ಮಣ್ಣಲ್ಲಿ ಮಣ್ಣಾದ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್: ಶೋಕ ಸಾಗರದಲ್ಲಿ ರಾಜ್ ಕುಟುಂಬ!

By Suvarna News  |  First Published Oct 31, 2021, 8:08 AM IST

ಈಡಿಗ ಸಂಪ್ರದಾಯದಂತೆ ಪುನೀತ್ ರಾಜ್‌ಕುಮಾರ್ ಅಂತ್ಯಸಂಸ್ಕಾರ

ಸರ್ಕಾರಿ ಗೌರವದೊಂದಿಗೆ ನಡೆದ ಅಂತ್ಯಕ್ರಿಯೆ

ಡಾ. ರಾಜ್‌- ಪಾರ್ವತಮ್ಮ ಸಮಾಧಿ ಪಕ್ಕವೇ ಅಂತಿಮ ವಿಧಿ- ವಿಧಾನ


ಬೆಂಗಳೂರು(ಅ.31): ರಾಷ್ಟ್ರಪ್ರಶಸ್ತಿ ವಿಜೇತ ನಟ, ಪವರ್‌ ಸ್ಟಾರ್‌ (Puneeth Rajkumar) ಪುನೀತ್‌ರಾಜ್‌ಕುಮಾರ್‌ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿನ (Kaneerava Studio) ತಂದೆ ಡಾ. ರಾಜ್‌ಕುಮಾರ್‌ (Dr Rajkumar) ಹಾಗೂ ತಾಯಿ ಪಾರ್ವತಮ್ಮ (Parvatamma Rajkumar) ಅವರ ಸಮಾಧಿಯ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಈಡಿಗ (Idiga) ಸಂಪ್ರದಾಯದಂತೆ ಭಾನುವಾರ ನಡೆದಿದೆ.

"

Tap to resize

Latest Videos

 ಕಂಠೀರವ ಕ್ರೀಡಾಂಗಣದಿಂದ ಭಾನುವಾರ ಬೆಳಗ್ಗೆ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ಅಂತಿಮಯಾತ್ರೆ ಮೂಲಕ ಕರೆತಂದಿದ್ದು, ಬಳಿಕ ವೀರ ಕನ್ನಡಿಗರ ಗಣ್ಯರು ಹಾಗೂ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar) ಪುತ್ರ ವಿನಯ್‌ ರಾಜ್‌ಕುಮಾರ್‌ (Vinay Rajkumar) ಅವರು ಅಂತಿಮ ವಿಧಿ ವಿಧಾನಗಳನ್ನು (last Rites) ನೆರವೇರಿಸಿದ್ದಾರೆ.

"

ಮೂರು ವರ್ಷದ ಹಿಂದೆಯಷ್ಟೇ ಗೋವಿಂದ ನಾಮ ಸ್ಮರಣೆಯೊಂದಿಗೆ ದಾಸಯ್ಯನ ಪದ್ಧತಿಯಂತೆ ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ತಾಯಿಯ ಅಂತ್ಯ ಸಂಸ್ಕಾರ ನಡೆಸಿದ್ದರು. ಹಠಾತ್‌ ಹೃದಯ ಸ್ತಂಭನದಿಂದ ಅಕಾಲಿಕ ನಿಧನ ಹೊಂದಿರುವ ಪುನೀತ್‌ ಅವರು ತಂದೆ, ತಾಯಿ ಪಕ್ಕದಲ್ಲೇ ಚಿರಸ್ಥಾಯಿಯಾಗಲಿದ್ದಾರೆ. ಪುನೀತ್‌ ಅವರ ಅಂತ್ಯ ಸಂಸ್ಕಾರವು ಹಿಂದೂ ಸಂಪ್ರದಾಯದಂತೆ ನೆರವೇರಲಿದ್ದು, ಗೋವಿಂದ ನಾಮಸ್ಮರಣೆಯಲ್ಲಿ ಕರುನಾಡಿನ ಯುವರತ್ನ ಭೂ-ತಾಯಿ ಮಡಿಲು ಸೇರಿದ್ದಾರೆ.'

