ಅಮೂಲ್ಯ ಮಕ್ಕಳಿಗೆ 2ನೇ ಹುಟ್ಟುಹಬ್ಬ: ಮೊದಲ ಬಾರಿ ವಿಮಾನ ಹತ್ತಿ ಶಿರಡಿ ದರ್ಶನ- ನಟಿ ಹೇಳಿದ್ದೇನು?

By Suvarna News  |  First Published Mar 1, 2024, 9:42 PM IST

ಚೆಲುವಿನ ಚಿತ್ತಾರ ಬೆಡಗಿ ಅಮೂಲ್ಯ ಅವರ ಅವಳಿ ಮಕ್ಕಳಿಗೆ ಇಂದು 2ನೇ ಬರ್ತ್​ಡೇ ಸಂಭ್ರಮ: ಮೊದಲ ಬಾರಿ ವಿಮಾನ ಹತ್ತಿ ಶಿರಡಿ ದರ್ಶನ ಮಾಡಲಾಗಿದೆ. ನಟಿ ಹೇಳಿದ್ದೇನು? 
 


ಸ್ಯಾಂಡಲ್​ವುಡ್​ ನಟಿ ಅಮೂಲ್ಯ ಮತ್ತು ಜಗದೀಶ್ ಚಂದ್ರ ದಂಪತಿಯ ಮುದ್ದಿನ ಅವಳಿ ಮಕ್ಕಳಾದ ಅಥರ್ವ್‌ ಮತ್ತು ಆಧವ್‌ಗೆ ಮಾರ್ಚ್​ 1 ಅಂದ್ರೆ ಇಂದು ಎರಡನೆಯ ಹುಟ್ಟುಹಬ್ಬದ ಸಂಭ್ರಮ. ಮೊದಲ  ವರ್ಷದ ಹುಟ್ಟುಹಬ್ಬದಲ್ಲಿ ನಟಿ  ಮಕ್ಕಳೊಂದಿಗೆ  ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದರೆ, ಇಂದು ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ, ದರ್ಶನ ಪಡೆದರು.  ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ದಂಪತಿ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ನಮ್ಮ ಮುದ್ದು ಮಕ್ಕಳಾದ ಅಥರ್ವ್‌ ಮತ್ತು ಆಧವ್ ಅವರ ಎರಡನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಇಂದು ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ, ದರ್ಶನ ಪಡೆಯಲಾಯಿತು‌ ಎಂದಿರುವ ನಟಿ, ಅಥರ್ವ್ - ಆಧವ್ ಅವರ ಮೊದಲ ವಿಮಾನಯಾನ ಇದಾಗಿದ್ದು, ಬಾನಂಗಳದ ಕ್ಷಣವನ್ನು ಕುತೂಹಲದಿಂದ ಆನಂದಿಸಿದರು ಎಂದು ಬರೆದುಕೊಂಡಿದ್ದಾರೆ‌‌.

ವೈರಲ್​ ವಿಡಿಯೋದಲ್ಲಿ ದಂಪತಿ ಮಕ್ಕಳ ಜೊತೆ ವಿಮಾನದಲ್ಲಿ ಪ್ರಯಾಣಿಸುವುದನ್ನು ನೋಡಬಹುದು. ಅಥರ್ವ್​ ಮತ್ತು ಆಧವ್​ ಮೊದಲ ವಿಮಾನಯಾನವನ್ನು ಬಹು ಕುತೂಹಲದಿಂದ ಪ್ರಯಾಣಿಸುತ್ತಿರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದಾಗಿದೆ. ಅಂದಹಾಗೆ ದಂಪತಿ 2017ರಲ್ಲಿ ವಿವಾಹವಾಗಿದ್ದರು.  ಈಚೆಗೆ ದಂಪತಿ  ದುಬೈ ಪ್ರವಾಸ ಕೈಗೊಂಡಿದ್ದರು. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ನಟಿ ಬರೆದುಕೊಂಡಿದ್ದರು. ದುಬೈನಲ್ಲಿ ಸ್ಕೈ ಡೈವ್ ಮಾಡಬೇಕು ಅನ್ನೋ  ಆಸೆ ಆಗಿತ್ತು. ನನ್ನ ಆಸೆಯನ್ನ ಪತಿ ಜಗದೀಶ್  ಈಡೇರಿಸಿದ್ದಾರೆ ಎಂದಿದ್ದರು. 

