Sandalwood Cinderella ರಾಧಿಕಾ ಪಂಡಿತ್​ ಟೀಚರ್​ ಬದ್ಲು ನಟಿಯಾಗಿದ್ದು ಹೇಗೆ?

By Suvarna NewsFirst Published Mar 7, 2023, 8:29 PM IST
Highlights

ಇಂದು 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ರಾಧಿಕಾ ಪಂಡಿತ್​ ಅವರು ನಿಜವಾಗಿಯೂ ಆಗಬೇಕು ಅಂದುಕೊಂಡದ್ದು ಶಿಕ್ಷಕಿ. ಶಿಕ್ಷಕಿ ಬದಲು ನಟಿಯಾಗಿ ಅವರ ಜೀವನ ಬದಲಾದದ್ದು ಹೇಗೆ? ಇಲ್ಲಿದೆ ಮಾಹಿತಿ... 
 

ಸ್ಯಾಂಡಲ್​ವುಡ್​ನ ಮುದ್ದಾದ ಜೋಡಿಗಳಲ್ಲಿ ಒಂದು ಯಶ್​ ಮತ್ತು ರಾಧಿಕಾ ಪಂಡಿತ್​ (Radhika Pandith) ಅವರದ್ದು. ಸ್ಯಾಂಡಲ್‌ವುಡ್ ಸಿಂಡ್ರೆಲಾ ( Sandalwood Cinderella) ಎಂದೇ ಹೆಸರು ಪಡೆದಿರುವ ರಾಧಿಕಾ 2012 ರಲ್ಲಿ, ಬಿಡುಗಡೆಗೊಂಡ ಯೋಗರಾಜ್ ಭಟ್ ರ "ಡ್ರಾಮಾ" ಚಿತ್ರದಲ್ಲಿ  ಯಶ್ ಅವರ ಜೊತೆಯಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡವರು.  ಕೊನೆಗೆ ಯಶ್​ ಜೀವನದ ನಾಯಕಿಯಾದರು.  ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿಯಲ್ಲಿ ಪಂಡಿತ್ ಯಶ್ ಜೊತೆ ನಟಿಸಿ ಸೈ ಎನಿಸಿಕೊಂಡ ಈ ಮುದ್ದು ಬೆಡಗಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.  ಮಾರ್ಚ್ 7, 1984 ರಂದು ಬೆಂಗಳೂರಿನಲ್ಲಿ ಜನಿಸಿದ್ದ ರಾಧಿಕಾ ಅವರಿಗೆ ಇಂದು 39 ವರ್ಷ ಪೂರ್ಣಗೊಳ್ಳಲಿದೆ. ಸಾಮಾಜಿಕ ಜಾಲತಾಣದಲ್ಲಿ (Social media) ರಾಧಿಕಾ ಪಂಡಿತ್ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಕೆಲಸ, ಸಿನಿಮಾ ಮತ್ತು ಮಕ್ಕಳ ಬಗ್ಗೆ ಪೋಸ್ಟ್‌ ಹಾಕಿ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಾರೆ. 'ಮೊದಲ ಸಲ ನಾನು ಮನೆಯಿಂದ ದೂರ ಹೋಗಿ ಸೈಲೆಂಟ್ ಬರ್ತಡೇ ಆಚರಿಸಿಕೊಳ್ಳುತ್ತಿರುವೆ. ನನಗೆ ಗೊತ್ತು ಇದರಿಂದ ನಿಮ್ಮಗೆ ಬೇಸರವಾಗುತ್ತದೆ' ಎಂದು ರಾಧಿಕಾ ಪಂಡಿತ್ ನಿನ್ನೆ ಬರೆದುಕೊಂಡಿದ್ದು, ತಾವು ಊರಲ್ಲಿ ಇರುವುದಿಲ್ಲ ಎಂಬ ಸೂಚನೆ ಕೊಟ್ಟಿದ್ದರು. ಅವರ ಅಭಿಮಾನಿಗಳು ಇಂದು ಬೆಳಗ್ಗೆಯಿಂದಲೇ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. 

