ನಾನಲ್ಲದ ವ್ಯಕ್ತಿಯಾಗಿ ಬದುಕಲು ಅಸಾಧ್ಯ; ಎಮೋಷನಲ್‌ ನಿಂದನೆ ಬಗ್ಗೆ ಮೇಘನಾ ರಾಜ್

By Vaishnavi ChandrashekarFirst Published Mar 9, 2023, 12:57 PM IST
Highlights

ಮಹಿಳಾ ಪ್ರಧಾನ ಚಿತ್ರಕ್ಕೆ ಸಹಿ ಮಾಡುವ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಮೇಘನಾ ರಾಜ್. ಎಮೋಷನಲ್‌ ನಿಂದನೆ ಬಗ್ಗೆ ಮಾತು...

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ತತ್ಸಮ ತದ್ಭವ ಚಿತ್ರದ ಮೂಲಕ ಬಿಗ್ ಕಮ್ ಬ್ಯಾಕ್ ನೀಡುತ್ತಿದ್ದಾರೆ. ಪತಿ ಚಿರಂಜೀವಿ ಸರ್ಜಾ ಅಗಲಿದೆ, ಪುತ್ರ ರಾಯನ್ ರಾಜ್ ಸರ್ಜಾ ಎಂಟ್ರಿ ನಂತರ ಮೇಘನಾ ರಾಜ್ ಜೀವನ ತುಂಬಾನೇ ಬದಲಾಗಿದೆ. ಚಿರು ಆಪ್ತ ಸ್ನೇಹಿತ ಪನ್ನಗಾಭರಣ ನಿರ್ದೇಶನ ಮಾಡುತ್ತಿರುವ ತತ್ಸಮ ತದ್ಭವ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರಲು ಮುಂದಾಗಿದ್ದಾರೆ. ತಮ್ಮ ಎಮೋಷನಲ್ ಜರ್ನಿ ಹೇಗಿದೆ ಎಂದು ಹಂಚಿಕೊಂಡಿದ್ದಾರೆ. 

'ಒಂದು ಸಮಯದಲ್ಲಿ ನಾನು ಹೇಗೆ ಇರಬೇಕು ಹೇಗೆ ವರ್ತಿಸಬೇಕು ಎಂದು ಜನರು ನಿರೀಕ್ಷೆ ಮಾಡುತ್ತಿದ್ದರು ಅದರಿಂದ ನನಗೆ ತುಂಬಾ ಹಿಂಸೆ ಆಗುತ್ತಿತ್ತು. ನನ್ನ ಪ್ರಕಾರ ದೇಶದಲ್ಲಿ ಅತಿ ದೊಡ್ಡ ನಿಂದನೆ ಅಂದ್ರೆ ಅದು ಭಾವನಾತ್ಮಕ ನಿಂದನೆ ಎನ್ನಬಹುದು. ನನ್ನ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕೆ ತುಂಬಾ ಇಷ್ಟ ಪಡುವ ವ್ಯಕ್ತಿನಾನು ಅದು ಹೇಗೆ ಇರಲಿ ನಾನು ವ್ಯಕ್ತ ಪಡಿಸುವೆ. ಆದರೆ ತುಂಬಾ ಭಾವನೆಗಳನ್ನು ಹಿಡಿದಿಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು ಹಾಗೆ ಆಗಬಾರದು. ನಾವು ಎಷ್ಟೇ ಇರಲಿ ಪರ್ವಾಗಿಲ್ಲ ಎಂದುಕೊಂಡು ಸುಮ್ಮನಾದಷ್ಟು ಟಾಕ್ಸಿಕ್ ಮನಸ್ಸು ಮುರಿಯುತ್ತದೆ' ಎಂದು ಮೇಘನಾ ರಾಜ್ ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Latest Videos

