ನಟ ದರ್ಶನ್ ಹೆಂಡತಿ ವಿಜಯಲಕ್ಷ್ಮಿಗೆ ಹಲ್ಲೆ ಮಾಡಿ 2011ರಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆ ಆಗುವಾಗ 'ಹೋಗಿ ಬರ್ತೀನಿ' ಎಂದಿದ್ದರಂತೆ.
ಬೆಂಗಳೂರು (ಜು.25): ನಟ ದರ್ಶನ್ ತೂಗುದೀಪ ಹೆಂಡ್ತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ 28 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಆದರೆ, ಬಿಡುಗಡೆ ಆಗುವಾಗ ಜೈಲಿನ ಅಧಿಕಾರಿಗಳಿಗೆ 'ಹೋಗಿ ಬರ್ತೀನಿ ಸರ್' ಎಂದು ಹೇಳಿದ್ದನಂತೆ. 'ಬಾಯಿಂದ ಆಡಿತ ಮಾತು, ಬೆನ್ನಿಗೆ ಮೂಲ' ಎಂಬ ಗಾದೆಯಂತೆ ನಟ ದರ್ಶನ್ ಪುನಃ 13 ವರ್ಷಗಳ ಬಳಿಕ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ ಎಂದು ಜೈಲಿನ ನಿವೃತ್ತ ಅಧಿಕಾರಿ ಹೇಳಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ವಾಸವಾಗಿರುವ ಪರಪ್ಪನ ಅಗ್ರಹಾರ ಜೈಲಿನ ನಿವೃತ್ತ ಅಧಿಕಾರಿ ಸತೀಶ್ ಸುವರ್ಣ ನ್ಯೂಸ್‌ನೊಂದಿಗೆ ನಟ ದರ್ಶನ್ ಜೈಲಿಗೆ ಹೋದ ಬಗ್ಗೆ ಮಾತನಾಡಿದ್ದಾರೆ. ನಟ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ವೇಳೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ 28 ದಿನಗಳನ್ನು ಕಳೆದಿದ್ದರು. ಈ ವೇಳೆ ಆರಂಭದಲ್ಲಿ ಜೈಲಿನಲ್ಲಿ ಅಪರಾಧಿಗಳ ಜೊತೆಗೆ ಹೊಂದಿಕೊಳ್ಳಲು ಕಷ್ಟಪಟ್ಟಿದ್ದ ನಟ ದರ್ಶನ್‌ಗೆ ಜೈಲಿನ ಅಧಿಕಾರಿಯಾಗಿದ್ದ ಸತೀಶ್ ಇಲ್ಲಿ ಹೇಗಿರಬೇಕು ಎಂದು ಕೆಲವು ಸೂಚನೆಗಳನ್ನೂ ನೀಡಿದ್ದರು. ಇದಾದ ನಂತರ 28 ದಿನಗಳಲ್ಲಿ ಜೈಲಿನ ಅಧಿಕಾರಿಯೊಂದಿಗೆ ಸ್ವಲ್ಪ ಮಟ್ಟಿಗೆ ಉತ್ತಮ ಒಡನಾಟವೂ ಬೆಳೆದಿತ್ತು. ಆದರೆ, ಜೈಲಿನಿಂದ ಬಿಡುಗಡೆ ಆಗುವಾಗ ನಟ ದರ್ಶನ್ ಜೈಲಿನ ಅಧಿಕಾರಿಗೆ ಏನು ಹೇಳಿದ್ದರು ಎಂಬುದನ್ನು ನೀವು ಅವರ ಬಾಯಿಂದಲೇ ಕೇಳಿ... ಇಲ್ಲಿದೆ ನೋಡಿ ಜೈಲಿನ ನಿವೃತ್ತ ಅಧಿಕಾರಿಯ ವಿಡಿಯೋ..
