
ಕನ್ನಡದಲ್ಲೂ ನಟಿಸಿದ್ದ ಬಾಲಿವುಡ್‌ನ ಖ್ಯಾತ ನಟ ನಾನಾ ಪಾಟೇಕರ್ (Nana Patekar) ಅವರು ಇಂದು, 08 ಅಕ್ಟೋಬರ್ 2026ರಂದು ಗೋವಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ 5:20ಕ್ಕೆ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಸತತ 45 ನಿಮಿಷಗಳ ಕಾಲ ಸಿಪಿಆರ್ (CPR) ನೀಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಹಿರಿಯ ನಟ ನಾನಾ ಪಾಟೇಕರ್ (75) ಅವರು ಇಂದು ಬೆಳಗ್ಗೆ 5:20ಕ್ಕೆ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಸತತ 45 ನಿಮಿಷಗಳ ಕಾಲ ಸಿಪಿಆರ್ (CPR) ನೀಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಮೆಡಿಕೋ-ಲೀಗಲ್ ಕೇಸ್ (MLC) ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ್ ಸಾಲ್ಕರ್ ತಿಳಿಸಿದ್ದಾರೆ.
2010ರಲ್ಲಿ ನಟ ನಾನಾ ಪಾಟೇಕರ್ ಅವರು ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. 'ಲೂಸ್ ಮಾದ' ಖ್ಯಾತಿಯ ನಟ ಯೋಗೇಶ್ ನಟನೆಯ 'ಯಕ್ಷ' ಸಿನಿಮಾದಲ್ಲಿ ನಟಿಸುವ ಮೂಲಕ ನಾನಾ ಪಾಟೇಕರ್ ಅವರು ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿ, ಇಲ್ಲಿನ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು.
ಯೋಗೇಶ್ ಅಭಿನಯದ 'ಯಕ್ಷ' (2010) ಚಿತ್ರದಲ್ಲಿ ಬಾಲಿವುಡ್‌ನ ಈ ಖ್ಯಾತ ನಟ ನಾನಾ ಪಾಟೇಕರ್ ಅವರು ಯೋಗರಾಜ್ ಪುಲಕೇಶಿ (Yograj Pulakeshi) ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ನಾಯಕ ಯಕ್ಷ ರಾಜ್ ಪುಲಿಕೇಶಿ ತಂದೆ, ಯೋಗರಾಜ್ ಪುಲಕೇಶಿಯಾಗಿ ಕಾಣಿಸಿಕೊಂಡಿದ್ದಾರೆ.
75 ವರ್ಷದ ನಾನಾ ಪಾಟೇಕರ್ ಇಂದು ನಮ್ಮನ್ನಗಲುವ ಮೂಲಕ ಚಿತ್ರರಂಗಕ್ಕೆ ಅಪಾರ ನಷ್ಟವುಂಟಾಗಿದೆ ಎಂದು ಚಿತ್ರರಂಗದ ಗಣ್ಯರು, ಸಹಕಲಾವಿದರು ಸೇರಿದಂತೆ ಅಪಾರ ಅಭಿಮಾನಿಗಳು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅಂದಹಾಗೆ, ನಟ ನಾನಾ ಪಾಟೇಕರ್ ಅವರಿಗೆ 2 ಬಾರಿ ಪೋಷಕ ನಟ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು.
ಪ್ರಸಿದ್ಧ ಬಹುಭಾಷಾ ನಟ ನಾನಾ ಪಾಟೇಕರ್ ಅವರು ತಮ್ಮ ಸುದೀರ್ಘ ನಟನಾ ವೃತ್ತಿಜೀವನದಲ್ಲಿ ಮುಖ್ಯವಾಗಿ ಹಿಂದಿ, ಮರಾಠಿ, ತಮಿಳು ಮತ್ತು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಒಟ್ಟು 75 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1978 ರ 'ಗಮನ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಅಪ್ರತಿಮ ಸಂಭಾಷಣೆ ಮತ್ತು ವಿಶಿಷ್ಟ ನಟನಾ ಶೈಲಿಯಿಂದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.