ಅವರು ಜೈಲಿನಲ್ಲಿದ್ದರೂ ಹವಾ ನಡೆಯುತ್ತೆ, ಡಿ ಬಾಸ್ ಅಪರಾಧಿಯಲ್ಲ, ಆರೋಪಿ; ಮಹೇಶ್ ಕುಮಾರ್

By Shriram Bhat  |  First Published Jul 25, 2024, 5:38 PM IST

'ನಟ ದರ್ಶನ್ ಅವರು ಆರೋಪಿಯಷ್ಟೇ, ಅಪರಾಧಿಯಲ್ಲ. ಅವರನ್ನು ಕೋರ್ಟ್ ಹಾಗೂ ಕಾನೂನು ಇನ್ನೂ ಅಪರಾಧಿ ಎಂದು ಹೇಳಿಲ್ಲ. ನಾನು ದರ್ಶನ್ ಅವರನ್ನು ಜೈಲಿಗೆ ಹೋಗುವ ಮೊದಲು ಬಾಸ್ ಎಂದು ಕರೆಯುತ್ತಿದ್ದೆ, ಈಗಲೂ ಮುಂದೆ ಕೂಡ ಹಾಗೇ ಕರೆಯುತ್ತೇನೆ. ಅವರು ಯಾವತ್ತಿದ್ದರೂ ನನಗೆ ಡಿ ಬಾಸ್..


ಕನ್ನಡದ ಸ್ಟಾರ್ ನಟ ದರ್ಶನ್ (Actor Darshan) ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ವಿಚಾರಣಾಧೀನ ಖೈದಿಯಾಗಿ ನಟ ದರ್ಶನ್ ಅವರು ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಇದೀಗ, ಚಿತ್ರರಂಗದ ದರ್ಶನ್ ಆಪ್ತರು ಎನಿಸಿಕೊಂಡಿರುವ ಹಲವರಲ್ಲಿ ಒಬ್ಬೊಬ್ಬರಾಗಿ ನಟ ದರ್ಶನ್ ಪರ ಬ್ಯಾಟ್ ಬೀಸಿ ಮಾತನಾಡಲು ತೊಡಗಿದ್ದಾರೆ. ಅವರಲ್ಲಿ 'ಅಯೋಗ್ಯ' ಹಾಗೂ 'ಮದಗಜ'  ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ (Mahesh Kumar) ಅವರು ಪ್ರಮುಖರು. 

ದರ್ಶನ್ ಕೇಸ್ ಹಾಗೂ ಬಿಡುಗಡೆ ಬಗ್ಗೆ ಯೂಟ್ಯೂಬ್ ಚಾನೆಲ್‌ ಒಂದರ ಸಂದರ್ಶನದಲ್ಲಿ ಮಾತನಾಡುತ್ತ ನಿರ್ದೇಶಕ ಮಹೇಶ್  ಕುಮಾರ್ ಅವರು 'ನಟ ದರ್ಶನ್ ಅವರು ಆರೋಪಿಯಷ್ಟೇ, ಅಪರಾಧಿಯಲ್ಲ. ಅವರನ್ನು ಕೋರ್ಟ್ ಹಾಗೂ ಕಾನೂನು ಇನ್ನೂ ಅಪರಾಧಿ ಎಂದು ಹೇಳಿಲ್ಲ' ಎಂದು ಧೈರ್ಯದಿಂದ ಆಗಿ ಹೇಳಿದ್ದಾರೆ. ಜತೆಗೆ, 'ನಾನು ದರ್ಶನ್ ಅವರನ್ನು ಜೈಲಿಗೆ ಹೋಗುವ ಮೊದಲು ಬಾಸ್ ಎಂದು ಕರೆಯುತ್ತಿದ್ದೆ, ಈಗಲೂ ಮುಂದೆ ಕೂಡ ಹಾಗೇ ಕರೆಯುತ್ತೇನೆ. ಅವರು ಯಾವತ್ತಿದ್ದರೂ ನನಗೆ ಡಿ ಬಾಸ್' ಎಂದಿದ್ದಾರೆ. 

Tap to resize

Latest Videos

undefined

ನಟ ದರ್ಶನ್ ಕೇಸ್ ಬಗ್ಗೆ ಅನಿರೀಕ್ಷಿತ ಅನಿಸಿಕೆ ಶೇರ್ ಮಾಡಿದ ಚಂದನ್ ಶೆಟ್ಟಿ ; ಒಮ್ಮೆ ನೋಡ್ಬಿಡಿ..!

