ಶಂಕರ್‌ ನಾಗ್ ಕಂಡ್ರೆ ಡಾ ರಾಜ್‌ಕುಮಾರ್‌ಗೆ ಆಗ್ತಾ ಇರ್ಲಿಲ್ಲ ಅನ್ನೋದು ಶುದ್ಧ ಸುಳ್ಳು, ಇಲ್ಲಿ ನೋಡಿ!

By Shriram Bhat  |  First Published Jul 29, 2024, 10:32 PM IST

ನಟಿ, ಕಾಸ್ಟ್ಯೂಮರ್ ಸುಂದರಶ್ರೀ ಅವರು ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು. ಗುಬ್ಬಿ ವೀರಣ್ಣ ಕಂಪನಿ ಪರಂಪರೆಯ ಸುಂದರಶ್ರೀ ಅವರು ನಟರಾದ ಡಾ ರಾಜ್‌ಕುಮಾರ್ ಹಾಗೂ ಶಂಕರ್‌ ನಾಗ್ ಕಾಲದಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರವರು. ಒಂದು ಸಂದರ್ಶನದಲ್ಲಿ ಅವರು ರಾಜ್‌ಕುಮಾರ್ ಹಾಗು ಶಂಕರ್‌ ನಾಗ್ ಅವರಿಬ್ಬರ...


ವರನಟ ಡಾ ರಾಜ್‌ಕುಮಾರ್ (Dr Rajkumar) ಹಾಗೂ ನಟ-ನಿರ್ದೇಶಕ ಶಂಕರ್‌ ನಾಗ್ (Shankar Nag) ಅವರಿಗೂ ಸರಿಯಾಗಿ ಆಗಿ ಬರ್ತಿರಲಿಲ್ಲ ಎನ್ನುವ ವರ್ಗ ಒಂದಿದೆ. ಆದರೆ, ಅದೆಲ್ಲಾ ಶುದ್ಧ ಸುಳ್ಳು, ಅವರಿಬ್ಬರೂ ತುಂಬಾ ಅನ್ಯೋನ್ಯವಾಗಿಯೇ ಇದ್ದರು ಎನ್ನುವ ವರ್ಗವೂ ಇನ್ನೊಂದಿದೆ. ಎರಡನ್ನೂ ನೋಡಿ ತಲೆ ಕೆಡಸಿಕೊಂಡು, ಏನೋ ಗೊತ್ತಿಲ್ಲ, ಅವ್ರಿಬ್ರ ಮಧ್ಯೆ ಏನಿತ್ತೋ ಇಲ್ವೋ ಅನ್ನುವ ಹೊಸ ವರ್ಗ ಇತ್ತೀಚೆಗೆ ಹುಟ್ಟಿಕೊಂಡಿದೆ. ಆದರೆ, ಅವರಿಬ್ಬರೂ ತುಂಬಾ ಚೆನ್ನಾಗಿದ್ದರು, ಪರಸ್ಪರ ಗೌರವ-ಪ್ರೀತಿ ಇತ್ತು ಎಂದಿದ್ದಾರೆ ಅವರೊಂದಿಗೆ ಕೆಲಸ ಮಾಡಿರುವ ಹಿರಿಯ ಕಲಾವಿದೆ ಸುಂದರಶ್ರೀ ಗುಬ್ಬಿ. 

ನಟಿ, ಕಾಸ್ಟ್ಯೂಮರ್ ಸುಂದರಶ್ರೀ ಅವರು ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು. ಗುಬ್ಬಿ ವೀರಣ್ಣ ಕಂಪನಿ ಪರಂಪರೆಯ ಸುಂದರಶ್ರೀ ಅವರು ನಟರಾದ ಡಾ ರಾಜ್‌ಕುಮಾರ್ ಹಾಗೂ ಶಂಕರ್‌ ನಾಗ್ ಕಾಲದಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರವರು. ಒಂದು ಸಂದರ್ಶನದಲ್ಲಿ ಅವರು ರಾಜ್‌ಕುಮಾರ್ ಹಾಗು ಶಂಕರ್‌ ನಾಗ್ ಅವರಿಬ್ಬರ ಸಂಬಂಧದ ಬಗ್ಗೆ ಕಣ್ಣಾರೆ ನೋಡಿದ ಸಂಗತಿ ಬಹಿರಂಗ ಪಡಿಸಿದ್ದಾರೆ. ಹಾಗಿದ್ರೆ ಅವರೇನು ಹೇಳಿದ್ದಾರೆ ಗೊತ್ತಾ?, ಕೆಳಗಿದೆ ನೋಡಿ.. 

Tap to resize

Latest Videos

undefined

ವೈರಲ್ ವೀಡಿಯೋದಲ್ಲಿ ಕನ್ನಡದ ಕುವರಿ ನಟಿ ಸೌಂದರ್ಯ ಹೇಳಿದ್ದೇನು? ಕೇಳಿ ನೋಡಿ.. ಎಲ್ಲೆಲ್ಲೂ ಸೌಂದರ್ಯವೇ..!

