'ವೀಕ್ ಡೇ ವಿತ್ ರಮೇಶ್‌'; ಪ್ರತಿ ವಿದ್ಯಾರ್ಥಿಗಳಿಗೂ ಇದೆ ಅವಕಾಶ!

By Suvarna NewsFirst Published Jun 15, 2020, 4:22 PM IST
Highlights

ವಿದ್ಯಾರ್ಥಿಗಳು ಯಶಸ್ವಿ ಸೂತ್ರಗಳನ್ನು ತಿಳಿದುಕೊಳ್ಳಬೇಕೆಂದರೆ ಮಿಸ್‌ ಮಾಡದೆ  ನಟ ರಮೇಶ್‌ ಅರವಿಂದ್ ನಡೆಸಿಕೊಡುವ ವೆಬಿನಾರ್‌ 'ವೀಕ್ ಡೇ ವಿತ್‌ ರಮೇಶ್‌'ನಲ್ಲಿ ಪಾಲ್ಗೊಳ್ಳಿ....

ಮಹಾಮಾರಿ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾ 3 ತಿಂಗಳುಗಳ ಕಾಲ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಕ್ಲೋಸ್‌ ಆಗಿರುವ  ಕಾರಣ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ ಆದರೆ ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ನಷ್ಟವಾಗಬಾರದು ಎಂಬ ಉದ್ದೇಶದಿಂದ  ವರ್ಚುಯಲ್‌ ಪಾಠ ಮಾಡುವ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ನೀಡಿ ನಿರಂತರವಾಗಿ  ಮಕ್ಕಳನ್ನು ತೊಡಗಿಸಿಕೊಂಡಿದ್ದಾರೆ. 

`ನಾನು ಆಕಾಶದಿಂದ ಹಾರಲಿಕ್ಕೂ ಸಿದ್ಧ' ಎನ್ನುತ್ತಾರೆ ರಮೇಶ್ ಅರವಿಂದ್‌ 

ಆನ್‌ಲೈನ್‌ನಿಂದ ಪಾಠ ಮಾಡಬಹುದು ಹೊರತು ಯಶಸ್ವಿ ಸೂತ್ರಗಳು ಹಾಗೂ ಉತ್ತಮ ಜೀವನಕ್ಕೆ  ಮಾರ್ಗದರ್ಶನಗಳ ಬಗ್ಗೆ ಮಕ್ಕಳು ಹೇಗೆ ತಿಳಿದುಕೊಳ್ಳಬೇಕೆನ್ನುವ  ಮಾಹಿತಿ ಇಲ್ಲಿದೆ ನೋಡಿ..

ಶಿಕ್ಷಣ ಇಲಾಖೆ ಮಕ್ಕಳಿಗೆ ಮಾರ್ಗದರ್ಶಿಯಾಗಿ, ಅವರಿಗೆ ಯಶಸ್ಸಿನ ಹಾದಿ ಹೇಳಿಕೊಡಲು ಸ್ಟಾರ್ ನಟರ  ಮೊರೆ ಹೋಗಿದ್ದಾರೆ. ಈಗಾಗಲೇ  ಸಿಕ್ಕಾಪಟ್ಟೆ ಯಶಸ್ವಿಯಾಗಿರುವ  ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮದ  ರೀತಿಯಲ್ಲೇ ರಮೇಶ್‌ ಅವರ ಇನ್ನೊಂದು ಕೆಲಸ ಶುರುವಾಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ನಟ ರಮೇಶ್‌ ಇನ್‌ಸ್ಪಿರೇಷನ್‌ ಟಾಕ್‌ ವಿಡಿಯೋಗಳನ್ನು ನಾವು ನೋಡಿದ್ದೀವಿ ಹಾಗೇ ಇದೂ ಇರಲಿದೆ ಎಂಬುದು ಪೋಷಕರ ಕಲ್ಪನೆ.

ಪೌರ ಕಾರ್ಮಿಕರಿಗೆ ರಮೇಶ್ ಅರವಿಂದ 'ಹೂಮಳೆ'

ಇದೇ ಜೂನ್ 18ರಿಂದ ವೀಕ್‌ ಡೇ ವಿತ್ ರಮೇಶ್‌ ಶುರುವಾಗಲಿದೆ. ಈ ವೆಬಿನಾರ್‌ ಯೂಟ್ಯೂಬ್‌ನಲ್ಲಿ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಬೇಕೆಂಬ ಸಲುವಾಗಿ ಶಿಕ್ಷಣ ಇಲಾಖೆಯು 'ವಿಜಯೀಭವ' ಎಂಬ ಹೆಸರಿನ ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರಸಾರಮಾಡಲಿದೆ . ಜೂನ್ 18 ಗುರುವಾರ ಬೆಳಗ್ಗೆ 10.30ರಿಂದ 11.30 ಗಂಟೆ ಅಂದ್ರೆ ಸುಮಾರು ಒಂದು ಗಂಟೆಗಳ ಕಾಲ ರಮೇಶ್ ಮಾತನಾಡಲಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!