ಯುಐ ಚಿತ್ರದ ಗುಟ್ಟು ರಟ್ಟಾಗೋಯ್ತಾ? ಬಿಡುಗಡೆಗೂ ಮೊದಲೇ ಯಾಕೆ ಹೀಗಾಯ್ತು!

By Shriram Bhat  |  First Published Dec 9, 2024, 11:37 AM IST

ಉಪೇಂದ್ರ ಚಿತ್ರವು ಸಾಮಾನ್ಯ ಚಿತ್ರಗಳಿಗಿಂತ ವಿಭಿನ್ನವಾಗಿ ಇರೋದಂತೂ ಸತ್ಯ. ಅವರ ಈ ಹಿಂದಿನ ನಿರ್ದೇಶನದ  ಎಲ್ಲಾ ಚಿತ್ರಗಳನ್ನು ನೋಡಿದಾಗ ಅದು ಮನದಟ್ಟಾಗುತ್ತದೆ. ಒಂದಕ್ಕಿಂತ ಇನ್ನೊಂದು ವಿಭಿನ್ನ ಚಿತ್ರಗಳೆ ಆಗಿವೆ. ಓಂ ಇರಲಿ, ಸೂಪರ್ ಇರಲಿ ಅಥವಾ ಎ & ಉಪೇಂದ್ರ ಇರಲಿ, ಎಲ್ಲವೂ..


ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಿರ್ದೇಶನ ಹಾಗೂ ನಟನೆಯ ಯುಐ ಚಿತ್ರವು ಇದೇ ತಿಂಗಳು 20ರಂದು, ಅಂದರೆ 20 ಡಿಸೆಂಬರ್ 2024ರಂದು ಜಗತ್ತಿನಾದ್ಯಂತ ತೆರೆಗೆ ಬರಲಿರುವುದು ಗೊತ್ತೇ ಇದೆ. ಬಹಳಷ್ಟು ವರ್ಷಗಳ ಬಳಿಕ ಉಪೇಂದ್ರ ಅವರು ನಿರ್ದೇಶನವನ್ನೂ ಮಾಡಿರುವ ಈ ಚಿತ್ರದ ಮೇಲೆ ಜಗತ್ತಿನಾದ್ಯಂತ ಸಹಜವಾಗಿಯೇ ನಿರೀಕ್ಷೆಯಿದೆ. ಸಾಮಾನ್ಯವಾಗಿ ಉಪೇಂದ್ರ ಚಿತ್ರಗಳು ಎಂದರೆ ಒಮ್ಮೆ ನೋಡಿದರೆ ಅರ್ಥವಾಗಲ್ಲ ಅನ್ನೋರು ಜಾಸ್ತಿ. ಆದರೆ, ಹಾಗೇನೂ ಇಲ್ಲ, ಅರ್ಥವಾಗುವವರಿಗೆ ಒಮ್ಮೆ ನೋಡಿದರೆ ಅರ್ಥವಾಗುತ್ತದೆ, ಆಗದವರಿಗೆ ಹತ್ತು ಬಾರಿ ನೋಡಿದರೂ ಅರ್ಥವಾಗಲ್ಲ ಬಿಡಿ ಅನ್ನೋ ಅಭಿಪ್ರಾಯ ಕೂಡ ಇದೆ. 

