ಐಷಾರಾಮಿ ಮನೆಯಿಂದ ಹೊರ ಬಂದ ಸುಂದರ್ ರಾಜ್ ಕುಟುಂಬ. ಯಾವ ನೆನಪು ಕಾಡಿತು ಎಂದು ಈ ನಿರ್ಧಾರ?
ಕನ್ನಡ ಚಿತ್ರರಂಗದ ಸುಂದರ ಕುಟುಂಬ ಅಂದ್ರೆ ಹಿರಿಯ ನಟ ಸುಂದರ್ ರಾಜ್ ಕುಟುಂಬ ಅಂತಾರೆ ಸಿನಿ ರಸಿಕರು. ಈ ಕುಟುಂಬಕ್ಕೆ ಸೇರ್ಪಡೆಯಾಗಿದ್ದು ಅಳಿಯ ಚಿರಂಜೀವಿ ಸರ್ಜಾ. ಯಾವುದೇ ಕಾರ್ಯಕ್ರಮ ಇದ್ದರೂ ಎರಡು ಕುಟುಂಬಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು, ಸಿನಿಮಾ ರಿಲೀಸ್- ಮದುವೆ ಸಮಾರಂಭದಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಆದರೆ ಚಿರು ಅಗಲಿಕೆ ಇಡೀ ಕುಟುಂಬ ದೊಡ್ಡ ಆಘಾತ ತಂದಿತ್ತು. ರಾಜ್ ಮತ್ತು ಸರ್ಜಾ ಕುಟುಂಬದಲ್ಲಿ ಸಂಭ್ರಮ ಹೆಚ್ಚಾಗಿದ್ದು ರಾಯನ್, ರುಧ್ರಾಕ್ಷಿ ಮತ್ತು ಹಯಗ್ರೀವ್ ಎಂಟ್ರಿ ಕೊಟ್ಟ ಮೇಲೆ.
ಇತ್ತೀಚಿಗೆ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ ಸುಂದರ್ ರಾಜ್ ತಮ್ಮ ಸ್ವಂತ ಮನೆಯಿಂದ ಯಾಕೆ ಹೊರ ಬಂದಿರುವುದು ಎಂದು ಹೇಳಿಕೊಂಡಿದ್ದಾರೆ. ಸ್ವಂತ ಮನೆ ಹತ್ತಿರ ಇರುವ ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ. 'ಮೂರು ವರ್ಷಗಳಿಂದ ನಾವು ಈ ಮನೆಗೆ ಬಂದಿದ್ದೀವಿ. ಇದಕ್ಕೂ ಮುನ್ನ 15ನೇ ಕ್ರಾಸ್ ಮೇನ್ ರೋಡ್‌ನಲ್ಲಿ ಇದ್ವಿ. ಅದು ತುಂಬಾ ದೊಡ್ಡ ಮನೆ ಆಗಿತ್ತು. ಡ್ಯೂಪ್ಲೆಕ್ಸ್ ಅಂತ ಮನೆ ಮಾಡಿದ್ವಿ. ದೊಡ್ಡದಾದ ಕಾರ್ ಪಾರ್ಕಿಂಗ್ ಮಾಡಿದ್ವಿ, ಗಾರ್ಡನ್ ಇತ್ತು. ಐದು ಬೆಡ್ ರೂಮ್ ಇತ್ತು ಅದಕ್ಕೆ ಐದು ಅಡುಗೆ ಮನೆ, ಡೈನಿಂಗ್ ಹಾಲ್, ದೇವರ ಮನೆ ಎಲ್ಲವೂ ಇದ್ದವು. ಒಂಥರಾ ತೊಟ್ಟಿ ಮನೆತರ. ಆ ಮನೆಯಲ್ಲಿ 2001ರಿಂದ 2022ವರೆಗೂ ಅಲ್ಲಿದ್ದೆವು ಅಂದ್ರೆ ಸುಮಾರು 20 ವರ್ಷಗಳ ಕಾಲ'ಎಂದು ಸುಂದರ್ ರಾಜ್ ಮಾತನಾಡಿದ್ದಾರೆ.
ಕ್ಲೀನರ್ ಆಗಿ ಕೆಲಸ ಮಾಡಿ ಲಾರಿ ಕೊಳ್ಳುವ ಕನಸು ಕಂಡ ನಟ ಶರಣ್; ಫೋಟೋ ವೈರಲ್
'ನನ್ನ ಅಳಿಯ ಅಗಲಿದ ಬಳಿಕ ಇಲ್ಲಿಗೆ ಶಿಫ್ಟ್ ಆದೆವು. ಅವನು ಹೋದ ನಂತರ ಅಲ್ಲಿ ಇರುವುದಕ್ಕೆ ಅಷ್ಟು ಮನಸ್ಸು ಬರಲಿಲ್ಲ. ಪ್ರತಿಬಾರಿಯೂ ಅವನು ಅಲ್ಲಿ ಕೂತುಕೊಳ್ಳುತ್ತಿದ್ದ ಅಲ್ಲಿ ನಿಂತುಕೊಳ್ಳುತ್ತಿದ್ದ ಇದದನ್ನು ಮಾತನಾಡುತ್ತಿದ್ದ ಅದು ಮಾತನಾಡುತ್ತಿದ್ದ ಅಂತ ಬರುತ್ತಲೇ ಇತ್ತು. ಅದಕ್ಕೆ ಈ ಮನೆಗೆ ಶಿಫ್ಟ್ ಆದೆವು' ಎಂದು ಸುಂದರ್ ರಾಜ್ ಹೇಳಿದ್ದಾರೆ.