'ಗುಡ್ ನ್ಯೂಸ್‌ ಯಾವಾಗ' ಅಂತ ಜನರು ಕೇಳೋದು ನಿಲ್ಲಿಸಿದರೆ ಜೀವನ ಸಾರ್ಥಕ ಆಗುತ್ತೆ: ಅನು ಪ್ರಭಾಕರ್

By Vaishnavi ChandrashekarFirst Published Jul 30, 2024, 9:42 AM IST
Highlights

ಹೆಣ್ಣುಮಕ್ಕಳ ಮದುವೆ ನಂತರ ಎದುರಿಸುವ ಪ್ರಶ್ನೆ ಹಿಂದೆ ಎಷ್ಟು ನೋವು ಇರುತ್ತದೆ ಎಂದು ನಟಿ ಅನು ಪ್ರಭಾಕರ್ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಅದ್ಭುತ ನಟಿ ಅನು ಪ್ರಭಾಕರ್ 'ನನ್ನಮ್ಮ ಸೂಪರ್ ಸ್ಟಾರ್ 3' ಹಾಗೂ ಇನ್ನಿತ್ತರ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನಸ್ಸಿಗೆ ತುಂಬಾ ಹತ್ತಿರವಾಗುತ್ತಿದ್ದಾರೆ. ಸಾಮಾನ್ಯವಾಗಿ ಮದುವೆ ಆದ ಮೇಲೆ ಹೆಣ್ಣು ಮಕ್ಕಳು ಗುಡ್ ನ್ಯೂಸ್ ಕೊಡಲಿ ಎಂದು ಬಯಸುವ ಜನರಿಗೆ ಕಿವಿ ಮಾತು ಹೇಳಿದ್ದಾರೆ....

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3ರಲ್ಲಿ ಒಂದು ಡ್ಯಾನ್ಸ್ ಡ್ರಾಮಾದಲ್ಲಿ ಮಾಡುತ್ತಾರೆ ಅದರಲ್ಲಿ ಒಂದು ಹೆಣ್ಣು ಮದ್ವೆಯಾಗಿ 8 ವರ್ಷ ಆದ್ರೂ ಮಗು ಆಗಿರುವುದಿಲ್ಲ. ಆ ಸಮಯದಲ್ಲಿ ಬಂಜೆ ಅದು ಇದು ಅಂತ ಮಾತುಗಳನ್ನು ಕೇಳಬೇಕು...ಕೊನೆಗೂ ಗರ್ಭಿಣಿ ಆಗುತ್ತಾಳೆ ಆದ್ರೆ ಆ ಮಗು ಫಿಸಿಕಲಿ ಚಾಲೇಂಜ್ಡ್‌ ಆಗಿರುತ್ತದೆ. ಇದನ್ನು ನೋಡಿ ನಾನು ತುಂಬಾ ಅಳು ಬಂದಿದೆ. My womb My decision ಅನ್ನೋ ಆರ್ಟಿಕಲ್‌ನಲ್ಲಿ ಒಂದು ಕಡೆ ಓದಿದೆ ಅದರಲ್ಲಿ ಪ್ರಶ್ನೆ ಮಾಡಬೇಡಿ ಎಂದು. ಮಕ್ಕಳು ಆಗಿಲ್ಲ ಅಂದ್ರೂ ಕಾಮೆಂಟ್ ಮಾಡ್ತಾರೆ, ಮೂರು ಮಕ್ಕಳು ಆದ್ರೂ ಕಾಮೆಂಟ್ ಮಾಡ್ತಾರೆ ಹೀಗಾಗಿ ಆ ಸ್ಕಿಟ್‌ ನೋಡಿ 'ಗುಡ್‌ ನ್ಯೂಸ್ ಯಾವಾಗ' ಎಂದು ಕೇಳುವುದು 10 ಜನ ನಿಲ್ಲಿಸಿದರು ಮೆಸೇಜ್ ಕೊಟ್ಟು ಸಾರ್ಥಕ ಆಯ್ತು ಅಂದೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಅನು ಪ್ರಭಾಕರ್ ಮಾತನಾಡಿದ್ದಾರೆ. 

Latest Videos

ನನ್ನ ದೇಹವನ್ನು ಶೋ ಆಫ್‌ ಮಾಡ್ತೀನಿ, ಯಾವ ನಾಚಿಕೆನೂ ಇಲ್ಲ: ನಿರೂಪಕಿ ಅನಸೂಯ

'ಪದೇ ಪದೇ ಗರ್ಭಪಾತವಾಗಿದ ಹೆಣ್ಣಿನ ದೈಹಿಕ ನೋವು, ಮಾನಸಿಕ ನೋವು, ತಾಯಿ ಆಗೋಕೆ ಆಗ್ತಿಲ್ಲ ಅನ್ನೋ ನೋವು..ಇಷ್ಟು ನೋವುಗಳ ನಡುವೆ ಗುಡ್ ನ್ಯೂಸ್ ಯಾವಾಗ ಅನ್ನೋ ಪ್ರಶ್ನೆ ಎಷ್ಟು ನೋವು ಕೊಡ್ಬೋದು? ಪರಿಸ್ಥಿತಿ ಏನು ಅಂತ ಗೊತ್ತಿಲ್ಲ ಅಂದ್ರೆ ಪ್ರಶ್ನೆ ಕೇಳಬೇಡಿ' ಎಂದು ಅನು ಪ್ರಭಾಕರ್ ಹೇಳಿದ್ದಾರೆ.

ದರ್ಶನ್‌ ಬ್ಯಾನರ್‌ಗೆ ಚಪ್ಪಲಿ ಪೂಜೆ, ಹಂದಿ ಸಗಣಿ ಎಸೆದು ಮನನೊಂದ ಅಭಿಮಾನಿಗಳು; ವಿಡಿಯೋ ವೈರಲ್!

'ನಾವು ದೊಡ್ಡವರಾಗುತ್ತಿದ್ದಂತೆ ಸೆನ್ಸಿಟಿವ್ ಆಗಿ ಬಿಡುತ್ತೀವಿ. ಬಾಯಿ ಇದೆ ಅಂತ ಸುಮ್ಮನೆ ಕಾಮೆಂಟ್ ಮಾಡಬೇಡಿ. ಸೋಷಿಯಲ್ ಮೀಡಿಯಾದಲ್ಲಿ ಇದ್ದೀರಿ ಎಂದು ಕಾಮೆಂಟ್ ಮಾಡಬೇಡಿ. ಪಾಸಿಟಿವ್ ಹಾಕಿದ್ದರೂ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ ಅಂದ್ರೆ ಅವರಲ್ಲಿ ಏನೋ ಸಮಸ್ಯೆ ಆಗಿದೆ ಅನಿಸಲು ಶುರು ಮಾಡಿದೆ. ಪರ್ಸನಲ್ ಆಗಿ ಕಾಮೆಂಟ್ ಮಾಡಿದಾಗ ಬೇಸರ ಆಗುತ್ತದೆ ಆದರೂ ಎನರ್ಜಿ ಯಾಕೆ ವೇಸ್ಟ್‌ ಮಾಡಬೇಕು ಎಂದು ಬ್ಲಾಕ್ ಮಾಡಿ ಸುಮ್ಮನಾಗುತ್ತೀನಿ' ಎಂದಿದ್ದಾರೆ ಅನು ಪ್ರಭಾಕರ್.

click me!