ನನಗೆ ಮಗು ಬೇಡ, ನನ್ನ ನಿರ್ಧಾರವನ್ನು ಅಪ್ಪ-ಅಮ್ಮ ಮತ್ತು ಗಂಡ ಒಪ್ಪಿಕೊಂಡಿದ್ದಾರೆ: ಹಿತಾ ಚಂದ್ರಶೇಖರ್

By Vaishnavi ChandrashekarFirst Published Apr 5, 2024, 3:33 PM IST
Highlights

ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿ ಇರುತ್ತಿರುವ ಹಿತಾ ಚಂದ್ರಶೇಖರ್ ತಾಯಿತನದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಏನೆಂದು ಹಂಚಿಕೊಂಡಿದ್ದಾರೆ. 
 

ಕನ್ನಡ ಚಿತ್ರರಂಗದ ಹಿರಿಯ ನಟ ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಕರ್ ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಮಾಡಲಿಂಗ್‌ನಿಂದ ಜರ್ನಿ ಆರಂಭಿಸಿದ  ಹಿತಾ ಜಾಹೀರಾತುಗಳಲ್ಲಿ, ವೆಬ್‌ ಸೀರಿಸ್‌ ಮತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟ ಕಿರಣ್ ಶ್ರೀನಿವಾಸ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಮಾರು ನಾಲ್ಕು ವರ್ಷಗಳು ಕಳೆದಿದೆ. ಈ ನಡುವೆ ಮಕ್ಕಳು ಬೇಡ ಅನ್ನೋ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನೆಂದು ಬಿಚ್ಚಿಟ್ಟಿದ್ದಾರೆ. 

'ನಾನು ಮಕ್ಕಳನ್ನು ಹೊಂದಲು ಬಯಸುವುದಿಲ್ಲ. ಸ್ನೇಹಿತರಾಗಿದ್ದಾಗ ನಾವು ಈ ವಿಚಾರಗಳನ್ನು ಚರ್ಚೆ ಮಾಡಿದ್ವಿ...ನನಗೆ ಫೀಲಿಂಗ್ ಇಲ್ಲ. ಯಾಕೆ ನನ್ನದೇ ಆದಂತ ಮಗು ಮಾಡಿಕೊಳ್ಳಬೇಕು ಅನ್ನೋ ಫೀಲಿಂಗ್ ಇಲ್ಲ ಎಂದು ಹೇಳಿದ್ದೆ. ಅಲ್ಲದೆ ಏನೆಲ್ಲಾ ನಡೆಯುತ್ತಿದೆ ಜಗತ್ತಿನಲ್ಲಿ, ಈಗ ಇನ್ನೊಂದು ಮಗು ತರಬೇಕಾ ಈ ಪ್ರಪಂಚಕ್ಕೆ ಅನ್ನೋ ಪ್ರಶ್ನೆ ಇತ್ತು ನನಗೆ. ಪತಿ ಕಿರಣ್ ಶ್ರೀನಿವಾಸ್‌ಗೂ ಇದೇ ರೀತಿಯ ಆಲೋಚನೆಗಳು ಇತ್ತು. ಪೇರೆಂಟಿಂಗ್‌ನ ಎಂಜಾಯ್ ಮಾಡುವುದಕ್ಕೆ ನಮ್ಮದೇ ಮಗು ಆಗಿರಬೇಕು ಅಂತೇನು ಇಲ್ಲ...ಅದರಲ್ಲೂ ಮಗುನೇ ಆಗಿರಬೇಕು ಅಂತೇನು ಇಲ್ಲ. ನಾಯಿ ಸಾಕಿ ಕೂಡ ನಾವು ಆ ಪ್ರೀತಿ ಕೊಡಬಹುದು. ತುಂಬಾ ಜನರು ಕೇಳಿದ್ದಾರೆ ನಿನಗ ವಯಸ್ಸಾದ ಮೇಲೆ ಯಾರು ನೋಡಿಕೊಳ್ಳುತ್ತಾರೆ? ಆಮೇಲೆ ಜೀವನಕ್ಕೆ ಏನು ಮಾಡುತ್ತೀಯಾ? ನಿಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಎಂದು. ಎಷ್ಟೋಂದು ಜನ ಅವರ ಅಪ್ಪ-ಅಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರಾ? ಈಗ ಸೊಸೈಟಿಯಲ್ಲಿ ಏನಾಗುತ್ತಿದೆ ಅನ್ನೋದನ್ನು ಪ್ರಶ್ನೆ ಮಾಡೋಣ. ಮಕ್ಕಳು ಅಮೇರಿಕಾದಲ್ಲಿ ಇದ್ದಾರೆ ಅಪ್ಪ ಅಮ್ಮ ಮನೆಯಲ್ಲಿ ಒಬ್ಬರೆ ಇರುತ್ತಾರೆ ಅಥವಾ ವೃದ್ಧಾಶ್ರಮದಲ್ಲಿ ಬಿಟ್ಟಿರುತ್ತಾರೆ. ಅದು ಬೇಡ...ಈಗ ಪೇರೆಂಟ್ಸ್‌ಗಳಲ್ಲಿ ಒಬ್ಬರು ಹೋಗಿ ಬಿಟ್ಟರೆ ಸಿಂಗಲ್ ಪೇರೆಂಟ್ ಇರುತ್ತಾರೆ ಆಗ? ಹೆಣ್ಣುಮಕ್ಕಳು ಮದುವೆಯಾ ತಾಯಿ ಒಬ್ಬರೇ ಇರುತ್ತಾ ಅಗ? ಮಕ್ಕಳ ಮಾಡಿಕೊಳ್ಳಬೇಡಿ ಎಂದು ನಾನು ಯಾರಿಗೂ ಹೇಳಲ್ಲ. ಆದರೆ ಇದು ನನ್ನ ಸ್ವಂತ ನಿರ್ಧಾರ ಇದು' ಎಂದು ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ನಲ್ಲಿ ಹಿತಾ ಮತನಾಡಿದ್ದಾರೆ. 

