ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಚಿತ್ರಕ್ಕೆ ಕಟ್ ಆ್ಯಂಡ್ ಮ್ಯೂಟ್ ಇಲ್ಲದೇ ಯು/ಎ ಸರ್ಟಿಫಿಕೇಟ್ ದೊರೆತಿದೆ. ಆದರೆ ಈ ಚಿತ್ರವನ್ನು ವಿಶ್ವದ ಎಲ್ಲ ವಯೋಮಾನ ಜನರೂ ನೋಡಬೇಕು, ಕ್ಲೀನ್ ‘ಯು’ ಸರ್ಟಿಫಿಕೇಟ್ ಸಿಗಬೇಕು ಅನ್ನುವುದು ನಿರ್ದೇಶಕ ಕಿರಣ್‌ರಾಜ್ ಅವರ ಕನಸಾಗಿತ್ತು.
ರಕ್ಷಿತ್ ಶೆಟ್ಟಿ (Rakshit Shetty) ನಟನೆಯ '777 ಚಾರ್ಲಿ' (777 Charlie) ಚಿತ್ರಕ್ಕೆ ಕಟ್ ಆ್ಯಂಡ್ ಮ್ಯೂಟ್ ಇಲ್ಲದೇ ಯು/ಎ ಸರ್ಟಿಫಿಕೇಟ್ (U/A Certificate) ದೊರೆತಿದೆ. ಆದರೆ ಈ ಚಿತ್ರವನ್ನು ವಿಶ್ವದ ಎಲ್ಲ ವಯೋಮಾನ ಜನರೂ ನೋಡಬೇಕು, ಕ್ಲೀನ್ 'ಯು' ಸರ್ಟಿಫಿಕೇಟ್ (U Certificate) ಸಿಗಬೇಕು ಅನ್ನುವುದು ನಿರ್ದೇಶಕ ಕಿರಣ್‌ರಾಜ್ (KiranRaj) ಅವರ ಕನಸಾಗಿತ್ತು. ಈ ಬಗ್ಗೆ ಕಿರಣ್ ಮಾತುಗಳು ಹೀಗಿವೆ.
1. ಚಿಕ್ಕಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರು ನೋಡಬೇಕು ಅನ್ನುವ ಉದ್ದೇಶದಿಂದ ಯುನಿವರ್ಸಲ್ ಅನ್ನುವ ಕಾನ್ಸೆಪ್ಟ್ ಅನ್ನು ಇಡೀ ಸಿನಿಮಾದಲ್ಲಿ ಕಟ್ಟಿದ್ದೆವು. ಆದರೆ ಚಿತ್ರದ ಆರಂಭದ ಪ್ರೋಮೋದಲ್ಲೇ ಹೇಳಿರುವಂತೆ ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್ ಇವಿಷ್ಟೂ ಚಿತ್ರದ ಕೇಂದ್ರ ಪಾತ್ರ ಧರ್ಮನ ಲೈಫನ್ನು ಚಿತ್ರಿಸುತ್ತದೆ. ಹೀಗೆ ಬಂದಿರುವ ಸಿಗರೇಟ್ ಮತ್ತು ಬಿಯರ್ ಕಾರಣಕ್ಕೆ ಸೆನ್ಸಾರ್‌ನವರು ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದಾರೆ.