ಸಂಬಂಧಗಳಿಗೆ ಬೆಲೆ ಕೊಡಿ, ಕುಟುಂಬದಲ್ಲಿ ಜಗಳ ಬೇಡ; ಮನವಿ ಮಾಡಿಕೊಂಡ ಧ್ರುವ ಸರ್ಜಾ

'ನಾವು ನಾವಾಗಿ ಇರುವುದಕ್ಕೆ ಅದೆಷ್ಟೋ ಹೆಣ್ಣು ಮಕ್ಕಳು ಹೆದರಿಕೊಳ್ಳುತ್ತಾರೆ..ಕಾರಣ ಜನರು ನಮ್ಮನ್ನು ಜಡ್ಜ್‌ ಮಾಡುತ್ತಾರೆ ಎಂದು. ನನ್ನ ತಲೆಗಳಲ್ಲಿ ನಾವು ಮಹಿಳೆಯರು ಹೀಗಿರಬೇಕು ಹೀಗೆ ವರ್ತಿಸಬೇಕು ಎಂದು ತುಂಬಿಕೊಂಡಿದ್ದೀವಿ. ನನ್ನ ನಿಜವಾದ ಭಾವನೆಗಳನ್ನು ತೋರಿಸಿಕೊಂಡರೆ ನಮ್ಮನ್ನು ತಪ್ಪಾಗಿ ನೋಡುತ್ತಾರೆ ಎನ್ನುವ ಭಾವನೆ ಮೂಡುತ್ತದೆ. ಪುರುಷರಿಗೆ ಹೋಲಿಸಿಕೊಂಡರೆ ನಾವು ತುಂಬಾನೇ ಕಂಟ್ರೋಲ್ ಮಾಡುತ್ತೀವಿ' ಎಂದು ಮೇಘನಾ ಹೇಳಿದ್ದಾರೆ. 

'ಈ ಹಿಂದೆ ಮಹಿಳಾ ಪ್ರಧಾನ ಸಿನಿಮಾಗಳನ್ನು ಹೆಚ್ಚಿಗೆ ಮಾಡುತ್ತಿದ್ದರು. ಆದರೆ ಯಾವ ಕಥೆನೂ ಸಿಗದೆ ಮಹಿಳಾ ಪ್ರಧಾನ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ. ಕಳೆದ 30 ವರ್ಷಗಳಲ್ಲಿ ಪುರುಷ ಪ್ರಧಾನ ಸಿನಿಮಾಗಳು ಹೆಚ್ಚಾಗಿದೆ. ಈಗ ಟ್ರೆಂಡ್ ಬದಲಾಗಿದೆ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ 13 ವರ್ಷ ಹುಡುಗಿ. ನಾಯಕಿಯರಿಗೆ ಹೆಚ್ಚ ಸಮಯ ಇರುವುದಿಲ್ಲ ಎಂದು ಈಗಲೂ ಹಾಗೆ ಯೋಚನೆ ಮಾಡಬಾರದು. ಸಿನಿಮಾ ಅಂದ್ರೆ ಬರೀ ಗ್ಲಾಮರ್‌ ಅಲ್ಲ ಅದಕ್ಕೂ ಮೀರಿದ ಕೆಲೆಯದು.ಬಾಲಿವುಡ್‌ನಲ್ಲಿ 40 ವರ್ಷದವರು ಇಂದಿಗೂ ನಾಯಕಿಯರು ನಟಿಸುತ್ತಾರೆ. ಜನರ ಆಲೋಚನೆ ಬದಲಾಗಬೇಕು' ಎಂದಿದ್ದಾರೆ ಮೇಘನಾ.

ಊಟ ಮಾಡ್ಸೋದೇ ದೊಡ್ಡ ಕಷ್ಟ: ತುಂಟ ರಾಯನ್ ಜೊತೆ ಮೇಘನಾ ರಾಜ್ ರೆಡಿ ಆಗೋದು ಹೀಗೆ

'ಮಹಿಳೆ ಅಗಿರುವುದಕ್ಕೆ ನಾನು ಕೆಲಸ ಮನೆ ಮತ್ತು ಮಗುವನ್ನು ಬ್ಯಾಲೆನ್ಸ್‌  ಮಾಡುತ್ತಿರುವುದು ಅನಿಸುತ್ತದೆ. ನಾನು ರಿಯಾಲಿಟಿ ಶೋ ಒಪ್ಪಿದ ಸಮಯದಲ್ಲಿ ಬೆಳಗಿನ ಜಾವ 5 ಗಂಟೆಗೆ ಮನೆಗೆ ಬರುತ್ತಿದ್ದೆ. ಸಿಕ್ಕಾಪಟ್ಟೆ ಸುಸ್ತಾಗಿರುತ್ತಿತ್ತು. ನನಗೆ ಎಷ್ಟೇ ಸುಸ್ತಾಗಿದ್ದರೂ ಅವನ ಜೊತೆ ಅಟವಾಡಿ ಮತ್ತು ಮಲಿಗಿಸಿ ನಾನು ರೆಸ್ಟ್‌ ಮಾಡುತ್ತಿದ್ದೆ. ಕೆಲವೊಮ್ಮೆ ಅಳು ಬರುತ್ತಿತ್ತು ಆದರೆ ತಾಯ್ತನವೆಂದರೆ ಹಾಗೆ ಅಲ್ವಾ ಎಂದು ಸುಮ್ಮನಾಗುತ್ತಿದ್ದೆ' ಎಂದು ಮೇಘನಾ ಹೇಳಿದ್ದಾರೆ.

click me!