ವಸಿಷ್ಠಿ ಯಾಕೆ ಆಯ್ಕೆ ಮಾಡಬೇಕು? ಮತ್ತೊಬ್ಬರ ಕೆಲಸದಲ್ಲಿ ಮೂಗು ತೂರಿಸುವುದಿಲ್ಲ: ಹರಿಪ್ರಿಯಾ

Published : Mar 02, 2024, 01:03 PM IST
ವಸಿಷ್ಠಿ ಯಾಕೆ ಆಯ್ಕೆ ಮಾಡಬೇಕು? ಮತ್ತೊಬ್ಬರ ಕೆಲಸದಲ್ಲಿ ಮೂಗು ತೂರಿಸುವುದಿಲ್ಲ: ಹರಿಪ್ರಿಯಾ

ಸಾರಾಂಶ

ಮದುವೆ ನಂತರ ಮತ್ತೆ ಸಿನಿಮಾ ಕಥೆ ಕೇಳಲು ಶುರು ಮಾಡಿ ಹರಿಪ್ರಿಯಾ..ವಸಿಷ್ಠ ಪಾತ್ರ ಏನೂ ಇಲ್ಲ ಎಂದ ನಟಿ....  

ಕನ್ನಡ ಚಿತ್ರರಂಗದ ಸೆಲೆಬ್ರಿಟಿ ಕಪಲ್ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ 2023 ಜನವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲಿಂದ ಬಣ್ಣ ಬ್ರೇಕ್ ತೆಗೆದುಕೊಂಡ ಪ್ರಿಯಾ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಸಖತ್ ಬ್ಯುಸಿಯಾಗಿದ್ದರು. ಸಿನಿಮಾ ಯಾವಾಗ? ಸಿನಿಮಾ ಮಾಡಲ್ವಾ? ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದವರಿಗೆ ಈಗ ನಟಿ ಉತ್ತರ ಕೊಟ್ಟಿದ್ದಾರೆ. 

ಹರಿಪ್ರಿಯಾ- ವಸಿಷ್ಠ ಮದುವೆ ರಿಜಿಸ್ಟರ್; ಯಾರಿಗೂ ತಿಳಿಯದ ಸತ್ಯ ಬಿಚ್ಚಿಟ್ಟ ನಟಿ!

ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾ ಕಥೆಗಳನ್ನು ಕೇಳುತ್ತಿರುವ ಪ್ರಿಯಾ 'ಜನರಲ್ಲಿ ತಪ್ಪು ತಿಳುವಳಿಕೆ ಇದೆ, ವಸಿಷ್ಠ ಸಿಂಹ ಮೂಲಕವೇ ಸಿನಿಮಾ ಕಥೆಗಳನ್ನು ನಾನು ಕೇಳುತ್ತಿರುವುದು ಎಂದು. ಅದು ಸುಳ್ಳು' ಎಂದು ಟೈಮ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಪ್ರಿಯಾ ಮಾತನಾಡಿದ್ದಾರೆ. 

ಮೂಗು ಚುಚ್ಚಿಸಿಕೊಂಡ ವಿಡಿಯೋ ವೈರಲ್; ವಸಿಷ್ಠ ಸಿಂಹ ಡಿಮ್ಯಾಂಡ್ ಎನ್ನುತ್ತಿದ್ದವರಿಗೆ ಉತ್ತರ ಕೊಟ್ಟ ಹರಿಪ್ರಿಯಾ

'ಮದುವೆ ಆದ ಮೇಲೆ ನಾನು ಸಿನಿಮಾ ಮಾಡಬೇಕು ಅಂದ್ರೆ ಗಂಡನ ಒಪ್ಪಿಗೆ ಪಡೆಯಬೇಕು ಇಲ್ಲ ನನ್ನ ಗಂಡನೇ ಮೊದಲು ಕಥೆ ಕೇಳಬೇಕು ಅನ್ನೋ ಕಲ್ಪನೆ ಇದೆ. ಅದು ಸುಳ್ಳು ನನ್ನ ವೃತ್ತಿ ಬದುಕು ಕಟ್ಟಿಕೊಂಡಿರುವುದು ನಾನು ನಾನೇ ನಿರ್ಧಾರ ಮಾಡುವುದು. ನನ್ನ ಕೆಲಸಗಳ ಬಗ್ಗೆ ವಸಿಷ್ಠ ತುಂಬಾ ಸಪೋರ್ಟ್ ಮಾಡುತ್ತಾರೆ. ಆದರೆ ನಾವು ಒಬ್ಬರ ಕೆಲಸ ಬಗ್ಗೆ ಮತ್ತೊಬ್ಬರು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಆಯ್ಕೆ ಮಾಡುವ ಕಥೆಗಳ ಬಗ್ಗೆ ವಸಿಷ್ಠಗೆ ತೊಂದರೆ ಇಲ್ಲ. ದಿನ ನಿತ್ಯ ಹೇಗಿದೆ ಶೂಟಿಂಗ್ ಹೇಗಿದೆ ಎಂದು ಮಾತನಾಡಬಹುದು ಆದರೆ ಕಥೆಗಳ ಬಗ್ಗೆ ಅಲ್ಲ. ನಮ್ಮ ದೃಷ್ಠಿಯನ್ನು ಮತ್ತೊಬ್ಬರ ಮೇಲೆ ಹೇರುವುದಿಲ್ಲ' ಎಂದು ಹರಿಪ್ರಿಯಾ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?