ಮೊಗ್ಗಿನ ಮನಸು ಚಿತ್ರದ ಮೂಲಕ ತನ್ನ ಸಿನಿಮಾ ಜರ್ನಿಯನ್ನು ಆರಂಭಿಸಿದ ರಾಧಿಕಾ ಪಂಡಿತ್ ಆದಿ ಲಕ್ಷ್ಮಿ ಪುರಾಣ ಚಿತ್ರದ ನಂತರ ಯಾವ ಚಿತ್ರದಲ್ಲಿಯೂ ಅಭಿನಯಿಸಿಲ್ಲ. ಒಟ್ಟು 21 ಚಿತ್ರಗಳಲ್ಲಿ ಹಾಗೂ 3 ಧಾರಾವಾಹಿಗಳಲ್ಲಿ ರಾಧಿಕಾ ಪಂಡಿತ್ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ರಾಧಿಕಾ ಅವರ ಕುರಿತು ಒಂದು ಕುತೂಹಲದ ವಿಷಯವಿದೆ. ಅದೇನೆಂದರೆ ಅವರಿಗೆ ನಟನೆಗೆ ಬದಲು ಆಸಕ್ತಿ ಇರಲಿಲ್ಲ. ಬದಲಿಗೆ ಅವರು  ಶಿಕ್ಷಕಿಯಾಗಲು ಬಯಸಿದ್ದರು. ಆದರೆ ಅದೃಷ್ಟ ಅವರನ್ನು ಸಿನಿ ರಂಗಕ್ಕೆ ಕರೆತಂದಿತು. ಅವರು ಸಿನಿಮಾ ಕುಟುಂಬಕ್ಕೆ ಸೇರಿದವರು. ರಾಧಿಕಾ ತಂದೆ ಕೃಷ್ಣ ಪಂಡಿತ್ ಸಾರಸ್ವತ್ ಅವರು ಸಿನಿಮಾ ಮತ್ತು ರಂಗ ಕಲಾವಿದರಾಗಿದ್ದಾರೆ.

ಮೊದಲ ಸಲ ಮನೆಯಿಂದ ದೂರ ಹೋಗುತ್ತಿರುವೆ; ಬರ್ತಡೇಗೆ ಬ್ರೇಕ್ ಹಾಕಿದ ರಾಧಿಕಾ ಪಂಡಿತ್

ಇದೇ ಕಾರಣಕ್ಕೋ ಏನೋ, ಬಣ್ಣದ ಲೋಕ ರಾಧಿಕಾ ಅವರನ್ನು ಕರೆತಂದಿತು.  ಯಾವುದೇ ಆಡಿಷನ್ ನೀಡದೆ ದಕ್ಷಿಣ ಇಂಡಸ್ಟ್ರಿಯಲ್ಲಿ ಜನಪ್ರಿಯ ನಟಿಯೆಂದು ಗುರುತಿಸಿಕೊಂಡಿದ್ದಾರೆ. ಶಿಕ್ಷಕಿ (Teacher) ವೃತ್ತಿಯನ್ನೇ ಗಮನದಲ್ಲಿ ಇಟ್ಟುಕೊಂಡಿದ್ದ ನಟಿ ರಾಧಿಕಾ, ಬೆಂಗಳೂರಿನ  ಕ್ಲೂನಿ ಕಾನ್ವೆಂಟ್​ನಲ್ಲಿ ಹೈಸ್ಕೂಲ್‌ ಓದಿದರು.  ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಕಾಂ ಮುಗಿಸಿದರು.   ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಮುಗಿಸಿದ ಬಳಿಕ ಶಿಕ್ಷಕಿಯಾಗಬೇಕು ಎನ್ನುವುದು ಅವರ ಕನಸು ಆಗಿತ್ತು. ಆದರೆ  ಆದರೆ 2007ರಲ್ಲಿ ಬಿಕಾಂ ಫೈನಲ್ ಓದುತ್ತಿರುವಾಗ ಫ್ರೆಂಡ್​ ಒಬ್ಬಳು   ನಂದಗೋಕುಲ ಧಾರಾವಾಹಿಗೆ ನಡೆಯುತ್ತಿದ್ದ ಆಡಿಷನ್‌ನಲ್ಲಿ ಭಾಗವಹಿಸುವಂತೆ ಮನವೊಲಿಸಿದ್ದಳು. ಅಲ್ಲಿ  ರಾಧಿಕಾ ಗೆದ್ದೇ ಬಿಟ್ಟರು.  ಧಾರಾವಾಹಿಗೆ ಆಯ್ಕೆಯಾದರು. ಅಲ್ಲಿಂದ ಅವರ ದಿಕ್ಕು ಬದಲಾಯಿತು.

