲಿಲ್ಲ. ಕಲಾವಿದರ ಡೇಟ್ಸ್, ಶೂಟಿಂಗ್ ಪ್ಲಾನ್ ಎಲ್ಲವೂ ಫೈನಲ್ ಆಗಿದೆ. ಹೀಗಾಗಿ ನಿರ್ದೇಶಕನ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದಾರೆ ಗಿರಿಕೃಷ್ಣ.
‘ಹರಿಕಥೆ ಅಲ್ಲಾ ಗಿರಿಕಥೆ ಚಿತ್ರದಿಂದ ನಾನು ಹೊರ ಬರಲು ಕಾರಣ ನನ್ನ ಆರೋಗ್ಯ ಸಮಸ್ಯೆ. ಚಿತ್ರಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಬೇರೆಯವರು ನಿರ್ದೇಶಕರನ್ನಾಗಿ ಮಾಡಿ ಶೂಟಿಂಗ್ ಮುಂದುವರಿಸಿದ್ದಾರೆ. ಈಗ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಈಗಾಗಲೇ ಎರಡು ಚಿತ್ರಕಥೆಗಳನ್ನು ಮಾಡಿಕೊಂಡಿದ್ದು, ಸದ್ಯದಲ್ಲೇ ಘೋಷಣೆ ಮಾಡಲಿದ್ದೇವೆ’ ಎನ್ನುತ್ತಾರೆ ಗಿರಿಕೃಷ್ಣ.
ರಿಷಬ್ ಶೆಟ್ಟಿ ಫ್ರೆಂಚ್ ಬಿಯರ್ಡ್ ಲುಕ್ ವೈರಲ್; ಕಾಮೆಂಟ್‌ನಲ್ಲಿ ಶುರುವಾಯ್ತು ಫ್ಯಾನ್ಸ್ ಚರ್ಚೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.