ಹಾಸಿಗೆಯಲ್ಲಿ ಸಿಗುವ 11 ನಿಮಿಷಕ್ಕೆ ಮದ್ವೆ ಆಗ್ಬೇಕಾ ಫಿಸಿಕಲ್ ರಿಲೇಷನ್‌ ಟ್ಯಾಗ್ ಯಾಕೆ: ಸುಷ್ಮಾ ವೀರ್

Published : Apr 22, 2024, 03:53 PM IST
ಹಾಸಿಗೆಯಲ್ಲಿ ಸಿಗುವ 11 ನಿಮಿಷಕ್ಕೆ ಮದ್ವೆ ಆಗ್ಬೇಕಾ ಫಿಸಿಕಲ್ ರಿಲೇಷನ್‌ ಟ್ಯಾಗ್ ಯಾಕೆ: ಸುಷ್ಮಾ ವೀರ್

ಸಾರಾಂಶ

ಪ್ರೀತಿ ಇದ್ದಾಗ ಮದುವೆ ಯಾಕೆ ಬೇಕು ಎಂದು ಸುಷ್ಮಾ ವೀರ್ ಬೋಲ್ಡ್‌ ಹೇಳಿಕೆ ನೀಡಿದ್ದಾರೆ. ಮದುವೆ ಆಗದೇ ಇರಲು ಕಾರಣ ಏನೆಂದು ರಿವೀಲ್ ಮಾಡಿದ್ದಾರೆ.  

ಕನ್ನಡ ಕಿರುತೆರೆ ನಟಿ ಸುಷ್ಮಾ ವೀರ್‌ಗೆ ಕೋಪ ಜಾಸ್ತಿ, ತುಂಬಾ ಜಗಳ ಮಾಡುತ್ತಾರೆ, ಆರೋಗ್ಯ ಸಮಸ್ಯೆ ಇದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಕಾರಣ ಬಿಗ್ ಬಾಸ್ ರಿಯಾಲಿಟಿ ಶೋ, ಅಲ್ಲಿ ನಡೆಯುತ್ತಿದ್ದ ಬ್ಯಾಗ್ರೌಂಡ್‌ ಗೇಮ್‌ ಬಗ್ಗೆ ಇತ್ತೀಚಿಗೆ ರಿವೀಲ್ ಮಾಡಿದ್ದರು. ಸುಷ್ಮಾ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಕೇಳಿ ಅಯ್ಯೋ ಪಾಪ ಎಂದವರು ಯಾಕೆ ಮದುವೆ ಆಗಿಲ್ಲ? ಎಷ್ಟು ವರ್ಷ ಒಂಟಿಯಾಗಿ ಇರುತ್ತೀರಾ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದರು. ಈ ಪ್ರಶ್ನೆಗಳಿಗೆ ಸ್ವತಃ ಸುಷ್ಮಾ ಉತ್ತರ ಕೊಟ್ಟಿದ್ದಾರೆ. 

'ಮದುವೆಗಿಂತ ನಾನು ಫ್ರೆಂಡ್‌ಶಿಪ್‌ನಲ್ಲಿ ನಂಬಿಕೆ ಇಡುತ್ತೀನಿ ಅದರಲ್ಲಿ ಒಳ್ಳೆ ಸ್ಪರ್ಶ ಯಾವುದು ಕೆಟ್ಟ ಸ್ಪರ್ಶ ಯಾವುದು ಎಂದು ಅರ್ಧವಾಗುತ್ತದೆ. ನನಗೆ ಸ್ಟಿಮ್ಯುಲೆಶನ್ ಅಂದ್ರೆ ಗುಡ್ ಥಿಂಕಿಂಗ್, ಒಳ್ಳ ಮಾತುಕಥೆ, ವಾದ-ವಿವಾದ ಮತ್ತು ಗುದ್ದಾಟ ಇದೆಲ್ಲಾ ಒಂದು ಸಂಬಂಧದಲ್ಲಿ ಮುಖ್ಯವಾಗುತ್ತದೆ. ಹೀಗಿರುವಾಗ ಮದುವೆಯಾಗಿ ಏನು ಮಾಡಬೇಕು? ಹಾಸಿಗೆಯಲ್ಲಿ ಸಿಗುವ 11 ನಿಮಿಷಕ್ಕಾ?'ಎಂದು ರಘುರಾಮ್ ಯುಟ್ಯೂಬ್ ಚಾನೆಲ್‌ನಲ್ಲಿ ಸುಷ್ಮಾ ವೀರ್ ಮಾತನಾಡಿದ್ದಾರೆ.

ಬಿಗ್ ಬಾಸ್‌ ಮಾಡಿದ ನಿರ್ಲಕ್ಷ್ಯದಿಂದ 6 ಸಲ ಆಪರೇಷನ್ ಆಯ್ತು: ಸುಷ್ಮಾ ವೀರ್ ಗರಂ

'ಜೀವನಕ್ಕೆ ಸೆಕ್ಯೂರಿಟಿ ಬೇಕು ಅಂತ ಕೆಲವರು ಮದುವೆಯಾಗುತ್ತಾರೆ ಇಲ್ಲವಾದರೆ ಗಂಡ ವ್ಯಕ್ತಿತ್ವ ಅಷ್ಟೇ ಮುಖ್ಯವಾಗುತ್ತದೆ. ಅಥವಾ ನಮ್ಮಲ್ಲಿ ಇರುವ ಇನ್‌ಸೆಕ್ಯೂರಿಟಿನ ಹೋಗಲಾಡಿಸಲು ಮದುವೆಯಾಗುವುದಾ? ಪ್ರೀತಿ ಇದೆ ಅಂದ್ಮೇಲೆ ಮದುವೆ ಯಾಕೆ ಬೇಕು? ಇದಕ್ಕೆ ಫಿಸಿಕಲ್ ರಿಲೇಷನ್‌ಶಿಪ್‌ ಅನ್ನೋ ಟ್ಯಾಗ್‌ ಬೇಕಾ?. ಹೊಂದಾಣಿಗೆ ಅರ್ಥ ಮಾಡಿಕೊಳ್ಳುವ ಗುಣ ಸ್ನೇಹಿತರಲ್ಲೂ ಇದೆ. Me time ಅಂತ ಸಿಕ್ಕಾಗ ನನ್ನನ್ನು ನಾನು ಪ್ರೀತಿಸುವುದಕ್ಕೆ ಮತ್ತೊಬ್ಬರು ನನ್ನನ್ನು ಪ್ರೀತಿಸಲಿ ಅಥವಾ ನನ್ನನ್ನು ನಾನು ಪ್ರೀತಿಸುವುದು ಬಿಟ್ಟು ಅವರನ್ನು ಪ್ರೀತಿಸಬೇಕು ಅಂತಲ್ಲ. ಈಗ ಜೀವನದಲ್ಲಿ ನನಗೆ ಏನು ಕೊರತೆ ಇದೆ? ಮದುವೆ ಜೀವನದಲ್ಲಿ ಏನೇಲ್ಲಾ ಖುಷಿ ಸಿಗುತ್ತದೆ ನನಗೆ ಮದುವೆ ಆಗದೇ ಸಿಕ್ಕಿದೆ. ಸಿನಿಮಾ ಆರ್ಟ್‌ ನನ್ನ ಜೀವನ ಅದರಲ್ಲಿ ಮಾನವೀಯತೆ ನನ್ನ ಸೋಲ್ ಆಗಿರುತ್ತದೆ' ಎಂದು ಸುಷ್ಮಾ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್