ಅದೇನೇ ಇದ್ದರೂ, ಉಪೇಂದ್ರ ಚಿತ್ರವು ಸಾಮಾನ್ಯ ಚಿತ್ರಗಳಿಗಿಂತ ವಿಭಿನ್ನವಾಗಿ ಇರೋದಂತೂ ಸತ್ಯ. ಅವರ ಈ ಹಿಂದಿನ ನಿರ್ದೇಶನದ  ಎಲ್ಲಾ ಚಿತ್ರಗಳನ್ನು ನೋಡಿದಾಗ ಅದು ಮನದಟ್ಟಾಗುತ್ತದೆ. ಒಂದಕ್ಕಿಂತ ಇನ್ನೊಂದು ವಿಭಿನ್ನ ಚಿತ್ರಗಳೇ ಆಗಿವೆ. ಓಂ ಇರಲಿ, ಸೂಪರ್ ಇರಲಿ ಅಥವಾ ಎ & ಉಪೇಂದ್ರ ಇರಲಿ, ಎಲ್ಲವೂ ವಿಭಿನ್ನ ಹಾಗೂ ಟ್ರೆಂಡ್ ಸೆಟ್ಟರ್ ಚಿತ್ರಗಳೇ ಆಗಿವೆ. ಮುಂಬರುವ ಯುಐ ಚಿತ್ರದ ಬಗ್ಗೆಯೂ ಅಷ್ಟೇ, ಅದು ಖಂಡಿತ ಡಿಫ್ರೆಂಟ್ ಆಗಿರುತ್ತದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಅದೇ ರೀತಿ ಯುಐ ಚಿತ್ರದಲ್ಲಿ ಏನಿದೆ ಎಂಬುದೀಗ ಬಹಿರಂಗವಾಗಿದೆ. 

Tap to resize

Latest Videos

ಕಿಚ್ಚ ಸುದೀಪ್ ಹೇಳಿರುವುದೇನು ಆಗಿರುವುದೇನು? ಉಲ್ಟಾ ಪ್ರೊಜೆಕ್ಷನ್ ಅಂದ್ರೆ ಇದೇನಾ?

ಹೌದು, ಉಪೇಂದ್ರ ಯುಐ ಚಿತ್ರವು ಬಿಡುಗಡೆ ಆಗುವುದಕ್ಕೂ ಮೊದಲೇ ಆ ಚಿತ್ರದಲ್ಲಿ ಏನಿದೆ ಎಂಬ ಗುಟ್ಟು ರಟ್ಟಾಗಿಬಿಟ್ಟಿದೆ. ಅದೆಷ್ಟೇ ಸೀಕ್ರೆಟ್ ಕಾಪಾಡಿಕೊಂಡರೂ ಎಲ್ಲೋ ಒಂದು ಕಡೆ 'ವಾರ್ನರ್' ನೋಡಿರುವ ಜನರಿಗೆ ಅದರಲ್ಲೇನಿದೆ ಎಂಬುದು ಗೊತ್ತಾಗಿದೆ. ಈಗ ಉಪೇಂದ್ರ ಚಿತ್ರ ಒಂಥರಾ ಓಪನ್ ಸೀಕ್ರೆಟ್ ಎನ್ನಬಹುದು. ಹಾಗಿದ್ದರೆ ಅದರಲ್ಲೇನಿದೆ ಗೊತ್ತಾ? 'ಒಂದು, ನಮ್ಮ ಸಮಾಜದಲ್ಲಿರುವ ಜಾತಿ ಪದ್ಧತಿ ಬಗ್ಗೆ ವಿರೋಧವಿದೆ, ಎರಡು, ರಾಜಕೀಯ ನಾಯಕರು ನಮ್ಮ ದೇಶವನ್ನು ಉನ್ನತಿಗೆ ಬದಲು ಅವನತಿಗೆ ತಳ್ಳಿದ್ದಾರೆ' ಎಂಬ ಬಗ್ಗೆ ಮಾಹಿತಿ ಜೊತೆಗೆ 2040ರಲ್ಲಿ ನಮ್ಮ ಭಾರತ ಹೇಗೆ ಇರಲಿದೆ ಎಂಬ ಬಗ್ಗೆಯೂ ಭವಿಷ್ಯವಾಣಿ ಇದೆ. 

