ಪುನೀತ್‌ ಸಾವಿಗೆ ಕಾರಣ ಬಹಿರಂಗಪಡಿಸಿದ ವೈದ್ಯರು

Kannadaprabha News   | Asianet News
Published : Oct 31, 2021, 06:39 AM ISTUpdated : Oct 31, 2021, 07:08 AM IST
ಪುನೀತ್‌ ಸಾವಿಗೆ ಕಾರಣ ಬಹಿರಂಗಪಡಿಸಿದ ವೈದ್ಯರು

ಸಾರಾಂಶ

*  ಐಸಿಯುನಲ್ಲಿದ್ದಾಗ ಹೃದಯ ಸ್ತಂಭನವಾದರೂ ಉಳಿಸುವುದು ಕಷ್ಟ *  ಇದು ಸಡನ್‌ ಡೆತ್‌: ಕುಟುಂಬ ವೈದ್ಯ ಡಾ. ರಮಣರಾವ್‌ *  ಡಾ. ರಾಜಕುಮಾರ್‌ಗೆ ಕೂಡ ಇದೇ ರೀತಿ ಸಾವು ಸಂಭವಿಸಿತ್ತು  

ಬೆಂಗಳೂರು(ಅ.31): ಪುನೀತ್‌ ಸಾವು ಸಂಭವಿಸಿದ್ದು ಹೃದಯಾಘಾತದಿಂದಲ್ಲ. ಬದಲಾಗಿ, ವೈದ್ಯಕೀಯ ಪರಿಭಾಷೆಯಲ್ಲಿ ಸಡನ್‌ ಡೆತ್‌ ಎಂದು ಕರೆಯಲಾಗುವ ಹೃದಯ ಸ್ತಂಭನದಿಂದ(Cardiac Arrest). ಸಡನ್‌ ಡೆತ್‌ ಘಟಿಸಿದಾಗ ಜೀವ ಉಳಿಸುವುದು ಕಷ್ಟ. ಆಸ್ಪತ್ರೆಗೆ ಶೀಘ್ರವಾಗಿ ಕರೆದುಕೊಂಡು ಬಂದಿದ್ದರೆ ಉಳಿಸಬಹುದಿತ್ತು ಎಂಬುದೆಲ್ಲ ನಿಜವಲ್ಲ. ಏಕೆಂದರೆ, ಆಸ್ಪತ್ರೆಯ(Hospital) ಐಸಿಯುನಲ್ಲಿ ಇದ್ದಾಗಲೇ ಹೃದಯ ಸ್ತಂಭನವಾದರೆ ಉಳಿಸುವುದು ಕಷ್ಟ. ಪುನೀತ್‌ಗೆ ಅಂತಹ ಸಡನ್‌ ಡೆತ್‌ ಸಂಭವಿಸಿದೆ!

"

- ಪುನೀತ್‌(Puneeth Rajkumar) ಹಠಾತ್‌ ನಿರ್ಗಮನಕ್ಕೆ ನಿಜ ಕಾರಣವನ್ನು ಹೀಗೆ ಅರುಹಿದವರು ಡಾ. ರಾಜಕುಮಾರ್‌ ಅವರ ಕುಟುಂಬದ ವೈದ್ಯ ಹಾಗೂ ದುರಂತದ ದಿನ ಪುನೀತ್‌ಗೆ ಮೊದಲು ಚಿಕಿತ್ಸೆ ನೀಡಿದ ತಜ್ಞ ವೈದ್ಯ ಡಾ. ರಮಣರಾವ್‌.

ಪುನೀತ್‌ ಕಣ್ಣಿಂದ 4 ಮಂದಿಗೆ ದೃಷ್ಟಿನೀಡಲು ಸಿದ್ಧತೆ

ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಯಾವುದೇ ಅನಾರೋಗ್ಯದ(Illness) ಹಿನ್ನೆಲೆ ಇರಲಿಲ್ಲ. ಶುಕ್ರವಾರ ಬೆಳಗ್ಗೆ 11.30ಕ್ಕೆ ನಮ್ಮ ಕ್ಲಿನಿಕ್‌ಗೆ(Clinic) ಸುಸ್ತು ಎಂದು ಬಂದಾಗಲೂ ಹೃದಯ ಬಡಿತ(Heartbeat), ರಕ್ತದೊತ್ತಡ(Blood Pressure), ಉಸಿರಾಟ, ಶ್ವಾಸಕೋಶದ ಆರೋಗ್ಯ ಎಲ್ಲವೂ ಸಾಮಾನ್ಯವಾಗಿತ್ತು. ಇಸಿಜಿ(ECG) ಪರೀಕ್ಷೆಯಲ್ಲೂ ಹೃದಯಾಘಾತ ಉಂಟಾಗಿರುವುದು ಕಂಡು ಬಂದಿರಲಿಲ್ಲ. ಆದರೆ, ಹೃದಯಕ್ಕೆ ಆಯಾಸ ಆಗಿರುವುದು ಪತ್ತೆಯಾಗಿತ್ತು. ಇದು ಮುನ್ನೆಚ್ಚರಿಕೆಯಾಗಿದ್ದರಿಂದ ಸಾರ್ಬಿಟ್ರೇಟ್‌ (ರಕ್ತನಾಳ ಬ್ಲಾಕ್‌ ಆಗದಂತೆ) ಮಾತ್ರೆ ನೀಡಿ ತುರ್ತಾಗಿ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದೆ. ಕ್ಲಿನಿಕ್‌ನಿಂದ 7 ನಿಮಿಷಗಳ ಪ್ರಯಾಣದ ಅಂತರದಲ್ಲಿರುವ ಆಸ್ಪತ್ರೆಗೆ ಹೋಗುವ ಮಧ್ಯೆಯೇ ಹೃದಯಸ್ತಂಭನವಾಗಿದೆ. ಇದನ್ನು ವೈದ್ಯ ಭಾಷೆಯಲ್ಲಿ ‘ಸಡನ್‌ ಡೆತ್‌’ ಎನ್ನುತ್ತೇವೆ. ಹೃದಯ ಸ್ತಂಭನವಾಗಿ ಹೃದಯ ಬಡಿತ ನಿಂತ ಬಳಿಕ ಉಳಿಸುವುದು ಕಷ್ಟಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಹೃದಯಾಘಾತ (ಹಾರ್ಟ್‌ ಆಟ್ಯಾಕ್‌) ಆದರೆ ಹೃದಯದಲ್ಲಿ ನೋವಿರುತ್ತದೆ. ಕೆಲವು ಲಕ್ಷಣಗಳು ಗೋಚರಿಸುತ್ತವೆ. ಉಳಿಸಲು ಸಮಯಾವಕಾಶ ಇರುತ್ತದೆ. ಆದರೆ, ಇದು ಕಾರ್ಡಿಯಕ್‌ ಅರೆಸ್ಟ್‌ (ಹೃದಯಸ್ತಂಭನ-ಬಡಿತವೇ ನಿಲ್ಲುವುದು). ಈ ಸಮಸ್ಯೆ ಎದುರಾದರೆ ಬದುಕಿಸುವುದು ತುಂಬಾ ಕಷ್ಟ’ ಎಂದು ಹೇಳಿದರು.

ಐದಾರು ನಿಮಿಷದಲ್ಲಿ ಗತಿಸಿ ಹೋಯಿತು:

ಶುಕ್ರವಾರ ಬೆಳಗ್ಗೆ 11.30 ಗಂಟೆ ಸುಮಾರಿಗೆ ಪುನೀತ್‌ ಹಾಗೂ ಅಶ್ವಿನಿ(Ashwini Puneeth Rajkumar) ಇಬ್ಬರೂ ನಡೆದುಕೊಂಡು ಬಂದರು. ಈ ವೇಳೆ ಏನಾಯ್ತು ಅಪ್ಪು ಎಂದು ಕೇಳಿದರೆ ಸ್ವಲ್ಪ ಸುಸ್ತಾಗುತ್ತಿದೆ ಅಪ್ಪಾಜಿ ಎಂದಿದ್ದರು. ಬೆವರಿದ್ದ ಅವರನ್ನು ಕಂಡು ಬೆವರು ಏಕೆ ಎಂದು ಕೇಳಿದಾಗ ಆಗ ತಾನೇ ಜಿಮ್‌, ಬಾಕ್ಸಿಂಗ್‌ ಮುಗಿಸಿ ಸ್ಟೀಮ್‌ ಕೂಡ ತೆಗೆದುಕೊಂಡು ಬಂದಿದ್ದೇನೆ. ಹೀಗಾಗಿ ಬೆವರಿದೆ ಎಂದಿದ್ದರು.

ಇದೊಂದು ಆಕಸ್ಮಿಕ ದುರಂತ: ನಟಿ ರಕ್ಷಿತಾ ಪ್ರೇಮ್

‘ಪರೀಕ್ಷೆ ನಡೆಸಿದಾಗ ರಕ್ತದೊತ್ತಡ (150/92) ಸಾಮಾನ್ಯವಾಗಿತ್ತು. ಇಸಿಜಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರಿಂದ ವಿಕ್ರಂ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿ ಹಿಂಬಾಲಿಸಿದೆವು. ಮಾರ್ಗಮಧ್ಯೆದಲ್ಲೇ ಹೃದಯ ಸ್ತಂಭನ ಆಗಿತ್ತು. ಬಳಿಕ ಎಷ್ಟೇ ಪ್ರಯತ್ನ ಮಾಡಿದರೂ ಉಳಿಸಲು ಸಾಧ್ಯವಾಗಲಿಲ್ಲ. ಎಲ್ಲಾ ಐದಾರು ನಿಮಿಷಗಳಲ್ಲಿ ಘಟಿಸಿತು’ ಎಂದು ಬೇಸರ ತೋಡಿಕೊಂಡರು.