ಕೂದಲು ಕಲರ್ ಹಾಕಿಸಿ ಎಡವಟ್ಟು ಮಾಡಿಕೊಂಡ ನಟಿ; ಮುಖ ನೋಡಿ ಹೆದರಿಕೊಳ್ಳಬೇಡಿ, ವಿಡಿಯೋ ವೈರಲ್

ಈ ವಿಚಾರವನ್ನು ನನ್ನ ತಂದೆ ತಾಯಿ ಜೊತೆ ಹಂಚಿಕೊಂಡಿದ್ದೀನಿ ಅವರು ನನಗೆ ಸಪೋರ್ಟ್ ಮಾಡುತ್ತಿದ್ದಾರೆ. ಈ ವಿಚಾರವನ್ನು ಕೇಳಿ ದೊಡ್ಡಪ್ಪ ದೊಡಮ್ಮ ಅವ್ರು ಇವ್ರು ಕಾಮೆಂಟ್ ಮಾಡಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ನನ್ನ ಅಪ್ಪ ಅಮ್ಮನ ನಿರ್ಧಾರ ಮತ್ತು ಸಪೋರ್ಟ್‌ ನನಗೆ ಮುಖ್ಯವಾಗುತ್ತದೆ. ನಮ್ಮ ಮಾವ ಇದುವರೆಗೂ ಯಾವ ಕಾರಣಕ್ಕೂ ಪ್ರಶ್ನೆ ಮಾಡಿಲ್ಲ ತುಂಬಾ ಸಪೋರ್ಟ್ ಮಾಡುತ್ತಾರೆ. ನನ್ನ ಸ್ನೇಹಿತರ ಸರ್ಕಲ್‌ನಲ್ಲಿ ಅನೇಕರ ನಿರ್ಧಾರ ಮಾಡಿದ್ದಾರೆ ಮಕ್ಕಳು ಬೇಡ ಅಂತ. ವಯಸ್ಸು ಆದಾಗ ನಾವು ಒಬ್ಬರನ್ನೊಬ್ಬರು ನೋಡಿಕೊಳ್ಳೋಣ ಮಕ್ಕಳು ಯಾಕೆ ಅಂತ ಯೋಚನೆ ಮಾಡಿದ್ದೀವಿ ಎಂದು ಹಿತಾ ಹೇಳಿದ್ದಾರೆ. 

click me!