Breaking: ನಟ ದರ್ಶನ್ ಮನೆ ಊಟ ಕೊಡುವಂತೆ ಸಲ್ಲಿಸಿದ್ದ ಅರ್ಜಿ ವಜಾ; ಜೈಲೂಟವೇ ಗತಿ
ದರ್ಶನ್ ಜೈಲಿನಿಂದ ಹೋಗುವಾಗ ಒಂದೇ ಮಾತನ್ನು ಹೇಳಿದನು. ಇಷ್ಟು ದಿವಸ ಆದಮೇಲೆ ನಾನು ರಿಲೀಸ್ ಆಗುತ್ತಿದ್ದೇನೆ, ಈ ಥರಹ ಆಗಬಾರದಿತ್ತು. 'ನಾನು ಹೋಗಿ ಬರ್ತೀನಿ ಸರ್' ಎಂದು ಹೇಳಿದ್ದರು. ನಾನು ಆಗಲೇ ಹೇಳಬೇಕು ಎಂದುಕೊಂಡಿದ್ದೆ, ನೀವು ಯಾಕೆ ಜೈಲಿನಲ್ಲಿ ಈ ಮಾತು ಹೇಳಿಬಿಟ್ರಿ ಎಂದು, ಆದರೆ ನಾನೇ ಸುಮ್ಮನಾಗಿಬಿಟ್ಟೆ. ನೋಡಿ ಈಗ ಅವರು ಸಾಮಾನ್ಯ ಮಾತಿನಂತೆ ಹೋಗುವಾಗ ಈ ಮಾತನ್ನು ಹೇಳಿದ್ದರು. ಈಗ ಕಾಕತಾಳೀಯ ಎಂಬಂತೆ ಪುನಃ ನಟ ದರ್ಶನ್ ಜೈಲಿಗೆ ಹೋಗಿದ್ದಾರೆ.
ಆಡುಭಾಷೆಯಲ್ಲಿ ಆಸ್ಪತ್ರೆ, ಜೈಲು, ಪೊಲೀಸ್ ಠಾಣೆ, ನ್ಯಾಯಾಲಯಗಳಿಂದ ಹೊರಡುವಾಗ ಯಾರಿಗೂ 'ಹೋಗಿ ಬರ್ತೀನಿ' ಎಂದು ಹೇಳಬಾರದು ಎನ್ನುತ್ತಾರೆ. ಆದರೆ, ನಟ ದರ್ಶನ್ ಜೈಲಿನಿಂದ ಹೊರಗೆ ಬರುವಾಗ ಈ ಮಾತನ್ನು ಹೇಳಿ ಜೈಲಿಗೆ ಹೋದಂತೆ ಆಗಿದೆ ಎಂದು ನಿವೃತ್ತ ಅಧಿಕಾರಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದರು.
ಮೆಡಿಕಲ್, ಇಂಜಿನಿಯರಿಂಗ್ ಸೀಟುಗಳು ಏಕಕಾಲದಲ್ಲಿ ಹಂಚಿಕೆ; ಪ್ರತಿನಿತ್ಯ 2 ಬಾರಿ KEA ವೆಬ್‌ಸೈಟ್‌ಗೆ ಭೇಟಿ ಕೊಡಿ
ಪ್ರತಿಯೊಬ್ಬರ ಮನೆಯಲ್ಲಿ ಮಕ್ಕಳು ಅಥವಾ ಮನೆಯವರು ಮನೆಯಿಂದ ಹೊರಗೆ ಹೋಗುವಾಗ ಹೋಗಿ ಬರ್ತೀನಿ ಎಂದು ಹೇಳುವುದು ಸಾಮಾನ್ಯವಾಗಿರುತ್ತದೆ. ಜೊತೆಗೆ, ನೆಂಟರಿಷ್ಟರ ಮನೆಗೆ ಹೋಗಿ ಬರುವಾಗ ಈ ರೀತಿಯ ಮಾತನ್ನು ಹೇಳುವುದು ಸಾಮಾನ್ಯವಾಗಿದೆ. ಈಗ ಜೈಲಿನಿಂದ ಬಿಡುಗಡೆ ಆಗುವಾಗ ಹೋಗಿ ಬರ್ತೀನಿ ಎಂದು ಹೇಳಿದ್ದ ನಟ ದರ್ಶನ್ ಈಗ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಿಜವಾಗಿದೆ. ಇಂದಿಗೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 32ಕ್ಕೂ ಅಧಿಕ ದಿನಗಳಲ್ಲಿ ಕಳೆದಿದ್ದಾರೆ. ಜೈಲಿನಲ್ಲಿ ಒಂದು ತಿಂಗಳು ಕಳೆದರೂ ಮನೆ ಊಟವೂ ಸಿಗದೇ ಭಾರಿ ಸಂಕಷ್ಟ ಅನುಭವಿಸುತ್ತಿದ್ದಾರೆ.