ಗಂಡ ಹೆಂಡತಿ ನಟಿ ಸಂಜನಾ ಕೆಲ ತಿಂಗಳ ಹಿಂದೆ ರಹಸ್ಯವಾಗಿ ಮದುವೆಯಾಗಿದ್ದಾರೆ. ಯಾರಿಗೂ ಹೇಳದೆ ಆದ ಮದುವೆ ಫೋಟೋ ಈಗ ವೈರಲ್ ಆಗುತ್ತಿದೆ.
ಡ್ರಗ್ಸ್ ಮಾಫಿಯಾ ವಿಚಾರಣೆಗೆಂದು ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಗಲ್ರಾನಿ ವೈಯಕ್ತಿಕ ಜೀವನದ ರಹಸ್ಯವೊಂದು ಬಯಲಾಗಿದೆ. ಇನ್ನು ಸಿಂಗಲ್ ಆಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ ಎಂದುಕೊಂಡ ಅಭಿಮಾನಿಗಳಿಗೆ ಈ ಫೋಟೋ ನೋಡಿ ಶಾಕ್ ಅಗಿದೆ.
ಡ್ರಗ್ಸ್ ಆಯ್ತು, ಹವಾಲಾ ಕೇಸ್‌ನಲ್ಲಿಯೂ ತಗ್ಲಾಕೋತಾರಾ ರಾಗಿಣಿ, ಸಂಜನಾ?
ಹೌದು! ಸಂಜನಾ ಕೆಲವು ತಿಂಗಳ ಹಿಂದೆ ವೈದ್ಯ ಅಜೀಜ್ ಜೊತೆ ಮದುವೆಯಾಗಿದ್ದಾರೆ. ಮುಸ್ಲಿಂ ಸಂಪ್ರದಾಯದಲ್ಲಿ ಮದುವೆಯಾಗಿರುವ ಫೋಟೋ ಎಲ್ಲಿಡೆ ವೈರಲ್ ಆಗುತ್ತಿದೆ. ಯಾರಿಗೂ ಹೇಳಬಾರದು ಎಂದು ಸಂಜನಾ 20 ಜನರ ಮಧ್ಯೆ ಮದುವೆಯಾಗಿದ್ದಾರೆ, ಎನ್ನಲಾಗುತ್ತಿದೆ.
ಹಲವು ವರ್ಷಗಳಿಂದ ಅಜೀಜ್ ಜೊತೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದು, ನಂತರ ಸರಳ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಅಜೀಜ್ ವೃತ್ತಿತಲ್ಲಿ ಕಾರ್ಡಿಯಾಲಜಿಸ್ಟ್ ಆಗಿದ್ದು,, ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಸಿಬಿ ವಿಚಾರಣೆ ಒಳಗಾಗುವ ಮುನ್ನ ಸಂಜನಾ ನನಗೆ ಮದುವೆಯಾಗಿಲ್ಲ, ದಯವಿಟ್ಟು ನನ್ನ ಜೀವನ ಹಾಳು ಮಾಡಬೇಡಿ, ಎಂದು ಮಾಧ್ಯಮದ ಎದುರು ಹೇಳಿದ್ದರು. ಆದರೀಗ ವಿಚಾರಣೆಯಲ್ಲಿ ಮದುವೆ ಬಗ್ಗೆ ಒಪ್ಪಿಕೊಂಡಿದ್ದಾರೆ.
ಸಂಜನಾ ಅಮ್ಮ ಹೇಳಿದ್ದಿಷ್ಟು...
'ನನ್ನ ಮಗಳಿಗೆ ಮದುವೆ ಆಗಿಲ್ಲ. ಅಜೀಜ್ ತುಂಬಾ ವರ್ಷಗಳಿಂದ ಪರಿಚಯವಿರುವ ಕಾರಣ ನಾವು ಮೂರು ವರ್ಷಗಳ ಹಿಂದೆಯೇ ಅವಳಿಗೆ ನಿಶ್ಚಿತಾರ್ಥ ಮಾಡಿದ್ದೇವೆ. ಏಪ್ರಿಲ್ 22ಕ್ಕೆ ಮದುವೆಯಾಗಬೇಕಿತ್ತು. ಆದರೆ ಕೊರೋನಾದಿಂದ ಮದ್ವೆ ಆಗಲಿಲ್ಲ. ಎಲ್ಲರನ್ನೂ ಕರೆದು ಮಗಳ ಮದುವೆ ಮಾಡುತ್ತೇನೆ,' ಎಂದು ಸಂಜನಾ ತಾಯಿ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.