ಬೇರೆಯವರ ಜೊತೆ ಹೋಲಿಕೆ ಯಾಕೆ, ನಿಮ್ಮ ಟ್ರೂ ಕೆಪಾಸಿಟಿ ಕಂಡುಕೊಳ್ಳಿ; ವೈರಲ್ ಆಯ್ತು ನಟ ಯಶ್ ಮಾತು!

Published : Apr 05, 2024, 01:12 PM ISTUpdated : Apr 05, 2024, 01:16 PM IST
 ಬೇರೆಯವರ ಜೊತೆ ಹೋಲಿಕೆ ಯಾಕೆ, ನಿಮ್ಮ ಟ್ರೂ ಕೆಪಾಸಿಟಿ ಕಂಡುಕೊಳ್ಳಿ; ವೈರಲ್ ಆಯ್ತು ನಟ ಯಶ್ ಮಾತು!

ಸಾರಾಂಶ

ನಟ ಯಶ್ ಈಗ ಗೀತೂ ಮೋಹನ್‌ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಲಯಾಳಂ ನಿರ್ದೇಶಕಿ ಆಗಿರುವ ಗೀತೂ ಮೋಹನ್ ದಾಸ್ ಅವರು ಮಾಡಿಕೊಂಡ ಕಥೆ ಯಶ್ ಅವರಿಗೆ ಇಷ್ಟವಾಗಿ ಅದಕ್ಕೆ ರಾಕಿಂಗ್ ಸ್ಟಾರ್ ಸಹಿ ಮಾಡಿದ್ದು ಹಲವರಿಗೆ ಅಚ್ಚರಿ ತಂದಿತ್ತು.

ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Ysh) ಅವರು ಲೈಫ್ ಟಿಪ್ಸ್ ಹೇಳಿದ್ದಾರೆ. ನೀವು ಯಾವತ್ತೇ ಇದ್ದರೂ ಬೇರೆಯವರ ಜತೆ ನಿಮ್ಮನ್ನು ಕಂಪೇರ್ ಮಾಡಿಕೊಂಡು ಅವರನ್ನು ಕಾಂಪೀಟ್ ಮಾಡಲು ಹೋಗಬೇಡಿ. ನೀವು ನಿಮ್ಮ ಟ್ರೂ ಕೆಪಾಸಿಟಿಯನ್ನು ಅರಿತುಕೊಂಡರೆ ಸಾಕು. ನಿನ್ನೆ ನೀವೇನು ಮಾಡಿದ್ದೀರೋ ಅದನ್ನು ಅಥವಾ ಇನ್ನೇನನ್ನೋ ಮಾಡಲು ಹೊರಟರೆ ಅದನ್ನು ಇವತ್ತು ಹಿಂದೆ ಮಾಡಿದ್ದಕ್ಕಿಂತ ಚೆನ್ನಾಗಿ ಮಾಡಿ. ಏಕೆಂದರೆ, ನಿನ್ನೆ ಮಾಡಿದ್ದನ್ನು ಇವತ್ತು ಹಾಗೆಯೇ ಮಾಡಿದರೆ ಅದನ್ನು ಬೆಳವಣಿಗೆ ಎನ್ನಬಹುದು. 

ರಾಕಿಂಗ್ ಸ್ಟಾರ್ ಮಾತನಾಡಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅವರ ಮಾತುಗಳನ್ನು ಹಲವರು ಇನ್‌ಸ್ಪಿರೇಷನ್ ಆಗಿ ತೆಗೆದುಕೊಳ್ಳುತ್ತಾರೆ. ಏಕೆಂದರೆ, ನಟ ಯಶ್ ತಾವು ಕಂಡ ಕನಸನ್ನು ಬಹುಬೇಗ ನನಸು ಮಾಡಿಕೊಂಡು ಹಲವರಿಗೆ ಮಾದರಿಯಾಗಿದ್ದಾರೆ. ಯಶ್ ನಟನೆಯ ಕೆಜಿಎಫ್ ಸೂರ್ ಹಿಟ್ ಆಗುವ ಮೂಲಕ ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದೆ. ಈಗ ಕನ್ನಡ ಚಿತ್ರಗಳ ಮಾರ್ಕೆಟ್ ಬಹಳಷ್ಟು ವಿಸ್ತರಣೆ ಕಂಡಿದೆ. 