Tap to resize

Latest Videos

ದೀಪಿಕಾ ಗರ್ಭಿಣಿಯಾದ ಸುದ್ದಿ ರಿವೀಲ್​ ಆಗ್ತಿದ್ದಂತೆಯೇ ಮಗುವಿನ ಬಿಗ್​ ಅಪ್​ಡೇಟ್​ ನೀಡಿದ ರಣವೀರ್​ ಸಿಂಗ್​!

ಅಂದಹಾಗೆ, ಸ್ಯಾಂಡಲ್‌ವುಡ್‌ನಲ್ಲಿ ಗೋಲ್ಡನ್ ಕ್ವೀನ್ ಎಂದೇ ಖ್ಯಾತಿ ಪಡೆದವರು ನಟಿ ಅಮೂಲ್ಯ. ಮದುವೆಯಾಗಿ, ಅವಳಿ ಮಕ್ಕಳಾದ ಮೇಲೆ  ನಟನೆಯಿಂದ ಇವರು ದೂರ ಉಳಿದಿದ್ದಾರೆ. ಮಕ್ಕಳ ಲಾಲನೆ - ಪಾಲನೆಯಲ್ಲಿ ಅಮೂಲ್ಯ ತೊಡಗಿದ್ದಾರೆ. 7 ವರ್ಷಗಳ ಹಿಂದೆ ಮುಗುಳು ನಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೂಲ್ಯ ಇದೀಗ ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ.  ಮತ್ತೆ ಕ್ಯಾಮರಾ ಮುಂದೆ ಬರಲು ಅಮೂಲ್ಯ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.   ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಮೂಲ್ಯ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪ್ರಜ್ವಲ್ ದೇವರಾಜ್ ಮತ್ತು ಗುರುದತ್ತ ಗಾಣಿಗ ಅವರ ಬಹು ನಿರೀಕ್ಷಿತ ಸಿನಿಮಾ ಕರಾವಳಿ ಮೂಲಕ ಅಮೂಲ್ಯ ಮತ್ತೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ. 

ಈಚೆಗೆ, ಹುಲಿಯುಗುರು ಪ್ರಕರಣ ಸಕತ್​ ಸದ್ದು ಮಾಡಿದ್ದಾಗ ನಟಿ ಅಮೂಲ್ಯ ಹೆಸರು ಕೇಳಿಬಂದಿತ್ತು. ಬಿಗ್​ಬಾಸ್​ ವರ್ತೂರು ಸಂತೋಷ್​ ಹುಲಿಯುಗುರಿನ ಪೆಂಡೆಂಟ್​ ಧರಿಸಿ ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ  ಯಾವ ಯಾವ ಸೆಲೆಬ್ರಿಟಿಗಳ ಹಾಗೂ ಅವರ ಕುಟುಂಬಸ್ಥರ ಕೊರಳಲ್ಲಿ ಹುಲಿ ಉಗುರು ಇದೆ ಎಂಬ ಬಗ್ಗೆ ಎಲ್ಲರ ಚಿತ್ತ ಹರಿದಿತ್ತು. ಆಗ  ನಟಿ ಅಮೂಲ್ಯ ಅವರ ಅವಳಿ ಮಕ್ಕಳ ಮೇಲೆ ಕಣ್ಣು ಹೋಗಿತ್ತು. ಇಬ್ಬರು ಮುದ್ದಾದ ಮಕ್ಕಳ ಕುತ್ತಿಗೆಯಲ್ಲಿಯೂ ಹುಲಿ ಉಗುರಿನ ಪೆಂಡೆಂಟ್​ ಇದ್ದ ಹಿನ್ನೆಲೆಯಲ್ಲಿ ಏನಾದರೂ ಗಲಾಟೆಯಾಗಬಹುದು ಎಂದು ನಟಿ  ಖುದ್ದು  ಸ್ಪಷ್ಟನೆ ಕೊಟ್ಟಿದ್ದರು.  ತಮ್ಮ ಮಕ್ಕಳ ಕೊರಳಲ್ಲಿ ಇರುವುದು ಅಸಲಿ ಹುಲಿಯುಗುರು ಅಲ್ಲ, ಬದಲಿಗೆ ಅವು ಸಿಂಥೆಟಿಕ್​ ಹುಲಿ ಉಗುರು ಎಂದು ಹೇಳಿದ್ದರು. 

