Yogaraj Bhat: 'ಗಾಳಿಪಟ 2' ಚಿತ್ರದ ಡಬ್ಬಿಂಗ್ ಮುಗಿಸಿದ ಗೋಲ್ಡನ್‌ ಸ್ಟಾರ್ ಗಣೇಶ್

Suvarna News   | Asianet News
Published : Dec 08, 2021, 06:43 PM ISTUpdated : Dec 10, 2021, 02:44 PM IST
Yogaraj Bhat: 'ಗಾಳಿಪಟ 2' ಚಿತ್ರದ ಡಬ್ಬಿಂಗ್ ಮುಗಿಸಿದ ಗೋಲ್ಡನ್‌ ಸ್ಟಾರ್ ಗಣೇಶ್

ಸಾರಾಂಶ

ವಿಕಟಕವಿ ಯೋಗರಾಜ್ ಭಟ್ ಹಾಗೂ ಗೋಲ್ಡನ್‌ ಸ್ಟಾರ್ ಗಣೇಶ್ ಕಾಂಬಿನೇಷನ್‌ನಲ್ಲಿ 'ಗಾಳಿಪಟ 2' ಸಿನಿಮಾ ಬರುತ್ತಿದ್ದು, ಗಣೇಶ್ ತಮ್ಮ ಭಾಗದ ಡಬ್ಬಿಂಗ್‌ನ್ನು ಪೂರ್ಣಗೊಳಿಸಿರುವ ಮಾಹಿತಿಯನ್ನು ಯೋಗರಾಜ್ ಭಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

'ಮುಗುಳು ನಗೆ' ಸಿನಿಮಾ ಬಳಿಕ ನಿರ್ದೇಶಕ ವಿಕಟಕವಿ ಯೋಗರಾಜ್ ಭಟ್ (Yogaraj Bhat) ಹಾಗೂ ಗಣೇಶ್ (Ganesh) ಕಾಂಬಿನೇಷನ್‌ನಲ್ಲಿ 'ಗಾಳಿಪಟ 2' (Galipata 2) ಸಿನಿಮಾ ಬರುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಪೋಸ್ಟರ್‌ನಿಂದಲೇ ಈ ಚಿತ್ರ ಸಖತ್ ಸದ್ದು ಮಾಡುತ್ತಿದೆ. ಸೂರಜ್‌ ಪ್ರೊಡ​ಕ್ಷ​ನ್‌​ನಲ್ಲಿ ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಾಣ ಮಾಡು​ತ್ತಿ​ರುವ 'ಗಾಳಿ​ಪಟ 2'  ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಇದೀಗ ಚಿತ್ರದ ನಾಯಕ ಗೋಲ್ಡನ್‌ ಸ್ಟಾರ್ ಗಣೇಶ್ ತಮ್ಮ ಭಾಗದ ಡಬ್ಬಿಂಗ್‌ನ್ನು (Dubbing) ಪೂರ್ಣಗೊಳಿಸಿರುವ ಮಾಹಿತಿಯನ್ನು ಯೋಗರಾಜ್ ಭಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಯೋಗರಾಜ್ ಭಟ್ ತಮ್ಮ ಫೇಸ್‌ಬುಕ್‌ನಲ್ಲಿ (Facebook) ಖಾತೆಯಲ್ಲಿ 'ನಮಸ್ತೆ.. ನಲ್ಮೆಯ ಗೆಳೆಯನ ಡಬ್ಬಿಂಗ್ ಮುಕ್ತಾಯ. ಜೈ ಗಣಪ. ಜೈ ಗಾಳಿಪಟ 2 ಎಂದು ಕ್ಯಾಪ್ಷನ್ ಬರೆದು ಸ್ಟುಡಿಯೋದಲ್ಲಿ ಗಣೇಶ್ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು 'ಸರ್ ಆದಷ್ಟು ಬೇಗ ಹಾರಿಸಿ ಗಾಳಿಪಟ'. 'ಒಂದೇ ಸಮನೇ ನಿಟ್ಟುಸಿರು ಬಿಟ್ಕೊಂಡು ಕಾಯುತ್ತಿದ್ದೀನಿ ನಿಮ್ಮ ಸಿನಿಮಾ ನೋಡಲು ಭಟ್ರೇ'. 'ಎಲ್ಲರಿಗೂ ಶುಭವಾಗಲಿ ಆದಷ್ಟು ಬೇಗ ಚಿತ್ರ ತೆರೆಮೇಲೆ ಬರಲಿ ಎಂದು ಹಾರೈಸುವೆ'. ಹಾಗೂ 'ಸರ್, ಯಾವ ಪ್ಯಾನ್ ಇಂಡಿಯಾನೂ ಬೇಡ, ಏನೂ ಬೇಡ, ಮುಂಗಾರು ಮಳೆ, ಗಾಳಿಪಟದಂಥ ಚಿತ್ರಗಳನ್ನ ನೋಡಿ ಬಾಳ‌ ದಿವಸ ಆಗೇತಿ ರೀ, ಅಂಥಾ ಚಿತ್ರಗಳು‌ ನಿಮ್ಮ ಹಾಗೂ ಗಣೇಶ ಅವರ ಕಾಂಬಿನೇಶನ್ ಒಳಗ ನೋಡಾಕ ಸಾಧ್ಯ ಆಕ್ಕೇತಿ, ಅಂಥಾ ಚಿತ್ರಗಳ ನಿರೀಕ್ಷೆ ಒಳಗ ನಾವದೇವ್ರೀ ಭಟ್ರೆ ಅಲ್ ದಿ ಬೆಸ್ಟ್ ಫಾರ್ ಗಾಳಿಪಟ 2' ಅಂತೆಲ್ಲಾ ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