ಮೇಕಪ್‌ ಪಾತ್ರದಲ್ಲಿ ವಿಭಿನ್ನತೆ ತರಲಾರದು ಎಂದ್ಬಿಟ್ರು ಸಾಯಿ ಪಲ್ಲವಿ; ಎಂಥ ಮಾತು ಅಂತಿದಾರಲ್ರೀ!

ನಟ ಯಶ್ ಈಗ ಗೀತೂ ಮೋಹನ್‌ ದಾಸ್ (Geethu Mohandas) ನಿರ್ದೇಶನದ 'ಟಾಕ್ಸಿಕ್' (Toxic) ಸಿನಿಮಾ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಲಯಾಳಂ ನಿರ್ದೇಶಕಿ ಆಗಿರುವ ಗೀತೂ ಮೋಹನ್ ದಾಸ್ ಅವರು ಮಾಡಿಕೊಂಡ ಕಥೆ ಯಶ್ ಅವರಿಗೆ ಇಷ್ಟವಾಗಿ ಅದಕ್ಕೆ ರಾಕಿಂಗ್ ಸ್ಟಾರ್ ಸಹಿ ಮಾಡಿದ್ದು ಹಲವರಿಗೆ ಅಚ್ಚರಿ ತಂದಿತ್ತು. ಏಕೆಂದರೆ ಕೆಜಿಎಫ್ ಬಳಿಕ ನಟ ಯಶ್, ಹಲವು ಕಥೆಗಳನ್ನು ಕೇಳಿಯೂ ಯಾವುದನ್ನೂ ಸಹ ಒಪ್ಪಿಕೊಂಡಿರಲಿಲ್ಲ. ಆದರೆ, ಟಾಕ್ಸಿಕ್ ಕಥೆ ಜಗತ್ತನ್ನೇ ಪ್ರೇರಣೆ ಮಾಡುವಂತೆ ಇದೆ ಎಂಬ ಮಾತು ಕೇಳಿಬರುತ್ತಿದ್ದು ಅದಕ್ಕಾಗಿಯೇ ನಟ ಯಶ್, ಈ ಕಥೆಯನ್ನು ಒಪ್ಪಿಕೊಂಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

ಸರ್ಜರಿ ಬಳಿಕ ಮತ್ತೆ ಬಣ್ಣ ಹಚ್ಚಿದ ಚೆಲುವೆ 'ಪಟಾಕ'..; ನಿಖಿಲ್ ಸಿದ್ದಾರ್ಥ್ 'ಸ್ವಯಂಭು'ನಲ್ಲಿ ನಭಾ ನಟೇಶ್!

ಅಂದಹಾಗೆ, ನಟ ಯಶ್ ಜೋಡಿಯಾಗಿ ನಟಿ ಸಾಯಿ ಪಲ್ಲವಿ ()Sai Pallavi) ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಇನ್ನೂ ಹಲವು ಪ್ರಖ್ಯಾತ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಯಶ್, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ 'ರಾಮಾಯಣ' ಸಿನಿಮಾದಲ್ಲಿ (Ramayana) ಸಹ ಒಟ್ಟಾಗಿ ನಟಿಸುತ್ತಿದ್ದಾರೆ. ರಾಮಾಯಣದಲ್ಲಿ ನಟ ಯಶ್ ರಾವಣನಾಗಿ ದರ್ಶನ್ ನೀಡಲಿದ್ದು, ಸಾಯಿ ಪಲ್ಲವಿ ಸೀತೆಯಾಗಿ, ರಣಬೀರ್ ಕಪೂರ್ ರಾಮಾನಾಗಿ ನಟಿಸಲಿದ್ದಾರೆ. 

ನೀವು ಇದನ್ನ ಬೋಲ್ಡ್ ಬಟ್ಟೆ ಅಂತ ಕರಿತೀರಾ ಅಂದ್ರೆ ನಾನು ಬೋಲ್ಡ್ ಕ್ಯಾರೆಕ್ಟರ್‌ ಮಾಡ್ತೀನಿ; ನಟಿ-ಗಾಯಕಿ ಚೈತ್ರಾ ಆಚಾರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