ಜೈಲಿನೊಳಗೆ ಕಾಡು ಹೇಗಿದ್ದೀಯಾ ಎಂದು ಕಣ್ಣೀರು ಹಾಕಿದ ನಟ ದರ್ಶನ್; ನಿರ್ಮಾಪಕ ಶಿವಕುಮಾರ್ ಭಾವುಕ

By Sathish Kumar KH  |  First Published Jul 11, 2024, 4:31 PM IST

ಪರಪ್ಪನ ಅಗ್ರಹಾರ ಜೈಲಿನ ಒಳಗಿದ್ದರೂ ನಾನು ಹೋಗಿ ದರ್ಶನ್‌ ಭೇಟಿ ಮಾಡುತ್ತಿದ್ದಂತೆ ಕಾಡು ಹೇಗಿದ್ದೀಯಾ ಎಂದು ಕಣ್ಣೀರು ಹಾಕಿದರು ಎಂದು ನಿರ್ಮಾಪಕ ಶಿವಕುಮಾರ್ ಹೇಳಿದರು.


ಬೆಂಗಳೂರು ಪರಪ್ಪನ ಅಗ್ರಹಾರ (ಜು.11): ನಟ ದರ್ಶನ್ ಜೈಲಿನಲ್ಲಿ ತುಂಬಾ ಬೇಜಾರು ಆಗಿದ್ದಾರೆ. ಮಾಡದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ನಾನು ಅವರನ್ನು ಹೋಗಿ ಭೇಟಿ ಮಾಡುತ್ತಿದ್ದಂತೆ ಕಾಡು ಹೇಗಿದ್ದೀಯಾ ಎಂದು ಕಣ್ಣೀರು ಹಾಕಿದರು ಎಂದು ನಿರ್ಮಾಪಕ ಹಾಗೂ ದರ್ಶನ್‌ನ ಬಾಲ್ಯದ ಗೆಳೆಯ ಶಿವಕುಮಾರ್ ಹೇಳಿದರು.

ರೇಣುಕಾಸ್ಬಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಯಾಗಿ ಕಳೆದ 21 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ನೋಡಲು ಹೋಗಿಬಂದ ನಿರ್ಮಾಪಕ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ದರ್ಶನ್ ಕಣ್ಣೀರು ಹಾಕಿದ ಬಗ್ಗೆ ಅಳಲು ತೋಡಿಕೊಂಡರು. ಮುಂದುವರೆದು, ನಟ ದರ್ಶನ್ ಜೈಲಿನಲ್ಲಿ ತುಂಬಾ ಬೇಜಾರು ಆಗಿದ್ದಾರೆ. ಮಾಡದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಪ್ರಕರಣ ಇದೆ. ಸತ್ಯಾಸತ್ಯತೆ ಅವರಿಗೆ ಮಾತ್ರ ಗೊತ್ತು. ಇಂತಹ ಸಂದರ್ಭಗಳಲ್ಲಿ ನಾವು ಏನೂ ಮಾತನಾಡೊದಿಲ್ಲ ಎಂದು ಹೇಳಿದರು.