ಅದೇ ವರ್ಷ ಸುಮಂಗಲಿ (Sumangali) ಎಂಬ ಮತ್ತೊಂದು ಧಾರಾವಾಹಿಯಲ್ಲಿಯೂ ರಾಧಿಕಾ ಪಂಡಿತ್ ನಟಸಿದರು. ಈ ಧಾರಾವಾಹಿಯಲ್ಲಿನ ರಾಧಿಕಾ ಪಂಡಿತ್ ಫೋಟೊಗಳು ಮ್ಯಾಗಜಿನ್‌ಗಳಲ್ಲಿ ಹರಿದಾಡುತ್ತಿದ್ದವು. ಇದು ನಿರ್ದೇಶಕ ಶಶಾಂಕ್ ಕಣ್ಣಿಗೆ ಬಿದ್ದಿತ್ತು. ಹೊಸ ಮುಖಗಳನ್ನು ಹುಡುಕುತ್ತಿದ್ದ ಶಶಾಂಕ್ ರಾಧಿಕಾ ಪಂಡಿತ್ ಅವರನ್ನು ತನ್ನ ಚಿತ್ರ ಮೊಗ್ಗಿನ ಮನಸುಗೆ ಆರಿಸಿಕೊಂಡರು. ಹೀಗೆ ಶಿಕ್ಷಕಿಯಾಗಬೇಕು ಎಂಬ ಗುರಿಯನ್ನು ಹೊಂದಿದ್ದ ರಾಧಿಕಾ ಇಂದು ನಟಿಯಾಗಿ, ರಾಕಿಂಗ್​ ಸ್ಟಾರ್​ ಯಶ್​ ಪತ್ನಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಮೊದಲ ಚಿತ್ರದ ನಾಯಕ ಯಶ್​ ಅವರನ್ನೇ ಬಾಳಸಂಗಾತಿಯಾಗಿ ಆಯ್ಕೆಮಾಡಿಕೊಂಡರು  ರಾಧಿಕಾ. 2016ರ ಡಿಸೆಂಬರ್‌ 9ರಂದು ಗೋವಾದಲ್ಲಿ ಮದುವೆಯಾದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಅಂದಹಾಗೆ, ಯಶ್ (Yash) ಅವರಿಗಿಂತ ರಾಧಿಕಾ ಪಂಡಿತ್ 1 ವರ್ಷದ 10 ತಿಂಗಳು ದೊಡ್ಡವರು.  ಯಶ್ ಜನಿಸಿದ್ದು 1986 ಜನವರಿ 8. ರಾಧಿಕಾ ಪಂಡಿತ್ ಜನಿಸಿದ್ದು ಮಾರ್ಚ್​ 7, 1984ರಂದು. 

ರಾಜಸ್ಥಾನದಲ್ಲಿ ರಾಕಿಂಗ್ ಜೋಡಿ; ಯಶ್-ರಾಧಿಕಾ ಪ್ರೇಮಿಗಳ ದಿನದ ಸಂಭ್ರಮ ಹೇಗಿತ್ತು? ರೊಮ್ಯಾಂಟಿಕ್ ಫೋಟೋ ವೈರಲ್

click me!