
2004ರಲ್ಲಿ ತಮಿಳಿನ 'ಮಚ್ಚಿ' ಸಿನಿಮಾದಲ್ಲಿ ಅಭಿನಯಿಸಿ, 2005ರಲ್ಲಿ 'ಜ್ಯಾಕ್‌ಪಾಟ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಶುಭಾಪೂಂಜಾ ಈಗ ಮದುವೆಯಾಗುವ ಸಂಭ್ರಮದಲ್ಲಿದ್ದಾರೆ.
ನಟಿ ಶುಭಾ ಪೂಂಜಾ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿ; ಹುಡುಗ ಯಾರು?
ಸಿಕ್ಕಾಪಟ್ಟೆ ಎನರ್ಜಿ,ತುಂಟ ತುಂಟ ಮಾತುಗಳು ಸದಾ ಪಾಸಿಟಿವ್ ಆಗಿ ಯೋಚನೆ ಮಾಡುವ ನಟಿ ಶುಭಾ ಪೂಂಜಾ. ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗಿನಿಂದಲೂ ಕಾಂಟ್ರವರ್ಸಿ ಇವರ ಬೆಸ್ಟ್ ಫ್ರೆಂಡ್. ಆದರೀಗ ಅವರು ಕೆಲ ವಿಚಾರದ ಬಗ್ಗೆ ಸೀರಿಯಸ್ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರಂತೆ.
ಲಾಕ್‌ಡೌನ್ ಹಳ್ಳಿ ಲೈಫ್:
ಲಾಕ್‌ಡೌನ್ ಹಂತ ಹಂತವಾಗಿ ಮುಂದೋಗುತ್ತಿದ್ದ ಕಾರಣ ಶುಭಾ ತಮ್ಮ ಹುಟ್ಟೂರಿಗೆ ತೆರಳಿ ಸ್ವಲ್ಪ ದಿನಗಳ ಕಾಲ ಹಳ್ಳಿ ಜೀವನ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. ಗಿಡ ನೆಡುತ್ತಾ ಅನೇಕ ಕೆಲಸಗಳನ್ನು ಕಲಿತಿದ್ದಾರೆ. ಲಾಕ್‌ಡೌನ್ ತೆರವುಗೊಂಡ ನಂತರ ಬೆಂಗಳೂರಿಗೆ ಆಗಮಿಸಿ ತಮ್ಮ ಕೆಲಸಗಳನ್ನು ಪ್ರಾರಂಭಿಸಿದ್ದಾರೆ.
ಲೈಫ್ ಪಾಠ:
ಚಿತ್ರರಂಗದಲ್ಲಿ ಕೆಲಸ ಮಾಡುತ್ತಾ ಜೀವನಕ್ಕೆ ಬೇಕಾದ ಮುಖ್ಯ ಪಾಠಗಳನ್ನು ಕಲಿತ್ತಿದ್ದಾರೆ. ಬದುಕಿನಲ್ಲಿ ಕಮಡ ಏಳುಬೀಳುಗಳು ತನ್ನ ತಪ್ಪು ಏನೆಂದು ತಿಳಿಸಿದೆಯಂತೆ ಹಾಗಾಗಿ ಮತ್ತೆ ಮಾಡಿರುವ ತಪ್ಪನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಕಾಂಟ್ರವರ್ಸಿ ಫೇವರೆಟ್ ನಟಿಯಾಗಿರುವ ಶುಭಾ ಇವುಗಳ ನಡುವೆ ಹೇಗೆ ಬದುಕಬೇಕೆಂದು ತಿಳಿದುಕೊಂಡಿದ್ದಾರೆ. ತನ್ನ ಬಗ್ಗೆ ಬರೆಯುವವರನ್ನು ದೂಷಿಸೋದಿಲ್ಲ ಆದರೆ ಸ್ವೀಕರಿಸುವುದನ್ನು ಕಲಿಯುವೆ ಎಂದು ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ಮದುವೆ:
ನಟಿ ಶುಭಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಜಯಕರ್ನಾಟದ ದಕ್ಷಿಣ ಭಾಗದ ಉಪಾಧ್ಯಕ್ಷರಾದ ಸುಮಂತ್ ಮಹಾಬಲ ಅವರನ್ನು ಒಂದು ವರ್ಷಗಳಿಂದ ಪ್ರೀತಿಸುತ್ತಿದ್ದು ಕುಟುಂಬದವರ ಒಪ್ಪಿಗೆ ಪಡೆದು ಡಿಸೆಂಬರ್‌ನಲ್ಲಿ ಹಸೆಮಣೆ ಏರಲಿದ್ದಾರೆ. ಸುಮಂತ್ ಮೂಲತಃ ಮಂಗಳೂರಿನವರಾಗಿದ್ದು ಉದ್ಯಮಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.