Latest Videos

undefined

ನಟ ದರ್ಶನ್ ಜೈಲಿಗೆ ಹೋಗಿರೋದು ನಮ್ಮನೆಯವರೇ ಹೋಗಿದ್ದಾರೆಂಬ ಭಾವನೆ ಬರುತ್ತಿದೆ; ಡಾಲಿ ಧನಂಜಯ

ದರ್ಶನ್ ಕೋಪಿಷ್ಠ ಎನ್ನುವ ವಿಚಾರದ ಬಗ್ಗೆ ಮಾತನಾಡಿ, ಎಲ್ಲರಿಗೂ ಕೋಪ ಇರುತ್ತದೆ. ಅದರಂತೆ ನಮಗೂ ಕೋಪ ಇದೆ. ಆದರೆ ಕೊಲೆ ಮಾಡುವ ಮಟ್ಟಕ್ಕೆ ಇಲ್ಲ. ಇನ್ನೂ ಭೇಟಿ ವೇಳೆ ಧೈರ್ಯವಾಗಿರಿ. ಇದು ಹಣೆ ಬರಹ, ಘಟನೆ ಆಗಿ ಹೋಗಿದೆ. ಈಗ ಏನೂ ಮಾಡಲು ಆಗೋದಿಲ್ಲ. ಇದೆಲ್ಲರದ ನಡುವೆಯೂ ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ದರ್ಶನ್ ವಿಚಾರಿಸಿದರು. ಇಂಡಸ್ಟ್ರಿ ಹೇಗೆ ನಡೆಯುತ್ತಿದೆ? ಸಿನಿಮಾಗಳು ಯಾವುದು ರಿಲೀಸ್ ಆಗ್ತಾ ಇದೆ? ಎಂದು ಕೇಳಿದರು. ನಟ ದರ್ಶನ್ ಮನಸ್ಸಿನಲ್ಲಿ ಎಷ್ಟೇ ನೋವಿದ್ರು ತೋರಿಸಿಕೊಳ್ಳೊದಿಲ್ಲ. ಯಾವಾಗಲೂ ನಗುತಾ ನಗುತಾ ಇರ್ತಾನೆ ಎಂದು ತಿಳಿಸಿದರು.

ನನ್ನ ಕಂಡಾಗ ನಟ ದರ್ಶನ್ ಕಣ್ಣೀರು ಹಾಕಿದ್ದರು. ನಾನು ಕೂಡ ಕಣ್ಣೀರು ಹಾಕಿದೆ. ಆ ಸ್ಥಿತಿಯಲ್ಲಿ ನಾವು ದರ್ಶನ್  ನೋಡೊದಿಕ್ಕೆ ಬೇಜಾರು. ಹೊರಗಡೆ ನನ್ನನ್ನು ಯಾವಾಗಲೂ ಕಾಡು ಅಂತಾ ಕರೆಯುತ್ತಿದ್ದರು. ಈಗ ಕೊಲೆ ಕೇಸಿನ ಆರೋಪದಲ್ಲಿ ಜೈಲಿನ ಒಳಗಡೆ ಇದ್ದರೂ ಸಹ ನನ್ನನ್ನು ಅದೇ ಆತ್ಮೀಯತೆಯಿಂದ ಕಾಡು ಎಂದು ಕರೆದರು ಎಂದು ನಟ ದರ್ಶನ್ ಭೇಟಿ ಬಳಿಕ ಬಾಲ್ಯದ ಸ್ನೇಹಿತ ಶಿವಕುಮಾರ್ ಹೇಳಿಕೆ ನೀಡಿದರು.

ನಟ ಧ್ರುವಾ ಸರ್ಜಾ ಬಗ್ಗೆ ವಿಡಿಯೋ ಹರಿಬಿಟ್ಟ ವಿಕ್ಕಿಪೀಡಿಯಾ ವಿಕಾಸ್, ಮೇಘನಾ ರಾಜ್ ಕಮೆಂಟ್‌!

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿಗೆ ಹೋಗಿರುವುದು ನಮ್ಮ ಮನೆಯವರೇ ಅಪರಾಧ ಮಾಡಿದ್ದಾರೆಂಬ ಭಾವನೆ ಬರುತ್ತಿದೆ. ಮಾಧ್ಯಮದವರು ನಮ್ಮ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಆರೋಪಿಗಳು ನಮ್ಮ ಮನೆಯವರೇ ಆದಾಗ ಏನ್ ಮಾಡೋದು ಹೇಳಿ. ಅಲ್ಲಿ ಒಂದು ದುರಂತ ಆಗಿದೆ. ಜೀವ ಹೋಗಿದೆ. ಆ ಮನುಷ್ಯನ ತಂದೆ, ತಾಯಿ ಮುಖ ನೋಡಿದಾಗ ಬೇಜಾರಾಗುತ್ತದೆ. ತಪ್ಪು ಮಾಡಿದ್ದಾರೆಂದರೆ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಆದರೆ, ಈ ಕೊಲೆ ಆರೋಪದಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿರುವುದು ಮನಸ್ಸಿಗೆ ತುಂಬಾ ಬೇಜಾರಾಗುತ್ತದೆ.
- ಡಾಲಿ ಧನಂಜಯ, ಚಿತ್ರನಟ

click me!