KV Gupta Passes Away: ಅಣ್ಣಾವ್ರು ಅಭಿನಯದ ಸತ್ಯಹರಿಶ್ಚಂದ್ರ ಚಿತ್ರ ನಿರ್ಮಿಸಿದ್ದ ಗುಪ್ತಾ ನಿಧನ

By Kannadaprabha NewsFirst Published Jan 26, 2022, 6:20 AM IST
Highlights

*    ರಾಜ್‌ಕುಮಾರ್‌ರ ಸತ್ಯಹರಿಶ್ಚಂದ್ರದಂಥ ಹಿಟ್‌ ಚಿತ್ರದ ನಿರ್ಮಾತೃ
*   ಚಲನಚಿತ್ರ ವಾಣಿಜ್ಯ ಮಂಡಳಿ ಬೈಲಾ ನಿರ್ಮಾಣದಲ್ಲಿ ಪ್ರಮುಖ ಪಾತ್ರ
*   ಗುಪ್ತಾ ನಿಧನಕ್ಕೆ ಕಂಬನಿ ಮಿಡಿದ ಕನ್ನಡ ಚಿತ್ರರಂಗ 
 

ಬೆಂಗಳೂರು(ಜ.26):  ಡಾ.ರಾಜ್‌(Dr Rajkumar)  ಅಭಿನಯದ ಸತ್ಯಹರಿಶ್ಚಂದ್ರ(Satya Harishchandra) ಸೇರಿದಂತೆ ಹಲವು ಚಿತ್ರ ನಿರ್ಮಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕ ಕೆ.ವಿ. ಗುಪ್ತಾ (87) ಅವರು ಜ.24ರಂದು ತಡ ರಾತ್ರಿ ನಿಧನರಾದರು. 

ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಗುಪ್ತಾ(KV Gupta) ಅವರಿಗೆ ಇತ್ತೀಚೆಗಷ್ಟೆ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಮತ್ತೆ ಆರೋಗ್ಯದಲ್ಲಿ (Dealth) ಏರುಪೇರು ಕಂಡಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಕೊರೋನಾ(Coronavirus) ಲಕ್ಷಣಗಳು ಕಂಡು ಬಂದಿದೆ. ಚಿಕಿತ್ಸೆ(Treatment) ಫಲಕಾರಿ ಆಗದೆ ಗುಪ್ತಾ ಅವರು ನಿಧನರಾಗಿದ್ದಾರೆ(Passed Away). ಮೃತರು ಇಬ್ಬರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳನ್ನು ಅಗಲಿದ್ದಾರೆ.

CM Condolence Message: ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮಂಜುನಾಥ್‌ ನಿಧನ

ಗುಪ್ತ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(Karnataka Film Chamber of Commerce) ಮತ್ತು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ(South India Film Chamber of Commerce) ಅಧ್ಯಕ್ಷರಾಗಿಯೂ ಸೇವೆ ಸಲ್ಲಿದ್ದಾರೆ. ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಗೊಂದು ಬೈಲಾ ರೂಪಿಸುವಲ್ಲಿ ಕೆ ವಿ ಗುಪ್ತಾ ಅವರ ಪಾತ್ರ ಮಹತ್ವದ್ದು. ರಾಜ್ಯ ಪ್ರಶಸ್ತಿಗೂ ಪಾತ್ರರಾಗಿರುವ ಕೆ ವಿ ಗುಪ್ತಾ ಅವರ ನಿಧನಕ್ಕೆ ಕನ್ನಡ ಚಿತ್ರರಂಗ(Sandalwood) ಕಂಬಿನಿ ಮಿಡಿದಿದೆ.

ಸತ್ಯಹರಿಶ್ಚಂದ್ರ ನಿರ್ಮಾತೃ:

1935ರಲ್ಲಿ ಜನಿಸಿದ ಗುಪ್ತಾ ಅವರು ಓದಿದ್ದು ಎಂಎಸ್ಸಿ ಟೆಕ್ಸ್‌ಟೈಲ್ಸ್‌. ಮುಂದೆ ತಮ್ಮದೇ ಕುಟುಂಬದ ಶಾಂತಿ ಫಿಕ್ಚರ್‌ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗಕ್ಕೆ ವಿತರಕರಾಗಿ ಆಗಮಿಸಿದರು. ಆ ನಂತರ ತೆಲುಗು(Telugu) ಮೂಲದ ವಿಜಯಾ ಟಾಕೀಸ್‌ ಜತೆ ಪಾಲುದಾರಿಕೆ ಮಾಡಿಕೊಂಡ ಕರ್ನಾಟಕದಲ್ಲಿ(Karnataka) ಹಲವು ಚಿತ್ರಗಳ ವಿತರಣೆ ಹಾಗೂ ನಿರ್ಮಾಣ ಕೂಡ ಮಾಡಿದ್ದಾರೆ. ಹೀಗೆ ನಿರ್ಮಿಸಿದ ಚಿತ್ರವೇ ಡಾ ರಾಜ್‌ಕುಮಾರ್‌ ಅಭಿನಯದ ಸತ್ಯಹರಿಶ್ಚಂದ್ರ. ಮುಂದೆ ತಮ್ಮದೇ ನಂದಿನಿ ಪ್ರೊಡಕ್ಷನ್‌ ಸಂಸ್ಥೆಯನ್ನು ಸ್ಥಾಪಿಸಿ ಬೀಗರ ಪಂದ್ಯ, ನನ್ನ ತಮ್ಮ, ಐ ಲವ್‌ ಯೂ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.

1977ರಲ್ಲಿ ಗುರು ಜ್ಯೋತಿ ಹೆಸರಿನಲ್ಲಿ ಸ್ವಂತವಾಗಿ ವಿತರಣಾ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆಯಿಂದ ನಂದಾ ದೀಪಾ, ನಮ್ಮ ಮಕ್ಕಳು, ಎರಡು ಕನಸು, ಅನುಭವ, ನಾ ನಿನ್ನ ಬಿಡಲಾರೆ ಮುಂತಾದ ಚಿತ್ರಗಳನ್ನು ವಿತರಣೆ ಮಾಡಿದ್ದಾರೆ. ಸಿನಿಮಾ ವಿತರಣೆ ಹಾಗೂ ನಿರ್ಮಾಣದ ಜತೆಗೆ ಚಿತ್ರೋದ್ಯಮದ ಹಲವು ಹುದ್ದೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿದ್ದಾರೆ. ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಗೊಂದು ಬೈಲಾ ರೂಪಿಸುವಲ್ಲಿ ಕೆ ವಿ ಗುಪ್ತಾ ಅವರ ಪಾತ್ರ ಮಹತ್ವದ್ದು. ರಾಜ್ಯ ಪ್ರಶಸ್ತಿಗೂ ಪಾತ್ರರಾಗಿರುವ ಕೆ ವಿ ಗುಪ್ತಾ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬಿನಿ ಮಿಡಿದಿದೆ.

click me!