
‘ಯಾವ ಹಳ್ಳಿಗೆ ಹೋದರೂ ಅಪ್ಪು (Puneeth Rajkumar) ಅವರ ಭಾವಚಿತ್ರ ಇರುತ್ತೆ. ಇಷ್ಟೂಜನರ ಜೀವನವನ್ನು ಒಬ್ಬ ವ್ಯಕ್ತಿ ಟಚ್ ಮಾಡೋದು ಸಾಧ್ಯವಾ ಅಂತ ಆಶ್ಚರ್ಯ ಆಗುತ್ತೆ. ಒಳ್ಳೆಯ ಕೆಲಸಕ್ಕೆ ರಾಜಕಾರಣ (Poliician) ಬೇಕಿಲ್ಲ, ಒಳ್ಳೆಯ ಮನಸ್ಸಿದ್ರೆ ಸಾಕು. ಅದನ್ನು ಅಪ್ಪು ಅವರು ತೋರಿಸಿಕೊಟ್ಟಿದ್ದಾರೆ. ನನಗೆ ರಾಜಕಾರಣಿ ಮಗನೆಂದು ಗುರುತಿಸಿಕೊಳ್ಳುವುದಕ್ಕಿಂತಲೂ ಕಲಾವಿದನಾಗಿ (Artist) ಜನ ಗುರುತಿಸೋದು ಇಷ್ಟ. ನಮ್ಮ ಕುಟುಂಬದ ಹಿನ್ನೆಲೆಯಲ್ಲಿ ಕೆಲವರು ನನ್ನನ್ನು ಡೈನೋಸಾರ್ (Dinosaur) ನೋಡುವಂತೆ ವಿಚಿತ್ರವಾಗಿ ನೋಡುತ್ತಾರೆ’ ಎಂದು ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಡಿ.24ಕ್ಕೆ ರೈಡರ್ (Rider) ಬಿಡುಗಡೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ (Pressmeet) ನಿಖಿಲ್, ಪುನೀತ್ ಅವರ ಗುಣಗಾನ ಮಾಡಿದರು. ‘ರೈಡರ್ ಎಲ್ಲಾ ವರ್ಗದವರಿಗೂ ರೀಚ್ ಆಗುವ ಚಿತ್ರ. ಪ್ರೀತಿಯಲ್ಲಿರಬೇಕಾದ ಪ್ರಾಮಾಣಿಕತೆ, ಅನಿರೀಕ್ಷಿತಗಳನ್ನ ಸಿನಿಮಾ ಹೇಳುತ್ತೆ. ಟೀನೇಜ್ ಹುಡುಗರಿಗೂ (Teenagers) ಮೆಸೇಜ್ ಇದೆ. ಆದರೂ ಯಾವ ನಿರ್ದೇಶಕರೂ ನನ್ನ ಕೈಲಿ ಯಾಕೆ ಮಚ್ಚು ಹಿಡಿಸಲ್ಲ, ಉದ್ದೂದ್ದ ಡೈಲಾಗ್ ಕೊಡಲ್ಲ ಅಂತ ನಿಜಕ್ಕೂ ಗೊತ್ತಾಗ್ತಿಲ್ಲ’ ಎಂದರು (Nikhil Kumar).
ನಿರ್ದೇಶಕ ವಿಜಯಕುಮಾರ (Vijay Kumar) ಕೊಂಡ ಮಾತನಾಡಿ, ‘ರೈಡರ್ ಚಿತ್ರ ಎಮೋಶನಲ್ ಜರ್ನಿ ಆಫ್ ಸೂರ್ಯ. ಚಿತ್ರದ ಹಾಡಿಗೆ ಅತ್ಯುತ್ತಮ ರೆಸ್ಪಾನ್ಸ್ ಬಂದಿದೆ’ ಎಂದರು. ಲಹರಿ ವೇಲು ಹಾಗೂ ಸುನಿಲ್ ಗೌಡ ಚಿತ್ರದ ನಿರ್ಮಾಪಕರು. ಕಾಶ್ಮೀರಾ ಚಿತ್ರದ ನಾಯಕಿ.
ಸುದ್ದಿಗೋಷ್ಠಿಯಲ್ಲಿ ಹಾಸ್ಯ ನಟರಾದ ಮಂಜು ಪಾವಗಡ (Manju Pavagada), ಶಿವರಾಜ್ ಕೆ ಆರ್ ಪೇಟೆ (Shivaraj KR Pete), ಸಂತು ಕಿಲಕಿಲ, ಹಿರಿಯ ನಟ ರಾಜೇಶ್ ನಟರಂಗ, ಕೊರೋನಾ ವಾರಿಯರ್ ಅರ್ಜುನ್ ಗೌಡ (Arjun Gowda), ಬಾಲನಟಿ ಪ್ರಾಣ್ಯಾ ಹಾಗೂ ಚಿತ್ರತಂಡದವರು ಹಾಜರಿದ್ದರು. ಡಿ.24ರಂದು ರೈಡರ್ ಚಿತ್ರ ರಾಜ್ಯದ 250ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.