ರಾಜಣ್ಣ ಹಾಗು ಶಂಕರಣ್ಣ ಇಬ್ಬರೂ ಒಬ್ಬರಿಗೊಬ್ಬರು ಗೌರವ ಕೊಡುತ್ತಿದ್ದರು. ಅವರಿಬ್ಬರೂ ಒಟ್ಟಿಗೇ ಕೆಲಸ ಮಾಡಿದ್ದ ಒಂದು ಮುತ್ತಿನ ಕಥೆ (1987) ಸಿನಿಮಾಗೆ ನಾನೇ ಕಾಸ್ಟ್ಯೂಮ್ ಡಿಸೈನರ್ ಆಗಿ ಹೋಗ್ಬೇಕಿತ್ತು. ಆದರೆ ನನ್ನ ಮಗಳು ಚಿಕ್ಕವಳು ಅನ್ನೋ ಕಾರಣಕ್ಕೆ ನಾನೇ ಹೋಗದೇ ಆ ಅವಕಾಶ ಕಳೆದುಕೊಂಡೆ. ಆದರೆ, ನಾನು ಅವರಿಬ್ಬರ ಜೊತೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಶಂಖರ್‌ ನಾಗ್ ಅವರ 'ಹುಲಿ ಹೆಬ್ಬುಲಿ'ಯಲ್ಲಿ ಕೂಡ ನಾನೂ ಇದ್ದೆ. ಡಾ ರಾಜ್‌ ಹಾಗೂ ಶಂಕರಣ್ಣ ಇಬ್ಬರೂ ತುಂಬಾ ಅನ್ಯೂನ್ಯವಾಗಿ ಇದ್ದಿದ್ದನ್ನು ನಾನೇ ಕಣ್ಣಾರೆ ನೋಡಿದ್ದೇನೆ. 

ಶಂಕರಣ್ಣ ಮತ್ತು ರಾಜಣ್ಣ ಸಿಕ್ಕಾಗ, ಒಟ್ಟಿಗೇ ಇದ್ದಾಗ ಚೆನ್ನಾಗಿ ಮಾತಾಡಿಕೊಳ್ತಾ ಇದ್ರು. ಶಂಕರ್‌ ನಾಗ್ ಅವರ ಬುದ್ಧಿವಂತಿಕೆ ಬಗ್ಗೆ ರಾಜಣ್ಣ ಅವ್ರಿಗೆ ತುಂಬಾ  ಗೌರವ, ಅವರ ಒಳ್ಳೇ ಸ್ವಭಾವದಿಂದ ಪ್ರೀತಿಯೂ ಇತ್ತು. ಹಾಗೇ, ರಾಜಣ್ಣನ ಪಂಕ್ಚ್ಯೂಯಾಲಿಟಿ ಬಗ್ಗೆ ಶಂಕರ್‌ ನಾಗ್ ಅವರಿಗೂ ಅಷ್ಟೇ ಗೌರವ ಇತ್ತು. ಶಂಕರ್‌ ನಾಗ ಅವರು ಯಾವಾಗಲೂ ಏನಾದ್ರೂ ಒಂದು ಕೆಲಸ ಮಾಡ್ತಾನೇ ಇರ್ತಿದ್ರು. ರಾಜಣ್ಣ ಅವರ ಸಮಯ ಪ್ರಜ್ಞೆ ತುಂಬಾ ಚೆನ್ನಾಗಿತ್ತು, ಅವರು ಯಾವತ್ತೂ ಲೇಟ್‌ ಆಗಿ ಬರ್ತಾ ಇರ್ಲಿಲ್ಲ. ಹೀಗಾಗಿ ಶಂಕರಣ್ಣಗೆ ಕೂಡ ರಾಜಣ್ಣ ಅಂದ್ರೆ ತುಂಬಾ ಗೌರವ ಇತ್ತು.

ಪ್ಯಾನ್ ಇಂಡಿಯಾ ಟ್ರೆಂಡ್‌ಗೆ ಬೈದರೆ ಸಮಸ್ಯೆಗೆ ಪರಿಹಾರವೇ..? ಮೀನಿಗೆ ನೀರು ಕುಡಿಯಲೂ ಸ್ಪೆಷಲ್ ಕ್ಲಾಸ್ ಬೇಕೇ?

ಇನ್ನು ಗಾಸಿಪ್‌ಗಳು ಎಲ್ಲಾ ಕಾಲಕ್ಕೂ ಇರ್ತವೆ. ಅವುಗಳಿಗೆ ಯಾವುದೇ ಆಧಾರ ಇಲ್ಲ.  ನಾನು ಕಣ್ಣಾರೆ ಕಂಡಿದ್ದು ಹೇಳ್ತಾ ಇದೀನಿ. ಡಾ ರಾಜ್‌ಕುಮಾರ್ ಹಾಗು ಶಂಕರಣ್ಣ ಇಬ್ಬರೂ ತುಂಬಾ ಅನ್ಯೋನ್ಯವಾಗಿಯೇ ಇದ್ರು. ಅದರಲ್ಲಿ ಎಳ್ಳಷ್ಟೂ ಸಂಶಯ ಇಲ್ಲ. ಅವ್ರಿಬ್ರೂ ಒಟ್ಟಾಗಿ ಕೆಲಸ ಮಾಡಿದ್ದ 'ಒಂದು ಮುತ್ತಿನ ಕಥೆ' ನನಗೆ ಮಿಸ್ ಆಗೋಯ್ತಲ್ಲಾ ಅಂತ ಇವತ್ತಿಗೂ ನಂಗೆ ಬೇಜಾರಿದೆ. ಆದ್ರೆ ಏನ್ ಮಾಡೋದು. ನನ್ ಮಗು ಚಿಕ್ಕದಿತ್ತಲ್ಲಾ' ಎಂದಿದ್ದಾರೆ ಕಲಾವಿದೆ ಸುಂದರಶ್ರೀ ಗುಬ್ಬಿ.

click me!