ವೈರಲ್ ವೀಡಿಯೋದಲ್ಲಿ ಕನ್ನಡತಿ ಸೌಂದರ್ಯ ಹೇಳಿದ್ದೇನು? ಕೇಳಿ ನೋಡಿ.. ಎಲ್ಲೆಲ್ಲೂ ಸೌಂದರ್ಯವೇ..!

By Shriram Bhat  |  First Published Jul 29, 2024, 7:01 PM IST

ತೆಲುಗು ಚಿತ್ರರಂಗದಲ್ಲಿ ಮಿಂಚಿದ ನಟಿ ಸೌಂದರ್ಯಾ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಎನ್ನಬಹುದು. ಹೆಸರಿಗೆ ತಕ್ಕಂತೆ ಸುಂದರಿ, ಮುದ್ದುಮುದ್ದಾದ ಮಾತು, ಅಮೋಘ ನಟನೆ, ಮುಖವೇ ಗ್ಲಾಮರಸ್, ಮೈ ಮುಚ್ಚಿಕೊಂಡರೂ ಎಲ್ಲೆಲ್ಲೂ ಸೌಂದರ್ಯವೇ..


ಕನ್ನಡ ಮೂಲದ, ತೆಲುಗು ಚಿತ್ರರಂಗದಲ್ಲಿ ಮಿಂಚಿದ ನಟಿ ಸೌಂದರ್ಯಾ (Soundarya) ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಎನ್ನಬಹುದು. ಹೆಸರಿಗೆ ತಕ್ಕಂತೆ ಸುಂದರಿ, ಮುದ್ದುಮುದ್ದಾದ ಮಾತು, ಅಮೋಘ ನಟನೆ, ಮುಖವೇ ಗ್ಲಾಮರಸ್, ಮೈ ಮುಚ್ಚಿಕೊಂಡರೂ ಎಲ್ಲೆಲ್ಲೂ ಸೌಂದರ್ಯವೇ ಎನ್ನುವಂತಿದ್ದರು ನಟಿ ಸೌಂದರ್ಯ. ತೆಲುಗಿನಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟಿ ಸೌಂದರ್ಯ, ಕನ್ನಡದಲ್ಲಿ ಮೊದಲ ಸಿನಿಮಾ ಸೇರಿದಂತೆ, ಬೆರಳೆಣಿಕೆ ಚಿತ್ರಗಳಲ್ಲಷ್ಟೇ ನಟಿಸಿದ್ದಾರೆ. 

ಅಂಥ ಸೌಂದರ್ಯ, ಮೂವತ್ತು ವರ್ಷ ಮುಗಿಯುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ. ಆದರೆ, ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಮಾಡಿದ ಸಾಧನೆ, ಏರಿದ ಎತ್ತರ ಮಾತ್ರ ಅನನ್ಯ ಎನ್ನಬಹುದು. ಸಾವನ್ನು ದುರಂತ  ಎನ್ನಬಹುದಾದರೂ ನಟಿ ಸೌಂದರ್ಯ ಅವರ ಜೀವನವನ್ನು ಸುಂದರ ಎಂದು ಹೇಳಲೇಬೇಕು. ನಟಿ ಸೌಂದರ್ಯ ಮಾತನಾಡಿರುವ ವೀಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆ ವಿಡಿಯೋ ಕ್ಲಿಪಿಂಗ್‌ನಲ್ಲಿ ಸೌಂದರ್ಯ ಅದೇನು ಹೇಳಿದ್ದಾರೆ ಗೊತ್ತಾ? 

Tap to resize

Latest Videos

undefined

ಪ್ಯಾನ್ ಇಂಡಿಯಾ ಟ್ರೆಂಡ್‌ಗೆ ಬೈದರೆ ಸಮಸ್ಯೆಗೆ ಪರಿಹಾರವೇ..? ಮೀನಿಗೆ ನೀರು ಕುಡಿಯಲೂ ಸ್ಪೆಷಲ್ ಕ್ಲಾಸ್ ಬೇಕೇ?

ನಟಿ ಸೌಂದರ್ಯ 'ನಾನು ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟಾಗ ನನಗೆ ಇಲ್ಲಿ ಇಷ್ಟೊಂದು ಪ್ರೀತಿ-ಅಭಿಮಾನ ಸಿಗುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ನಾನು ನಿಜವಾಗಿಯೂ ಅದೃಷ್ಟವಂತೆ. ಇಲ್ಲಿ ಪ್ರತಿ ಮನೆಮನೆಯಲ್ಲೂ ನನ್ನನ್ನು ಮನೆಮಗಳಂತೆ ನೋಡುತ್ತಾರೆ. ನನ್ನ ಸಿನಿಮಾಗಳನ್ನು ನೋಡಿ, ಬೆಳೆಸಿ ನನ್ನನ್ನು ಆಶೀರ್ವದಿಸಿದ್ದೀರಿ. ನಾನು ಇಲ್ಲಿ ಇಷ್ಟು ದೊಡ್ಡ ನಟಿಯಾಗಿ, ಕಲಾವಿದೆಯಾಗಿ ಬೆಳೆಯುತ್ತೇನೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ ನಾನು ಕಾಣದೇ ಇರುವ ಕನಸು ನನಸಾಗಿದೆ. 