ಮಕ್ಕಳ ನಾಮಕರಣದ ವೇಳೆ ಇದನ್ನು ಧರಿಸಲಾಗಿತ್ತು. ಅದರೆ ಅವು ಅಸಲಿಯಲ್ಲ. ಇಂಥ ಸಿಂಥೆಟಿಕ್​ ಉಗುರುಗಳು  500-600ಗೆ ಸಿಗುತ್ತವೆ ಎಂದಿರುವ ನಟಿ, ಅರಣ್ಯ ಅಧಿಕಾರಿಗಳು ಪರಿಶೀಲನೆಗೆ ಬಂದರೆ ಖಂಡಿತಾ ಅವುಗಳನ್ನು ನೀಡುತ್ತೇನೆ ಎಂದು ಹೇಳಿದ್ದಾರೆ. ಇದು ನಿಜ ಎಂದು ತಾವು ಮೊದಲು ನಂಬಿದುದಾಗಿ ನಟಿ ಹೇಳಿದ್ದಾರೆ. ನಾನು ಮೊದಲು ಅದು ನಿಜವಾದ ಹುಲಿ ಉಗುರು ಎಂದುಕೊಂಡಿದ್ದು ಆದರೆ ಅಲ್ಲ. ಇವು ಸಿಂಥೆಟಿಕ್ ಉಗುರು ಅಷ್ಟೇ ಅಂದಿದ್ದಾರೆ ಅಮೂಲ್ಯಾ. ಮಕ್ಕಳ ಬರ್ತ್​ಡೇಗೆ ತಮ್ಮ ಅಮ್ಮ ಕೊಟ್ಟ ಸರಕ್ಕೆ ಈ ನಕಲಿ ಹುಲಿ ಉಗುರು ಹಾಕಿರುವುದಾಗಿ ಅವರು ಸ್ಪಷ್ಟನೆ ಕೊಟ್ಟಿದ್ದರು. ನನ್ನ ಅಮ್ಮ, ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆ ಚೈನ್​ ಕೊಟ್ಟರು. ಅದಕ್ಕೊಂದು ಪೆಂಡೆಂಟ್​ ಇರಲಿ ಎಂದು ನಾನೇ ಡಿಸೈನ್​ ಮಾಡಿಸಿದ್ದೆ. ಇವು ಸಿಂಥೆಟಿಕ್​ ಉಗುರುಗಳು ಎಂದು ನಟಿ ಅಮೂಲ್ಯಾ ಹೇಳಿದ್ದಾರೆ. ಮೊದಲಾದರೆ ಹುಲಿ ಉಗುರುಗಳು ರಾಜಾರೋಷವಾಗಿ ಸಿಗುತ್ತಿದ್ದವು. ಆದರೆ ಇದೀಗ ಅದು ಅಪರಾಧ ಆಗಿರುವ ಕಾರಣ, ಉಗುರಿಗೆ ಲಕ್ಷಾಂತರ ರೂಪಾಯಿಗಳು ಇವೆ. ಆದರೆ ನಮ್ಮ ಮಕ್ಕಳಿಗೆ ಹಾಕಿರುವ ಉಗುರು 500-600 ರೂಪಾಯಿ ಒಳಗೆ ಸಿಗುತ್ತವೆ ಎಂದಿದ್ದರು. ಗಲಾಟೆಯ ಬಳಿಕ ಆ ಪೆಂಡೆಂಟ್​ ಮಕ್ಕಳ ಕುತ್ತಿಗೆಯಲ್ಲಿ ಕಾಣಿಸುತ್ತಿಲ್ಲ. 
 
ಸಪ್ತಸಾಗರದಾಚೆ ಎಲ್ಲೋ ಚಿತ್ರದ ಎ ಮತ್ತು ಬಿ ಸೈಡ್‌ ಒಂದೇ ನಿಮಿಷದಲ್ಲಿ ನೋಡಿ! ಇಲ್ಲಿದೆ ವಿಡಿಯೋ...

click me!