
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಇಂದು 61ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಆಚರಣೆ ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ವರ್ಷ ಬರ್ತಡೇಗೆ ನಿಮ್ಮ ಜೊತೆ ಇರೋದಕ್ಕೆ ಆಗೋದಿಲ್ಲ ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ ಎಂದು ಪೋಸ್ಟ್ ಹಾಕಿದ್ದರು. ಇದನ್ನು ನೋಡಿಕೊಂಡ ಫ್ಯಾನ್ಸ್‌ಗೆ ಬೇಸರ ಆಗಿದ್ದು ನಿಜ ಆದರೆ ಸಾಮಾಜಿಕ ಜಾಲತಾಣದಲ್ಲಿ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಶಿವಣ್ಣ ಸ್ನೇಹಿತರು, ಜರ್ನಿ ಪ್ರತಿಯೊಂದನ್ನು ಮತ್ತೆ ಹಂಚಿಕೊಳ್ಳುತ್ತಿದ್ದಾರೆ ಪ್ಯಾನ್ಸ್.
ರಜನಿಕಾಂತ್- ಶಿವಣ್ಣ ಸ್ನೇಹ:
ತಮಿಳು ಚಿತ್ರರಂಗದ ಓನ್ ಅಂಡ್ ಓನ್ಲಿ ತಲಾ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್‌ಗೆ 70 ವರ್ಷ ದಾಟಿದೆ, ಶಿವಣ್ಣ ಈಗ 61ರ ಜರ್ನಿ ಶುರು ಮಾಡಿದ್ದಾರೆ. ಇಷ್ಟು ವಯಸ್ಸಿನ ಅಂತವಿದ್ದರೂ ಹೇಗೆ ಪರಿಯಚವಾದರು? ಎಲ್ಲಿಂದ ಸ್ನೇಹ ಬೆಳೆಯಿತ್ತು? ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಾಮಾನ್ಯ. ಅದರಲ್ಲೂ ರಜನಿಕಾಂತ್ ಬೆಂಗಳೂರಿಗೆ ಬಂದರೆ ತಪ್ಪದೆ ಅಣ್ಣಾವ್ರ ಮನೆಗೆ ಭೇಟಿ ನೀಡುತ್ತಾರೆ, ಚೆನ್ನೈಗೆ ಶಿವಣ್ಣ ಭೇಟಿ ನೀಡಿದರೆ ತಪ್ಪದೆ ರಜನಿಕಾಂತ್ ಮನೆಯ ಊಟ ಮಾಡಿನೇ ಬರೋದು. ಈ ನಂಟಿನ ಬಗ್ಗೆ ಶಿವಣ್ಣ ಒಮ್ಮೆ ಮಾತನಾಡಿದ್ದಾರೆ.
19 ವರ್ಷಗಳ ನಂತರ ದರ್ಶನ್ ನಟನೆಯ ಶಾಸ್ತ್ರಿ ಸಿನಿಮಾ ಮತ್ತೆ ರಿಲೀಸ್; ಏನಿದರ ಹಿಂದಿನ ಪ್ಲ್ಯಾನ್?
'ಕಮಲ್ ಹಾಸನ್ ನನ್ನ ನೆಚ್ಚಿನ ನಟ ಆದರೆ ಕಮಲ್ ಹಾಸನ್ ಜೊತೆ ಸಿನಿಮಾ ಮಾಡುವ ಅವಕಾಶ ನನಗೆ ಸಿಕ್ಕಿಲ್ಲ. ರಜನಿಕಾಂತ್ ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರದವರು ಅವರ ಜೊತೆ ನಟಿಸುವ ಅವಕಾಶ ಸಿಕ್ಕರೆ ಹೇಗೆ ಬೇಡ ಎಂದು ಹೇಳಲಿ? ನನಗೆ ರಜನಿಕಾಂತ್ ಜೊತೆ ಹತ್ತಿರದ ನಂಟಿದೆ. ಶಬರಿಮಲೆಗೆ ಹೋಗುವಾಗ ಒಟ್ಟಿಗೆ ಹೋಗಿದ್ದೀವಿ. ಅಪ್ಪಾಜಿ ಜೊತೆ ರಜನಿಕಾಂತ್ ತುಂಬಾ ಸಮಯ ಕಳೆದಿದ್ದಾರೆ. ಯಾವಾಗಲೂ ನಾವು ರಜನಿಕಾಂತ್ ಮನೆಗೆ ಊಟಕ್ಕೆ ಹೋಗುತ್ತಿದ್ದೆವು. ವೀರಪ್ಪನ್ ಘಟನೆ ಆದಾಗ ರಜನಿಕಾಂತ್ ನಮಗೆ ಕಾಲ್ ಮಾಡಿ ಮಾತನಾಡುತದತಾ ಇದ್ದರು. ತುಂಬಾನೇ ಮಾರಲ್ ಸಪೋರ್ಟ್ ನೀಡಿದ್ದಾರೆ. ಅವರ ಜೊತೆ ನಟಿಸೋ ಆಫರ್ ಬಂದಾಗ ನೋ ಅನ್ನೋಕೆ ಆಗಲ್ಲ' ಎಂದು ಜೈಲರ್ ಸಿನಿಮಾ ಪ್ರಚಾರದ ಸಮಯದಲ್ಲಿ ಶಿವಣ್ಣ ಮಾತನಾಡಿದ್ದರು.
ಸೆಕ್ಯೂರಿಟಿ ಗಾರ್ಡ್‌ಗೆ ದುಬಾರಿ ಫೋನ್ ಗಿಫ್ಟ್ ಕೊಟ್ಟ ಯೂಟ್ಯೂಬರ್ ಸಮೀರ್; ಚಪ್ಪಾಳೆ ಎಂದ ನೆಟ್ಟಿಗರು!
ರಜನಿಕಾಂತ್ ಮೂಲತಃ ಬೆಂಗಳೂರಿನವರು. ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟ ಮೇಲೂ ಇಲ್ಲಿಯೇ ಇದ್ದರು. ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾದಮೇಲೆ ಚೆನ್ನೈನಲ್ಲಿ ವಾಸಿಸಲು ಶುರು ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.