ಶೂಟಿಂಗ್‌ ಸೆಟ್‌ನಲ್ಲಿ ಅಜಯ್‌ ಸಿಡುಕುಮೂತಿ ಸಿದ್ದಪ್ಪನಂತಿದ್ದರು: ನಟಿ ಬೃಂದಾ ಆಚಾರ್ಯ

Published : Oct 08, 2026, 09:00 AM IST
Partner Kannada Movie

ಸಾರಾಂಶ

ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ಜೋಡಿಯಾಗಿ ನಟಿಸಿರುವ ‘ಪಾರ್ಟ್ನರ್’ ಚಿತ್ರದ ‘ಲವಲವಿಕೆ’ ಹಾಡು ಬಿಡುಗಡೆಯಾಗಿದೆ. ಇಂದಿನ ಜನರೇಷನ್‌ನ ಸಂಬಂಧಗಳ ಜೊತೆಗೆ ಮಾನವೀಯ ಭಾವನೆಗಳನ್ನು ಚಿತ್ರದಲ್ಲಿ ಹೇಳಲಾಗಿದೆ.

ಅಜಯ್‌ ರಾವ್‌ ಹಾಗೂ ಬೃಂದಾ ಆಚಾರ್ಯ ಜೋಡಿಯಾಗಿ ನಟಿಸಿರುವ ‘ಪಾರ್ಟ್ನರ್‌’ ಚಿತ್ರದ ಹಾಡು ಬಿಡುಗಡೆ ಆಗಿದೆ. ಕವಿರಾಜ್‌ ಸಾಹಿತ್ಯ ಬರೆದಿರುವ, ಕಾರ್ತಿಕ್‌, ರಮ್ಯ ಅಭ್ಯಂಕರ್‌ ಹಾಡಿರುವ ಈ ಹಾಡು ‘ಲವಲವಿಕೆ’ ಹೆಸರಿನಲ್ಲಿ ಬಂದಿದೆ. ನಕುಲ್‌ ಅಭಯಂಕರ್‌ ಸಂಗೀತ ಇದೆ. ‘ಚಿತ್ರದ ಪ್ರತಿ ಹಾಡು ಇಷ್ಟೇ ಚೆನ್ನಾಗಿರುತ್ತದೆ. ಕಲರ್‌ಫುಲ್‌ ಥೀಮ್‌ನಲ್ಲಿ ಹಾಡುಗಳು ಮೂಡಿ ಬಂದಿವೆ. ನಾವು ಅಂದುಕೊಂಡಂತೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ’ ಎನ್ನುತ್ತಾರೆ ನಿರ್ದೇಶಕ ಶಿವತೇಜಸ್‌.

ಅಜೇಯ್‌ ರಾವ್‌, ‘ಇದು ನನ್ನ ಮನಸ್ಸಿಗೆ ತುಂಬಾ ಹತ್ತಿರವಾದ ಕಂಟೆಂಟ್‌ ಸಿನಿಮಾ. ಮಾನವೀಯ ಸಂಬಂಧಗಳು, ಭಾವುಕ ಸನ್ನಿವೇಶಗಳು ಚಿತ್ರದ ಹೈಲೈಟ್‌. ಈ ಸಿನಿಮಾ ಗೆಲ್ಲುವ ಬಗ್ಗೆ ನೂರಕ್ಕೆ ನೂರರಷ್ಟು ನಂಬಿಕೆ ನನಗೆ ಇದೆ’ ಎಂದರು.

