'ಯಶ್ ನಮ್ಮ ಹುಡುಗ, ನನ್ನ ತಮ್ಮನಂತೆ ನೋಡ್ತೀನಿ': ಟಾಕ್ಸಿಕ್ ನೋಡಿ ಶಿವಣ್ಣ ಫುಲ್ ಖುಷ್!

Published : Sep 03, 2026, 09:28 PM IST
Shivanna Toxic reaction

ಸಾರಾಂಶ

‘ಟಾಕ್ಸಿಕ್’ ಸಿನಿಮಾ ವೀಕ್ಷಿಸಿದ ನಟ ಶಿವರಾಜ್ ಕುಮಾರ್, ಯಶ್ ಅಭಿನಯ ಹಾಗೂ ಚಿತ್ರದ ಕೊನೆಯ 20 ನಿಮಿಷಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಥಿಯೇಟರ್‌ಗೆ ತೆರಳಿದ ಶಿವಣ್ಣ, ‘ಟಾಕ್ಸಿಕ್’ ನಮ್ಮ ಹುಡುಗನ ಸಿನಿಮಾ ಎಂದು ಯಶ್‌ಗೆ ಬೆಂಬಲ ಸೂಚಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಬಗ್ಗೆ ಪರ-ವಿರೋಧದ ಚರ್ಚೆ ಮುಂದುವರಿದಿರುವ ನಡುವೆಯೇ, ಇದೀಗ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಸ್ಟಾರ್ ನಟ ಯಶ್ ಅವರ ಸಿನಿಮಾಕ್ಕೆ ಬೆಂಬಲ ಸೂಚಿಸಿದ್ದಾರೆ. ‘ಟಾಕ್ಸಿಕ್’ ಕುರಿತು ಕೆಲವರು ನೆಗೆಟಿವ್ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವ ಸಂದರ್ಭದಲ್ಲಿ, ಕನ್ನಡದ ಸ್ಟಾರ್ ನಟರು ಸಿನಿಮಾವನ್ನು ಬೆಂಬಲಿಸುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಈಗಾಗಲೇ ಉಪೇಂದ್ರ, ಸುದೀಪ್ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದು, ಸಿನಿಮಾ ಪರವಾಗಿ ಮಾತನಾಡಿದ್ದರು. ಇದೀಗ ನಟ ಶಿವರಾಜ್ ಕುಮಾರ್ ಖುದ್ದು ‘ಟಾಕ್ಸಿಕ್’ ವೀಕ್ಷಿಸುವ ಮೂಲಕ ಗಮನ ಸೆಳೆದಿದ್ದಾರೆ.

ಯಶ್ ಅಭಿನಯದ ‘ಟಾಕ್ಸಿಕ್’ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಟಾಕ್ಸಿಕ್’ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಯಶ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ!

ಸಿನಿಮಾ ವೀಕ್ಷಿಸಿದ ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ‘ಟಾಕ್ಸಿಕ್’ ಒಂದು ಒಳ್ಳೆಯ ಪ್ರಯತ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಯಶ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಚಿತ್ರದ ಕೊನೆಯ 20 ನಿಮಿಷಗಳು ಗೇಮ್ ಚೇಂಜಿಂಗ್ ಆಗಿವೆ. ಕ್ಲೈಮ್ಯಾಕ್ಸ್‌ನಲ್ಲಿ ಯಶ್ ಅವರ ಅಭಿನಯ ಬಹಳ ಇಷ್ಟವಾಯಿತು. ‘ರಾಯ’ ಮತ್ತು ‘ಟಿಕೆಟ್’ ಎರಡೂ ಪಾತ್ರಗಳು ನನಗೆ ತುಂಬಾ ಇಷ್ಟವಾದವು ಎಂದು ಶಿವಣ್ಣ ಹೇಳಿದ್ದಾರೆ.

‘ಯಶ್ ನಮ್ಮ ಹುಡುಗ, ನನ್ನ ತಮ್ಮನಂತೆ ನೋಡ್ತೀನಿ’

‘ಟಾಕ್ಸಿಕ್’ ಸಿನಿಮಾದ ಬಗ್ಗೆ ನೆಗೆಟಿವ್ ಪ್ರಚಾರ ನಡೆಯುತ್ತಿರುವ ಕುರಿತು ಮಾತನಾಡಿದ ಶಿವಣ್ಣ, ಅದನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ಮಾಧ್ಯಮದವರೇ ಹುಡುಕಬೇಕು ಎಂದು ಹೇಳಿದ್ದಾರೆ. ಯಶ್ ಸಿನಿಮಾ ನಮ್ಮ ಹುಡುಗನ ಸಿನಿಮಾ. ‘ಟಾಕ್ಸಿಕ್’ ಟ್ರೇಲರ್ ಲಾಂಚ್‌ನ್ನು ನಾನೇ ಮಾಡಿದ್ದೆ. ನನ್ನ ತಮ್ಮ ಸಿನಿಮಾ ಮಾಡುತ್ತಿದ್ದಾನೆ ಎಂಬ ಖುಷಿ ನನಗಿತ್ತು. ನಾನು ಯಶ್ ಅವರನ್ನು ನನ್ನ ತಮ್ಮನಂತೆ ನೋಡಿದ್ದೇನೆ. ಹಾಗಾಗಿ ನನಗೆ ಸಿನಿಮಾ ಇಷ್ಟವಾಯಿತು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