"

ಈ ಮೊದಲು ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿಯ ಪುನೀತ್‌ ಫಾಮ್‌ರ್‍ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಡಾ. ರಾಜ್‌ಕುಮಾರ್‌ ಅವರ ಕಿರಿಯ ಪುತ್ರ ತಂದೆ ಹಾಗೂ ತಾಯಿ ಪಕ್ಕದಲ್ಲೇ ಇರಲಿ ಎಂದು ಕುಟುಂಬಸ್ಥರು ಎಂದು ಅಭಿಪ್ರಾಯಪಟ್ಟಿದ್ದರು. ಅವರ ಅಭಿಪ್ರಾಯಕ್ಕೆ ಗೌರವ ನೀಡಿರುವ ಸರ್ಕಾರ ಕಂಠೀರವ ಸ್ಟುಡಿಯೋದಲ್ಲೇ ಅಂತ್ಯಕ್ರಿಯೆ ನಡೆಸಲು ಒಪ್ಪಿಕೊಂಡಿದ್ದು, ಸರ್ಕಾರದಿಂದ ಅಧಿಕೃತ ಆದೇಶವನ್ನೂ ಹೊರಡಿಸಿತ್ತು.

"

ಪುನೀತ್‌ ಕಣ್ಣಿಂದ 4 ಮಂದಿಗೆ ದೃಷ್ಟಿನೀಡಲು ಸಿದ್ಧತೆ

ಭಾನುವಾರ ಮಣ್ಣಲ್ಲಿ ಮಣ್ಣಾಗಲಿರುವ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಅವರು ಭಕ್ತ ಕಣ್ಣಪ್ಪನಾಗಿ ಮೂರ್ನಾಲ್ಕು ಮಂದಿ ಅಂಧರಿಗೆ ಸುಂದರ ಪ್ರಪಂಚ ನೋಡುವ ‘ಪ್ರೇಮದ ಕಾಣಿಕೆ’ ನೀಡಲಿದ್ದಾರೆ.

ನಾರಾಯಣ ನೇತ್ರಾಲಯವು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪುನೀತ್‌ ಅವರ ಕಣ್ಣುಗಳಿಂದ ಮೂರ್ನಾಲ್ಕು ಮಂದಿಗೆ ದೃಷ್ಟಿನೀಡಲು ಪ್ರಯತ್ನ ಶುರು ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪುನೀತ್‌ ಮಣ್ಣಲ್ಲಿ ಮಣ್ಣಾಗುವ ವೇಳೆಗೆ ಅವರ ಕಣ್ಣುಗಳು ಮೂರ್ನಾಲ್ಕು ಮಂದಿಗೆ ಸುಂದರ ಪ್ರಪಂಚ ತೋರುವ ಸಾಧ್ಯತೆ ಇದೆ.

"

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ.ಭುಜಂಗಶೆಟ್ಟಿ, ಪುನೀತ್‌ ಅವರ ದಾನ ಮಾಡಿದ ಕಣ್ಣುಗಳನ್ನು ಅಳವಡಿಸಲು ಮೂರ್ನಾಲ್ಕು ಮಂದಿಗೆ ಬರಲು ಸೂಚಿಸಿದ್ದೇವೆ. ಕಣ್ಣುಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಒಂದೇ ಕಣ್ಣನ್ನು ಇಬ್ಬರಿಗೆ ಅಳವಡಿಕೆ ಮಾಡಬಹುದಾದ ಅತ್ಯಾಧುನಿಕ ತಂತ್ರಜ್ಞಾನ ಬಂದಿದೆ. ಇದರ ಸಹಕಾರದಿಂದ ಕಣ್ಣಿನ ಮುಂಭಾಗ ಹಾನಿಗೊಳಗಾದವರಿಗೆ ಮುಂಭಾಗ ಹಾಗೂ ಹಿಂಭಾಗ ಹಾನಿಗೊಳಗಾದವರಿಗೆ ಹಿಂಭಾಗ ಅಳವಡಿಕೆ ಮಾಡಲು ಚಿಂತನೆ ನಡೆಸಿದ್ದೇವೆ. ಈ ಮೂಲಕ ಮೂರ್ನಾಲ್ಕು ಮಂದಿಗೆ ದೃಷ್ಟಿನೀಡಲು ಯೋಚಿಸಿದ್ದೇವೆ. ಭಾನುವಾರ ಈ ಸಂಬಂಧ ಅಂತಿಮ ಪ್ರಕ್ರಿಯೆ ನಡೆಯಲಿದೆ. ಭಾನುವಾರ ಪುನೀತ್‌ ಅವರ ಅಂತ್ಯಸಂಸ್ಕಾರ ಮುಗಿದ ಬಳಿಕ ನಾವೇ ಖುದ್ದು ಎಲ್ಲಾ ಮಾಹಿತಿಯನ್ನೂ ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ಪುನೀತ್‌ ಸಾವಿನ ಆಘಾತದಿಂದ ಐವರು ಬಲಿ