ನಿಮ್ಮ ಅಭಿಮಾನವನ್ನು, ಋಣವನ್ನು ನಾನು ಯಾವತ್ತಿಗೂ ಮರೆಯಲಾರೆ. ನನಗೆ ಈ ತೆಲುಗು ಪ್ರೇಕ್ಷಕರು, ತೆಲುಗು ಮಣ್ಣಿನ ಜನರು ನೀಡಿರುವ ಪ್ರೀತಿ-ಅಭಿಮಾನಕ್ಕೆ ನನ್ನ ಹೃದಯ ತುಂಬಿ ಬರುತ್ತಿದೆ, ನನಗೆ ಏನು ಹೇಳಬೇಕೆಂದೇ ತಿಳುಯುತ್ತಿಲ್ಲ, ಏನು ಹೇಳಿದರೂ ಕಡಿಮೆ ಎಂಬುದು ತಿಳಿಯುತ್ತಿದೆ' ಎಂದಿದ್ದಾರೆ ನಟಿ ಸೌಂದರ್ಯ. ನಟಿ ಸೌಂದರ್ಯ ಅವರು ತುಂಬಾ ಮುದ್ದುಮುದ್ದಾಗಿ ಮಾತನಾಡಿರುವ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. 

ಜೊತೆಗೆ, ನಟಿ ಸೌಂದರ್ಯ ಅವರಿಗೆ ಹುಟ್ಟೂರು, ತಾಯ್ನಾಡು ಕರ್ನಾಟಕ ಹಾಗೂ ಮಾತೃಭಾಷೆ ಕನ್ನಡದ ಮೇಲೆ ಅಷ್ಟೇ ಪ್ರೀತಿ-ವಿಶ್ವಾಸ ಕೂಡ ಇತ್ತು. ನಾನು ನನ್ನ ಕರುನಾಡಿಗೆ ಒಂದು ಕಲಾತ್ಮಕ ಸಿನಿಮಾ ಮಾಡಬೇಕು ಎಂದಿದ್ದ ನಟಿ ಸೌಂದರ್ಯ ತಮ್ಮ ಮಾತಿನಂತೆ 'ದ್ವೀಪ' ಚಿತ್ರವನ್ನು ನಿರ್ಮಿಸಿ ನಟಿಸಿದ್ದರು ಕೂಡ. ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತ ಒಮ್ಮ ಸೌಂದರ್ಯ ಅವರು 'ಯಾವುದೇ ಹೆಣ್ಣು ಗಂಡನ ಮನೆಗೆ ಹೋದರೂ ತವರುಮನೆಯನ್ನು ಎಂದಿಗೂ ಮರೆಯೋದಿಲ್ಲ' ಎಂದಿದ್ದರು. ಜೊತೆಗೆ, ನಾನು ನನ್ನಿಷ್ಟದ ಕಲಾತ್ಮಕ ಸಿನಿಮಾ ಮೂಲಕ ಕನ್ನಡಕ್ಕೊಂದು ಪ್ರಶಸ್ತಿಯನ್ನು ತರಬೇಕು ಎಂದಿದ್ದರು. 

ನಟಿ ಸೌಂದರ್ಯ ತಮ್ಮ ಮಾತಿನಿಂತೆ 'ದ್ವೀಪ' ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ನಿರ್ಮಿಸಿ ಅದಕ್ಕೆ ಪ್ರತಿಷ್ಠಿತ ಸ್ವರ್ಣ ಕಮಲ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದರು. ಆ ಮೂಲಕ ಹುಟ್ಟಿದ ಮನೆ, ನೆಲ-ಜಲವನ್ನು ಮರೆಯಲಿಲ್ಲ ಎಂಬುದನ್ನೂ ನಿರೂಪಿಸಿದರು. ಕರುನಾಡಿಗೆ ಬಂದರೆ ನಟಿ ಸೌಂದರ್ಯ ಕನ್ನಡದಲ್ಕೇ ಮಾತನಾಡುತ್ತಿದ್ದರು, ಮಾತನಾಡಿಸುತ್ತಿದ್ದರು. ಆದರೆ, ಆಯುಷ್ಯವೇ ಕಡಿಮೆ ಎಂಬಂತೆ ಮೂವತ್ತಕ್ಕೂ ಮುನ್ನವೇ ಇಹಲೋಕ ತ್ಯಜಿಸಿಬಿಟ್ಟರು ನಟಿ ಸೌಂದರ್ಯ!

ಕನ್ನಡಿಗರಿಗೆ ಕೆಲಸ ಕೊಡಲು ಹೋಗಿ ಪೆಟ್ಟು ತಿಂದ್ರಾ ಯಶ್‌-ಕೆವಿಎನ್ ಪ್ರೊಡಕ್ಷನ್ಸ್‌? ಏನಿದು ಸೆಟ್ ಪ್ರಾಬ್ಲಂ?

 

 

click me!