
56 ವರ್ಷದ ನಿಮ್ಮ ಜರ್ನಿಯ ಬಗ್ಗೆ ಹೇಳುವುದಾದರೆ?
ಎಲ್ಲವನ್ನೂ ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತೇನೆ. ನನ್ನ ಬಾಳಲ್ಲಿ ಎಲ್ಲವೂ ಹಿತವಾಗಿಯೇ ನಡೆದಿದೆ. ನನ್ನ ಯಶಸ್ಸಿಗೆ 5 ಕಾರಣ.
1. ಮಗ, ಗಂಡ, ನಟ- ಹೀಗೆ ಬದುಕಿನ ಪ್ರತಿಯೊಂದು ಪಾತ್ರದಲ್ಲೂ ನಾನು ಶೇ.100ರಷ್ಟುನನ್ನ ಕರ್ತವ್ಯ ಮಾಡಿದ್ದೇನೆ.
"
2. ನನ್ನ ವೃತ್ತಿಗೆ ಸಂಬಂಧಿಸಿದ ಹಾಗೆ ಸದಾ ಹೊಸದನ್ನು ಕಲಿಯುತ್ತಿದ್ದೇನೆ.
ರಾಯಭಾರಿ ಆದ ಬಳಿಕ ರಮೇಶ್ ಮೊದಲ ವಿಡಿಯೋ..! ಇಲ್ಲಿದೆ ನೋಡಿ
3. ನಾನು ಸ್ಥಿತಪ್ರಜ್ಞ. ಯಾವುದೇ ವಿಚಾರದ ಬಗ್ಗೆಯೂ ತಕ್ಷಣವೇ ಪ್ರತಿಕ್ರಿಯೆ ನೀಡುವುದಿಲ್ಲ.
4. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತೇನೆ. ಯಾರ ಉದ್ದೇಶದ ಬಗ್ಗೆಯೂ ನಾನು ಅನುಮಾನ ಪಡುವುದಿಲ್ಲ.
5. ನಿಮ್ಮ ಯೋಚನೆಯೇ ನೀವು. ನಾನು ಎಂದರೆ ನನ್ನ ಯೋಚನೆ.
ಬತ್‌ರ್‍ಡೇ ಅಂದರೆ..
ನಮ್ಮ ಮನೆಯಲ್ಲಿ ಬರ್ತ್‌ಡೇ ಸೆಲೆಬ್ರೇಟ್ ಮಾಡುವುದೆಲ್ಲಾ ಇರಲಿಲ್ಲ. ಸಿನಿಮಾ ರಂಗಕ್ಕೆ ಬಂದ ಮೇಲೆ ಅಭಿಮಾನಿಗಳು, ಹಿತೈಷಿಗಳು ಹರಸುತ್ತಾರೆ ಅಷ್ಟೆ. ಆದರೆ ನನಗೆ ಬರ್ತ್‌ಡೇ ಎಂದರೆ ಒಂದು ಸುಂದರ ಘಟನೆ ನೆನಪಿಗೆ ಬರುತ್ತದೆ. ನಾನು 8ನೇ ಕ್ಲಾಸ್‌ನಲ್ಲಿ ಓದುವಾಗ ಇಂಟರ್ ಸ್ಕೂಲ್ ಕಾಂಪಿಟೇಷನ್‌ಗೆ ಎಂದು ಕ್ರೈಸ್ಟ್ ಸ್ಕೂಲ್‌ಗೆ ಹೋಗಿದ್ದೆ. ಅಲ್ಲಿ 7-8 ಪ್ರಶಸ್ತಿಗಳನ್ನು ನಾನೇ ಪಡೆದಿದ್ದೆ. ರಾಜ್ಯಪಾಲರಾದ ಗೋವಿಂದ್ ನಾರಾಯಣ್ ಪ್ರಶಸ್ತಿ ಪ್ರದಾನ ಮಾಡುವಾಗ ನನ್ನ ಬಗ್ಗೆ ‘ಎಲ್ಲಾ ಪ್ರಶಸ್ತಿಗಳನ್ನೂ ನೀನೇ ಪಡೆದಿದ್ದೀಯಲ್ಲೋ’ ಎಂದು ತಲೆ ಸವರುತ್ತಾ, ‘ಎಷ್ಟೋ ಮರಿ ನಿನ್ನ ವಯಸ್ಸು’ ಎಂದರು. ಆಗ ನಾನು ಇವತ್ತಿಗೆ ನನಗೆ 14 ವರ್ಷ ಎಂದಿದ್ದೆ. ಆಗ ಅವರು ‘ಓಹ್ ಇಂದು ನಿನ್ನ ಬತ್‌ಡೇನಾ? ಅಯ್ಯಯ್ಯೋ ನಿನಗೆ ಏನೂ ಗಿಫ್ಟ್ ಕೊಡೋಕೆ ಆಗಿಲ್ಲ, ಒಂದು ಕೆಲಸ ಮಾಡು ನಾಳೆ ರಾಜ ಭವನಕ್ಕೆ ಬಾ’ ಎಂದಿದ್ದರು. ನಾಳೆಯೇ ರಾಜಭವನದ ಬಳಿ ಹೋಗಿ ಅಲ್ಲಿದ್ದ ವಾಚ್‌ಮನ್‌ಗೆ ನಡೆದ ಘಟನೆ ಹೇಳಿದೆ. ಆದರೆ ಅದನ್ನು ಅವನು ನಂಬದೇ ನನ್ನನ್ನು ವಾಪಸ್ ಮನೆಗೆ ಕಳಿಸಿದ. ಇದೆಲ್ಲವನ್ನೂ ಗವರ್ನರ್ ಅವರ ಮಡದಿ ದೂರದಿಂದ ನೋಡಿ ಗೋವಿಂದ್ ನಾರಾಯಣ್ ಅವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ರಾಜ್ಯಪಾಲರು ಮಧ್ಯಾಹ್ನ 4 ಗಂಟೆ ವೇಳೆಗೆ ನಮ್ಮ ಮನೆಗೆ ಸ್ಯಾಂಡಲ್‌ವುಡ್‌ನಲ್ಲಿ ಮಾಡಿದ್ದ ಒಂದು ದೊಡ್ಡ ಗಿಫ್ಟ್ ಅನ್ನು ತಮ್ಮ ಸಿಬ್ಬಂದಿಯಿಂದ ಕೊಟ್ಟು ಕಳುಹಿಸಿದ್ದರು.
`ನಾನು ಆಕಾಶದಿಂದ ಹಾರಲಿಕ್ಕೂ ಸಿದ್ಧ' ಎನ್ನುತ್ತಾರೆ ರಮೇಶ್ ಅರವಿಂದ್
ನನ್ನ ರಿಯಲ್ ಲೈಫ್‌ನಲ್ಲಿ ಮಾಡಲು ಆಗದೇ ಇರುವ ನೂರಾರು ಕಾರ್ಯಗಳನ್ನು ನಟನಾಗಿ ಮಾಡಿದ್ದೇರೆ. 100 ಬೇರೆ ಬೇರೆ ಜೀವನಗಳನ್ನು ಒಂದೇ ಜೀವನದಲ್ಲಿ ಕಂಡಿದ್ದೇನೆ. ನನ್ನ ಬರ್ತ್‌ಡೇ ವಿಶೇಷ ಎಂದು 100 ಚಿತ್ರದ ಹಾಡು ಬಿಡುಗಡೆ ಮಾಡಿದ್ದೇವೆ. ಇಂಗ್ಲಿಷ್‌ನಲ್ಲಿ ಹ್ಯಾಪಿ ಬರ್ತ್‌ಡೇ ಟು ಯೂ ಅಂತ ಹಾಡಿದೆ. ಹಾಗೆಯೇ ಕನ್ನಡದಲ್ಲಿ ಬತ್‌ರ್ ಡೇ ಆ್ಯಂಥಮ್ ಎನ್ನುವ ಹಾಗೆ ಒಂದು ಹಾಡು ಬೇಕು ಎನ್ನಿಸಿತ್ತು. ಅದಕ್ಕಾಗಿಯೇ ಈ ಸಾಂಗ್ ಮಾಡಿದ್ದೇವೆ.
ನಿಮ್ಮ ನಿರ್ದೇಶನ 100 ಚಿತ್ರದ ವಿಶೇಷ...
100 ಈ ಕಾಲಕ್ಕೆ ತಕ್ಕ ಸಿನಿಮಾ. ಫ್ಯಾಮಿಲಿ ಕ್ರೈಂ ಥ್ರಿಲ್ಲರ್. ಒಂದೇ ಮನೆಯಲ್ಲಿರುವ ನಾಲ್ಕು ಮಂದಿ ನಾಲ್ಕು ಮೊಬೈಲ್‌ಗಳಲ್ಲಿ ಇರುತ್ತಾರೆ. ನಮಗೇ ಗೊತ್ತಿಲ್ಲದೇ ಈ ಮೊಬೈಲ್ ಮೂಲಕ ಸಾವಿರಾರು ಅಪರಿಚಿತರು ನಮ್ಮ ಬದುಕಿನೊಳಗೆ ಕಾಲಿಡುತ್ತಾರೆ. ಅವರ ಆಲೋಚನೆಗಳು, ಹೇಳಿಕೆಗಳು ನಮಗೇ ಗೊತ್ತಿಲ್ಲದೇ ನಮ್ಮ ಮೇಲೆ ಪ್ರಭಾವ ಬೀರುತ್ತಿವೆ. ಇದರ ಸುತ್ತಲೂ ಇರುವ ಸಿನಿಮಾ ಇದು.
100 ಚಿತ್ರದಲ್ಲಿ ರಮೇಶ್ ಅರವಿಂದ್‌ಗೆ ತಂಗಿಯಾದ ರಚಿತಾ ರಾಮ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.