ಬೃಂದಾ ಆಚಾರ್ಯ, ‘ಇಡೀ ತಂಡದ ಅದ್ಭುತವಾದ ಬಾಂಡಿಂಗ್‌ನಿಂದ ಮೂಡಿಬಂದಿರುವ ಸಿನಿಮಾ ಇದು. ಆರಂಭದಲ್ಲಿ ಅಜೇಯ್‌ ಅವರು ಯಾರನ್ನೂ ಮಾತಾಡಿಸ್ತಿದ್ದಿಲ್ಲ. ಸಿಡುಕ್ಮೂತಿ ಸಿದ್ದಪ್ಪನ್‌ ಥರ ಇದ್ದರು. ಹೋಗ್ತಾ ಹೋಗ್ತಾ ಸ್ವೀಟ್‌ ಸಿದ್ದಪ್ಪ ಆಗಿ ಹೋದರು‌. ಹಾಡುಗಳ ಟೈಮಲ್ಲಿ ನನಗೆ ತುಂಬಾ ಹೇಳಿಕೊಟ್ಟರು’ ಎಂದರು. ಇನ್ನು ಹರೀಶ್‌ ದೇವಿತಂದ್ರೆ ಚಿತ್ರವನ್ನು ನಿರ್ಮಿಸಿದ್ದಾರೆ. ರಂಗಾಯಣ ರಘು, ಚಿತ್ಕಲಾ ಚಿತ್ರದಲ್ಲಿ ನಟಿಸಿದ್ದಾರೆ.

ಮನಸಿಗೆ ತುಂಬಾ ಹತ್ತಿರವಾದ ಚಿತ್ರ

ಅಜಯ್‌ ರಾವ್‌ ಹಾಗೂ ಬೃಂದಾ ಆಚಾರ್ಯ ಜೋಡಿಯ ‘ಪಾರ್ಟ್ನರ್‌’ ಚಿತ್ರದ ಜೆನ್‌ ಜೀ ಸ್ಟೈಲಿನ ಹಾಡು ಬಿಡುಗಡೆ ಆಗಿದೆ. ನಾಗಾರ್ಜುನ ಶರ್ಮಾ ಬರೆದಿರುವ ಈ ಹಾಡಿಗೆ ಕುನಾಲ್‌ ಗಂಜಾವಾಲಾ ಧ್ವನಿಯಾಗಿದ್ದಾರೆ. ನಕುಲ್‌ ಅಭಯಂಕರ್‌ ಸಂಗೀತ ಇದೆ. ಈಗಿನ ಜನರೇಷನ್‌ನ ಲವ್‌, ಬ್ರೇಕಪ್‌, ಲಿವಿಂಗ್‌ ಟುಗೆದರ್‌ ಅಂಶಗಳೊಂದಿಗೆ ಜೀವನ ಎಂದರೆ ಏನು ಎಂಬುದನ್ನು ಹೇಳುವ ಚಿತ್ರ ಇದಾಗಿದೆ. ಹರೀಶ್‌ ದೇವಿತಂದ್ರೆ ನಿರ್ಮಿಸಿ, ಶಿವತೇಜಸ್‌ ನಿರ್ದೇಶಿಸಿರುವ ಚಿತ್ರವಿದು.

ಅಜಯ್‌ ರಾವ್‌, ‘ಇದು ನನ್ನ ಮನಸಿಗೆ ತುಂಬಾ ಹತ್ತಿರವಾದ ಚಿತ್ರ. ನನ್ನ ಹೃದಯದ ಒಂದು ಭಾಗವನ್ನೇ ಇದರಲ್ಲಿ ಹಾಕಿದ್ದೇನೆ. ಕೆಲ ಸಿನಿಮಾಗಳು ಆರಂಭದಿಂದಲೇ ಏನೋ ಒಂದು ಮ್ಯಾಜಿಕ್‌ ಮಾಡುತ್ತೆ ಅನಿಸುತ್ತದೆ. ಇದು ಅಂಥದ್ದೇ ಚಿತ್ರ’ ಎಂದರು. ಹೆಚ್.ಪಿ.ಆರ್. ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಹರೀಶ್ ದೇವಿತಂದ್ರೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಸುಜ್ಞಾನ್ ಅವರ ಛಾಯಾಗ್ರಹಣ, ನಕುಲ್ ಅಭಯಂಕರ್ ಅವರ ಸಂಗೀತ ನಿರ್ದೇಶನ, ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

NANA PATEKAR DEATH: ನಮ್ಮನ್ನಗಲಿದ ನಟ ನಾನಾ ಪಾಟೇಕರ್; ಕನ್ನಡದ 'ಯಕ್ಷ' ಸಿನಿಮಾದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು
ಆಗ ಥಿಯೇಟರ್‌ ಟಾರ್ಚ್‌ ಬಾಯ್‌, ಈಗ ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕ: ಯಾರೀತ?