'ಗಾಳಿಪಟ 2' ಶೂಟಿಂಗ್ ಮುಕ್ತಾಯ: ಯೋಗರಾಜ್ ಭಟ್

ಇತ್ತೀಚೆಗಷ್ಟೇ ಯೋಗರಾಜ್ ಭಟ್, 'ನಮಸ್ತೆ 'ಗಾಳಿಪಟ 2' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಅತೀ ಶೀಘ್ರದಲ್ಲೇ ಬಾಕಿ ಸುದ್ದಿ' ಎಂದು ಬರೆದುಕೊಂಡಿದ್ದರು. ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ (Diganth) ಹಾಗೂ ನಿರ್ದೇಶಕ ಪವನ್ ಕುಮಾರ್ (Pavan Kumar) ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ 'ಮನಸಾರೆ' ಮತ್ತು 'ಪಂಚರಂಗಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ.

ತಮಾಷೆ, ಭಾವುಕತೆ ನನ್ನ ಟ್ರಂಪ್‌ಕಾರ್ಡ್: ಗಣೇಶ್

ಈ ಚಿತ್ರದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ (Vihaan) ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಿಹಾನ್‌ರ ಸೀನ್‌ಗಳನ್ನು ಬೆಂಗಳೂರಿನಲ್ಲಿ ಹಾಗೂ ಕಝಕಿಸ್ಥಾನದಲ್ಲಿಯೂ ಶೂಟಿಂಗ್‌ ಮಾಡಲಾಗಿದೆ. ಅನಂತ್‌ನಾಗ್‌ (Ananth Nag) ಅವರು ಕನ್ನಡ ಮೇಷ್ಟ್ರಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಸೀನ್‌ಗಳು ಸಿನಿಮಾದಲ್ಲಿ ಸಿಕ್ಕಾಪಟ್ಟೆ ಹೈಲೈಟ್‌ ಆಗಲಿವೆ ಎಂದು ಯೋಗರಾಜ್ ಭಟ್ ಈ ಹಿಂದೆ ತಿಳಿಸಿದ್ದಾರೆ. 'ಗಾಳಿಪಟ' ದಶಕದ ಹಿಂದಿನ ಯಂಗ್‌ಸ್ಟರ್ಸ್‌ಗೆ ಇಷ್ಟವಾಗೋ ಹಾಗಿತ್ತು. ಈ ಸಲದ 'ಗಾಳಿಪಟ 2' ಯೋಗರಾಜ ಭಟ್ಟರ ಬೆಸ್ಟ್ ಸಿನಿಮಾಗಳಲ್ಲೇ ಬೆಸ್ಟ್. ಕತೆ, ಸಂಭಾಷಣೆಗಳೆಲ್ಲ ಅದ್ಭುತ ಅನ್ನುವ ಹಾಗಿವೆ. ನನ್ನ ಪಾತ್ರವೂ ಈ ಕಾಲದವರಿಗೆ ಇಷ್ಟವಾಗುವ ಹಾಗಿದೆ ಎಂದು ಚಿತ್ರದ ನಾಯಕ ಗಣೇಶ್ ಹೇಳಿದ್ದಾರೆ. ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಫಿ, ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಿರುವ ಈ ಚಿತ್ರದಲ್ಲಿ ಪದ್ಮಜಾ ರಾವ್‌, ಸುಧಾ​ ಬೆ​ಳ​ವಾಡಿ, ರಂಗಾ​ಯಣ ರಘು ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?