‘ಡಾ. ರಾಜ್‌ಕುಮಾರ್‌(Dr Rajkumar) ಅವರಿಗೂ ಇದೇ ರೀತಿ ಏಕಾಏಕಿ ಹೃದಯ ಸ್ತಂಭನ ಆಗಿತ್ತು. ಎಲ್ಲರೊಂದಿಗೂ ಆರಾಮವಾಗಿ ಮಾತನಾಡುತ್ತಾ ಸೋಫಾದಲ್ಲಿ ಕುಳಿತವರೇ ಹೃದಯಸ್ತಂಭನಕ್ಕೆ ಒಳಗಾದರು. ನನ್ನ ಕೈಗಳಲ್ಲೇ ಕೊನೆಯುಸಿರು ಎಳೆದಿದ್ದರು. ಇದೀಗ ಅಪ್ಪುಗೂ ಅದೇ ರೀತಿ ಆಗಿದೆ’ ಎಂದು ಬೇಸರದಿಂದ ಹೇಳಿದರು.

ಪುನೀತ್‌ ಫಿಟ್‌ ಅಂಡ್‌ ಫೈನ್‌ ಇದ್ದರು:

‘ಪುನೀತ್‌ ದೈಹಿಕ ಹಾಗೂ ಮಾನಸಿಕ ಆರೋಗ್ಯ ತುಂಬಾ ಚೆನ್ನಾಗಿತ್ತು. ಯಾವುದೇ ಅನಾರೋಗ್ಯದ ಹಿಸ್ಟರಿ ಇರಲಿಲ್ಲ. ಬೆರಳು ತೋರುವ ಯಾವ ಚಟವೂ ಇರಲಿಲ್ಲ. ತುಂಬಾ ಪಾಸಿಟಿವ್‌ ಯೋಚನೆ ಹೊಂದಿದ್ದ ವ್ಯಕ್ತಿ. ಅವರಿಗೆ ಈ ರೀತಿ ಆಗುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ದೇಹ ದಂಡನೆ, ವ್ಯಾಯಾಮ, ಆರೋಗ್ಯ ಕಾಳಜಿ ಜಾಸ್ತಿಯೇ ಇತ್ತು. ಆರೋಗ್ಯದ ವಿಚಾರದಲ್ಲಿ ಎಂದೂ ನಿರ್ಲಕ್ಷ್ಯ ಮಾಡಿದವರಲ್ಲ. ಇದು ಸಡೆನ್‌ ಡೆತ್‌. ಇದಕ್ಕೆ ಕಾರಣ ಹುಡುಕಲಾಗದು’ ಎಂದರು.
ಅನಗತ್ಯ ಬಾಡಿ ಬಿಲ್ಡ್‌ ಬೇಡ: ಡಾ. ರಮಣರಾವ್‌

ಮಿತಿ ಮೀರಿದ ವ್ಯಾಯಾಮ ಹಾಗೂ ಬಾಡಿ ಬಿಲ್ಡ್‌ನಿಂದ ಹೃದಯದ ಆರ್ಟರಿ ರಪ್ಚರ್‌ ಆಗಬಹುದು. ಇದರಿಂದ ರಕ್ತ ಕ್ಲಾಟ್‌ ಆಗಿ ಗಂಟೆಯಲ್ಲಿ ಪೂರ್ತಿ ಬ್ಲಾಕ್‌ ಆಗಬಹುದು. ದೇಹಕ್ಕೆ ವ್ಯಾಯಾಮ ಅಗತ್ಯ. ಆದರೆ, ಅನಗತ್ಯ ಬಾಡಿ ಬಿಲ್ಡ್‌ ಮಾಡುವುದು ಬೇಡ. ವಯಸ್ಸಿನಲ್ಲಿದಾಗ ಇದು ಚೆನ್ನಾಗಿಯೇ ಕಾಣುತ್ತದೆ. ಆದರೆ 40 ವರ್ಷ ದಾಟಿದ ಬಳಿಕ ಹೃದಯಕ್ಕೆ ಅನಗತ್ಯ ಭಾರವಾಗುತ್ತದೆ. ಮಾಂಸಖಂಡಗಳಿಗೆ ರಕ್ತ ಪೂರೈಸಬೇಕಿರುವುದು ಹೃದಯ. ಅನಗತ್ಯ ಮಾಂಸಖಂಡಗಳಿಂದ ಹೃದಯಕ್ಕೆ ಒತ್ತಡ ಹೆಚ್ಚಾಗುತ್ತದೆ ಎಂದು ಡಾ. ರಮಣರಾವ್‌ ಸಲಹೆ ನೀಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?