ಉಪ್ಪಿಯವರ ಯುಐ ಚಿತ್ರದಲ್ಲಿ ಏನಿದೆ ಅಂತ ಗೊತ್ತಾದರೂ ಕೂಡ ಆ ಚಿತ್ರವನ್ನು ಜನರು ನೋಡುವುದು ಕನ್ಫರ್ಮ್. ಏಕೆಂದರೆ, ಏನಿದೆ ಅಂತ ಗೊತ್ತಾದರೂ ಅದನ್ನು ಹೇಗೆ ಹೇಳಿದ್ದಾರೆ, ಯಾವ ರೀತಿಯಲ್ಲಿ ಅದಕ್ಕೆ ಲಾಜಿಕ್ ಕೊಟ್ಟು ಮ್ಯಾಜಿಕ್ ಮಾಡಿದ್ದಾರೆ, ಅಷ್ಟೇನಾ ಇರೋದು ಅಥವಾ ಇನ್ನೇನಾದ್ರೂ ಇದ್ಯಾ ಅಂತ ನೋಡೋದಕ್ಕಾದ್ರೂ ಯುಐ ಚಿತ್ರ ನೋಡಲೇಬೇಕಾಗುತ್ತೆ. ಏಕೆಂದರೆ, ಉಪೇಂದ್ರ ಏನೂ ದಡ್ಡರಲ್ಲ, ವಾರ್ನರ್ ಮೂಲಕ ಇಡೀ ಸಿನಿಮಾ ಕಂಟೆಂಟ್ ಬಿಟ್ಟುಕೊಡಲಾರರು. ಅಂದ್ರೆ, 'ಜಾತಿ ಪದ್ಧತಿ ಬಗ್ಗೆ ವಿರೋಧ ಹಾಘೂ ರಾಜಕೀಯ ನಾಯಕರ ಸಮಸ್ಯೆ ಬಗ್ಗೆ ಮಾತ್ರವಲ್ಲ, ಅದರಲ್ಲಿ ಇನ್ನೂ ಸಾಕಷ್ಟು ಸಂಗತಿಗಳು ಇವೆ ಎನ್ನಬಹುದು. 

ಬರಬೇಡಿ ಅಂತ ಯಾರಿಗೆ ಯಾರೂ ಹೇಳೋಕಾಗಲ್ಲ, ಬರಲಿ ಬಿಡಿ; ನೀವು ಎರಡೂ ನೋಡಿ!

ಒಟ್ಟಿನಲ್ಲಿ, ಬರಲಿರುವ ಉಪೇಂದ್ರ ಯುಐ ಚಿತ್ರಕ್ಕೆ ಈಗಗಾಲೇ ಭಾರೀ ನಿರೀಕ್ಷೆ ಮನೆಮಾಡಿದೆ. ಬಿಡುಗಡೆಯಾಗಲಿರುವ ಚಿತ್ರವು ನಿರೀಕ್ಷೆ ನಿಜವಾಗಿಸುತ್ತೆ ಅನ್ನೋ ನಂಬಿಕೆ ಎಲ್ಲರಲ್ಲಿದೆ. ಯಾವತ್ತೂ ಉಪೇಂದ್ರ ನಿರ್ದೇಶನದ ಚಿತ್ರಗಳು ಸಿನಿಮಾ ಪ್ರಿಯರ ನಿರೀಕ್ಷೆಯನ್ನು ಸುಳ್ಳು ಮಾಡಿಲ್ಲ, ಕೇವಲ ಅವರ ನಟನೆಯ ಚಿತ್ರಗಳು ಕೆಲವೊಮ್ಮೆ ಜನರಿಗೆ ಇಷ್ಟವಾಗಿಲ್ಲ ಅಷ್ಟೇ. ಆದರೆ, ಮುಂದೆ ಬರಲಿರುವ ಯುಐ ಚಿತ್ರವು ಅವರ ನಟನೆ ಮಾತ್ರವಲ್ಲ, ನಿರ್ದೇಶನವನ್ನೂ ಒಳಗೊಂಡಿದೆ. ಹೀಗಾಗಿ ಸಹಜವಾಗಿಯೇ ನಿರೀಕ್ಷೆ ಮೂಡಿದೆ, ಅದು ಫಲಿಸಲಿದೆ ಎಂಬ ನಂಬಿಕೆಯೂ ಬಲವಾಗಿದೆ. 

click me!