ನಾನು ಈ ಮಾತನ್ನು ಎದೆಗಾರಿಕೆ ಅಂತ ಕರೆಯಲ್ಲ. ನನ್ನ ಪ್ರಕಾರ, ಸತ್ಯ ಹೇಳೋದಕ್ಕೆ ಯಾವ ಜಾಗವಾದರೇನು, ಯಾರು ಎದುರಿಗೆ ಇದ್ದರೇನು? ನಾನು ನನ್ನ ಅನಿಸಿಕೆ ಹಾಗು ಸತ್ಯವನ್ನು ಹೇಳುತ್ತೇನೆ. ಅವರು ಎಲ್ಲಿದ್ದರೂ ಅವರ ಹವಾ ನಡೆಯುತ್ತೆ. ಅವರು ಜೈಲಿನಲ್ಲಿದ್ದರೂ ಹೊರಗಡೆ ಇದ್ದರೂ ಅವರ ಹವಾ ಕಮ್ಮಿ ಆಗುವುದಿಲ್ಲ. ಅದು ಒಂಥರಾ ಹುತ್ತ ಬೆಳೆದುಕೊಂಡು ಹೋದ ರೀತಿಯಲ್ಲೇ ಬೆಳೆಯುತ್ತಲೇ ಇರುತ್ತೆ. ಒಬ್ಬ ಅಭಿಮಾನಿ ಕೂಡ ಅವರಿಗೆ ಈಗ ಕಡಿಮೆ ಆಗಿಲ್ಲ, ಆಗೋದೂ ಇಲ್ಲ. 

ನಾನು ಮಾಧ್ಯಮಗಳ ಮುಂದೆ, ಹೊರಗಡೆ ಮಾತನಾಡಿದ್ದು ನೋಡಿದವರು, ಆಟೋದವರು ನನ್ನ ಕಂಡೊಡನೆ ಕೇಳ್ತಾರೆ. 'ಸರ್, ಬಾಸ್ ಯಾವಾಗ ಹೊರಗಡೆ ಬರ್ತಾರೆ? ಅಂತ. ಅವ್ರು ರಿಲೀಸ್ ಆದ ದಿನ ಅವ್ರನ್ನ ಕರ್ಕೊಂಡು ಹೋಗೋಕೆ ನಾವು ಬರ್ತೀವಿ ಅಂತಾರೆ. ಡಿ ಬಾಸ್ ರಿಲೀಸ್ ಆದ ದಿನ ಡಿ ಬಾಸ್ ವೆಲ್‌ಕಮ್ ಮಾಡೋಕೆ ನಾವೆಲ್ಲಾ ಬರ್ತೀವಿ ಅಂತ ಬಹಳಷ್ಟು ಜನ ಈಗಲೇ ರೆಡಿಯಾಗಿ ನಿಂತಿದಾರೆ. ನಾನೂ ಸೇರಿದಂತೆ, ಅವರನ್ನು ಇವತ್ತಿನ ತನಕ ಯಾರೂ ಕೂಡ ಅಪರಾಧಿ ಅಂತ ನೋಡೋಕೆ ಆಗಲ್ಲ. 

ಯಾಕಂದ್ರೆ, ಅವರನ್ನು ಈ ದೇಶದ ಕಾನೂನು ವ್ಯವಸ್ಥೆ ಅಪರಾಧಿ ಅಂತ ಘೋಷಣೆ ಮಾಡಿಲ್ಲ. ಸಾಕಷ್ಟು ಓದಿಕೊಂಡವರು, ಕಾನೂನು ತಿಳುವಳಿಕೆ ಉಳ್ಳವರು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದ್ದಾರೆ. ಅವರು ಎಲ್ಲವನ್ನೂ ನೋಡಿ ನಟ ದರ್ಶನ್ ಅವರು ಅಪರಾಧಿ ಹೌದೋ ಅಲ್ಲವೋ ಎಂದು ತೀರ್ಮಾನ ಮಾಡ್ತಾರೆ. ಅಲ್ಲಿಯವರೆಗೆ ಯಾರೊಬ್ಬರೂ ಕೂಡ ಅವರನ್ನು ಅಪರಾಧಿ ಅಂತ ಹೇಳೋಕೆ ಸಾಧ್ಯವಿಲ್ಲ. 

ದರ್ಶನ್ ಕಷ್ಟ ಪಟ್ಟಿರೋದು ನೋಡಿದ್ರೆ ತುಂಬಾ ಸಂಕಟ ಆಗುತ್ತೆ: ಗಿರಿಜಾ ಲೋಕೇಶ್ ಕಣ್ಣೀರು!

ಅವರು ಬಿಡುಗಡೆಯಾದ ದಿನ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನರು ಅಲ್ಲಿ ಸೇರಿ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬರಲಿದ್ದಾರೆ. ಅವರನ್ನು ಜೈಲಿನಿಂದ ಅವರ ಮನೆಗೆ ಸೇರಿಸಿ, ಅವರ ಕುಟುಂಬದ ಆಶೀರ್ವಾದ ಪಡೆದೇ ಡಿ ಬಾಸ್ ಅಭಿಮಾನಿಗಳು ವಾಪಸ್ ಮನೆಗೆ ಹೋಗಲಿದ್ದಾರೆ. ಆ ದಿನವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಕಾದಿದ್ದಾರೆ.ನಾನೂ ಕೂಡ ಆ ದಿನಕ್ಕಾಗಿ ಕಾಯುತ್ತಿದ್ದೇನೆ' ಎಂದಿದ್ದಾರೆ ಮದಗಜ ಖ್ಯಾತಿಯ ಡೈರೆಕ್ಟರ್ ಮಹೇಶ್ ಕುಮಾರ್. 

click me!