2. ನಾನು ಸ್ಕ್ರಿಪ್ಟಿಂಗ್ ಸ್ಟೇಜ್‌ನಿಂದಲೇ ಸೆನ್ಸಾರ್‌ನ ಗೈಡ್‌ಲೈನ್ಸ್ ಅನ್ನು ನೋಡಿಕೊಂಡಿದ್ದೆ. ಸಿನಿಮಾದಲ್ಲೆಲ್ಲೂ ರಕ್ತ, ಹಿಂಸೆ ಇತ್ಯಾದಿಗಳಿಲ್ಲ. ನಮ್ಮ ದೃಶ್ಯಗಳಲ್ಲಿ ಬರುವ ಡ್ರಿಂಕ್ಸ್,ಯಾವುದೇ ಡ್ರಿಂಕ್ಸ್ ಬ್ರಾಂಡ್ ಅನ್ನು ಹೋಲಬಾರದು ಅಂತ ಹೊಸ ಬ್ರಾಂಡ್ ಅನ್ನೇ ಕ್ರಿಯೇಟ್ ಮಾಡಿದ್ದೆವು. ಸೆನ್ಸಾರ್ ಸಮಸ್ಯೆ ಅವಾಯ್ಡ್ ಮಾಡಬೇಕು ಅನ್ನುವ ಎಚ್ಚರ ಶುರುವಿಂದಲೇ ಇತ್ತು. ಸಿನಿಮಾವನ್ನು ಇಡಿಯಾಗಿ ನೋಡಿ ಅಂತ ಸೆನ್ಸಾರ್‌ನವರಿಗೂ ಹೇಳಿದೆ. ಆದರೆ ಅವರು ಯು/ಎ ಗೆ ಸಣ್ಣ ವ್ಯತ್ಯಾಸ ಅಷ್ಟೇ ಇರೋದು, ಹೆತ್ತವರ ಜೊತೆಗೆ ಮಕ್ಕಳೂ ನೋಡಬಹುದು, ಈಗ ಸಿಗರೇಟ್, ಡ್ರಿಂಕ್ಸ್ ಬಳಕೆಗೆ ಕೋರ್ಟ್‌ನ ಸ್ಟ್ರಿಕ್ಟ್ ರೂಲ್ ಇದೆ ಅಂತ ಹೇಳಿದಾಗ ಒಪ್ಪಿಕೊಳ್ಳೋದು ಅನಿವಾರ್ಯವಾಗಿತ್ತು.
777 Charlie: ರಕ್ಷಿತ್ ಶೆಟ್ಟಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್!
3. ಆದರೆ ಇಂಥಾ ಸಿನಿಮಾ ಬೇರೆ ಭಾಷೆಗಳಲ್ಲಿ ಬಂದಿದ್ದರೆ ಯು ಸರ್ಟಿಫಿಕೇಟ್ ಸಿಕ್ತಿತ್ತು ಅನ್ನುವ ಜನರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಅಂಥಾ ಸಿನಿಮಾಗಳನ್ನೂ ಇತ್ತೀಚೆಗೆ ನೋಡಿದ್ದೇನೆ.
4. ಫೆಬ್ರವರಿ ಮೊದಲ, ಎರಡನೇ ವಾರ ಚಿತ್ರದ ರಿಲೀಸ್ ಡೇಟ್ ಜೊತೆಗೆ ಬೇರೆ ಭಾಷೆಗಳ ಸಿನಿಮಾ ವಿತರಣೆ ಕುರಿತ ಮಾಹಿತಿಯನ್ನೂ ನೀಡುತ್ತೇವೆ. ರಿಲೀಸ್‌ಗೂ 1 ತಿಂಗಳ ಮೊದಲು ಟ್ರೈಲರ್ ಬಿಡುಗಡೆ ಮಾಡ್ತೀವಿ.
'777 ಚಾರ್ಲಿ' ಚಿತ್ರವು ದಾರಿ ತಪ್ಪಿದ ಶ್ವಾನ ಚಾರ್ಲಿ ಮತ್ತು ಅವನ ಸಹಚರ ಧರ್ಮ (ರಕ್ಷಿತ್ ಶೆಟ್ಟಿ ಪಾತ್ರ)ದ ಸುತ್ತದ ಕಥೆಯನ್ನು ಅನುಸರಿಸುತ್ತದೆ. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜತೆಗೆ ಶ್ವಾನ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಶ್ವಾನ ಪಾತ್ರದ ಚಿತ್ರೀಕರಣಕ್ಕಾಗಿಯೇ ಚಿತ್ರತಂಡ ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ. ಯುವ ನಿರ್ದೇಶಕ ಕಿರಣ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್ ನಾಯಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದೆ.
777 charlie: ಸದ್ಯಕ್ಕೆ ಚಿತ್ರ ರಿಲೀಸ್ ಆಗಲ್ಲ ಎಂದು ಟ್ವೀಟ್ ಮಾಡಿದ ರಕ್ಷಿತ್ ಶೆಟ್ಟಿ
ಇನ್ನು '777 ಚಾರ್ಲಿ' ಚಿತ್ರವನ್ನು ಜಿಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಅವರ ಪರಮಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಅರವಿಂದ್ ಕಶ್ಯಪ್ ಕ್ಯಾಮೆರಾ ಕೈಚಳಕವಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ಸಂಗೀತಾ ಶೃಂಗೇರಿ (Sangeetha Sringeru)ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ರಾಜ್ ಬಿ. ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ, ಬೇಬಿ ಶಾರ್ವರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರವು ತೆರೆಕಾಣಲಿದೆ.