"

ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ನಿಧನದ ಸುದ್ದಿ ತಿಳಿದು ರಾಜ್ಯದ ವಿವಿಧೆಡೆ ಶನಿವಾರ ಮೂವರು ಅಭಿಮಾನಿಗಳು ಹೃದಯಾಘಾತದಿಂದ ಮೃತಪಟ್ಟಿದ್ದು, ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಸಾವಿಗೀಡಾದವರ ಒಟ್ಟು ಸಂಖ್ಯೆ 5ಕ್ಕೇರಿದೆ.

ಶುಕ್ರವಾರವಷ್ಟೇ ಚಾಮರಾಜನಗರ ಜಿಲ್ಲೆಯ ಹನೂರು ವ್ಯಾಪ್ತಿಯ ಪೊನ್ನಾಚಿ ಗ್ರಾಮದ ನಿವಾಸಿ ಮುನಿಯಪ್ಪ(28) ಅವರು ಪುನೀತ್‌ ನಿಧನದ ಸುದ್ದಿ ತಿಳಿದು ಹೃದಯಾಘಾತದಿಂದ ಮೃತಪಟ್ಟಿದ್ದರು. ರಾಯಚೂರು ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಯುವಕರು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ರಕ್ಷಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

"

ಶನಿವಾರದಂದು ಬೆಳಗಾವಿ ಜಿಲ್ಲೆ ಶಿಂಧೋಳ್ಳಿ ಗ್ರಾಮದ ಪರಶುರಾಮ ಹನುಮಂತ ದೇಮಣ್ಣವರ(33), ಮಂಡ್ಯ ಜಿಲ್ಲೆ ಭಾರತೀನಗರ ಸಮೀಪದ ಯಲಾದಹಳ್ಳಿ ಗ್ರಾಮದ ಸುರೇಶ್‌(46), ಕೊಪ್ಪಳ ತಾಲೂಕಿನ ಹಿರೇಬಗನಾಳದ ಜ್ಞಾನಮೂರ್ತಿ(50) ಪುನೀತ್‌ ರಾಜ್‌ಕುಮಾರ್‌ ಅಗಲುವಿಕೆಯ ನೋವನ್ನು ತಡೆಯಲಾಗದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅಥಣಿಯಲ್ಲಿ ಯುವಕ ಆತ್ಮಹತ್ಯೆ:

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ವಡ್ಡರಗಲ್ಲಿಯ ನಿವಾಸಿ ರಾಹುಲ ಬಾಬು ಗಾಡಿವಡ್ಡರ(22) ಎಂಬ ಯುವಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರು ಫ್ಲೆಕ್ಸ್‌ನಲ್ಲಿ ಪುನೀತ್‌ ಫೋಟೋ ಮಾಡಿಸಿ, ಅದಕ್ಕೆ ಹೂವಿನ ಹಾರ ಹಾಕಿ, ಫ್ಲೆಕ್ಸ್‌ ಮುಂದೆ ಕರ್ನಾಟಕ ನಕ್ಷೆಯನ್ನು ಬಿಡಿಸಿ ಅದರಲ್ಲಿ ಹಳದಿ, ಕೆಂಪು ರಂಗೋಲಿ ಬಿಡಿಸಿ, ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ. ನಂತರ ಕೋಣೆಯಲ್ಲಿ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಈ ಕುರಿತು ಅಥಣಿ ಪೋಲಿಸ್‌ ಠಾಣೆಯಲ್ಲಿ

click me!