‘ಸ್ಟಾರ್ ಆಗಿ ಸಿನಿಮಾ ನೋಡಿಲ್ಲ, ಪ್ರೇಕ್ಷಕನಾಗಿ ನೋಡಿದ್ದೇನೆ’

‘ಟಾಕ್ಸಿಕ್’ ಸಿನಿಮಾವನ್ನು ಹೈದರಾಬಾದ್‌ನಲ್ಲಿ ನೋಡಬೇಕು ಎಂದು ಮೊದಲೇ ಅಂದುಕೊಂಡಿದ್ದರೂ ಸಾಧ್ಯವಾಗಿರಲಿಲ್ಲ ಎಂದು ಶಿವಣ್ಣ ತಿಳಿಸಿದ್ದಾರೆ. ನಿನ್ನೆ ಸಿನಿಮಾಕ್ಕೆ ಟಿಕೆಟ್ ಬುಕ್ ಮಾಡಿದ್ದು, ಇಂದು ಮನೆಯವರೆಲ್ಲರೂ ಸೇರಿ ಚಿತ್ರ ವೀಕ್ಷಿಸಿದ್ದೇವೆ. ನಾನು ಶಿವರಾಜ್ ಕುಮಾರ್ ಆಗಿ ಸಿನಿಮಾ ನೋಡಲಿಲ್ಲ, ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಸಿನಿಮಾ ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ.

‘ಯಶ್‌ಗಾಗಿ ಬಂದಿದ್ದೇನೆ, ಆದರೆ ಕನ್ನಡ ಸಿನಿಮಾ ಬೆಳೆಯಬೇಕು’

ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ ಶಿವಣ್ಣ, ತಾವು ಮೊದಲಿನಿಂದಲೂ ಸಾಕಷ್ಟು ಹೀರೋಗಳ ಪರವಾಗಿ ನಿಂತಿದ್ದೇನೆ ಎಂದು ಹೇಳಿದ್ದಾರೆ. ನನಗೆ ನಮ್ಮವರು ಮತ್ತು ನಮ್ಮ ಇಂಡಸ್ಟ್ರಿ ಮುಖ್ಯ. ಯಶ್‌ಗಾಗಿ ಇಂದು ಬಂದು ಸಿನಿಮಾ ನೋಡಿದ್ದೇನೆ. ಆದರೆ ಉದ್ದೇಶ ಕನ್ನಡ ಚಿತ್ರರಂಗ ಬೆಳೆಯಬೇಕು ಎಂಬುದಷ್ಟೇ. ನಮ್ಮವರು ಕೇವಲ ಸ್ಟಾರ್ ಸಿನಿಮಾಗಳನ್ನೇ ನೋಡಬಾರದು, ಎಲ್ಲರ ಸಿನಿಮಾಗಳನ್ನೂ ನೋಡಬೇಕು. ಕನ್ನಡ ಸಿನಿಮಾ ಟಾಪ್‌ನಲ್ಲಿ ಇರಬೇಕು. ಯಾರೇ ಸ್ಟಾರ್ ಆಗಿದ್ದರೂ ಅವರು ಅಭಿಮಾನಿಗಳ ಸ್ಟಾರ್ ಅಷ್ಟೇ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಪೈರಸಿ ಬಗ್ಗೆ ಶಿವಣ್ಣ ಹೇಳಿದ್ದೇನು?

‘ಟಾಕ್ಸಿಕ್’ ಸಿನಿಮಾಕ್ಕೆ ಪೈರಸಿ ಕಾಟ ಎದುರಾಗುತ್ತಿರುವ ಬಗ್ಗೆಯೂ ಶಿವಣ್ಣ ಮಾತನಾಡಿದ್ದಾರೆ. ಪೈರಸಿ ಸಮಸ್ಯೆ ಮೊದಲಿನಿಂದಲೂ ಇದೆ. ಅದಕ್ಕೆ ಏನು ಮಾಡಬೇಕು ಎಂಬುದು ನಮಗೂ ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಈ ಹಿಂದೆ ‘ಟಾಕ್ಸಿಕ್’ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೂ ಶಿವರಾಜ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಆಗಲೂ ಯಶ್ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದ್ದ ಶಿವಣ್ಣ, ಇದೀಗ ಖುದ್ದು ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ್ದಾರೆ.

ಇನ್ನು ‘ಟಾಕ್ಸಿಕ್’ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ಶಿವರಾಜ್ ಕುಮಾರ್ ಸಿನಿಮಾ ವೀಕ್ಷಿಸಿ, ಯಶ್ ಅಭಿನಯ ಹಾಗೂ ಚಿತ್ರದ ಕ್ಲೈಮ್ಯಾಕ್ಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಅದರಲ್ಲೂ ‘ನಮ್ಮ ಸಿನಿಮಾ ಅಲ್ಲ, ಕನ್ನಡ ಸಿನಿಮಾ ಬೆಳೆಯಬೇಕು’ ಎಂಬ ಶಿವಣ್ಣನ ಮಾತು ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಚರ್ಚೆಯಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

400 ದಿನಗಳ ಶೂಟಿಂಗ್, 150 ಹಾಡು: ರವಿಚಂದ್ರನ್‌ 'I Am God The Crazy' ವಿಶೇಷತೆ ಏನು?
ಒಂದೇ ದಿನ, ಒಂದೇ ಬ್ಯಾಂಕ್, ಒತ್ತೆಯಾಳುಗಳು: ವಿಷ್ಣುವರ್ಧನ್‌ ಈ ಸಿನಿಮಾ ಹಿಂದಿದೆ ಥ್ರಿಲ್ಲರ್ ಕಥೆ!