ಕೊರೋನಾ ವೈರಸ್ ಆರ್ಭಟಕ್ಕೆ ಇಡೀ ದೇಶವೇ ಆತಂಕದಲ್ಲಿದೆ. ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ನೆನಪಿರಲಿ ಪ್ರೇಮ್ ಕೊರೋನಾದಿಂದ ಯಾರಿಗೂ ಅನಾಹುತವಾಗದಿರಲಿ ಎಂದು ಉರುಳು ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರು (ಮಾ. 19): ಕೊರೋನಾ ವೈರಸ್ ಸಂಕಷ್ಟದಿಂದ ಎಲ್ಲರನ್ನೂ ಪಾರು ಮಾಡುವಂತೆ ಬೇಡಿಕೊಂಡು ನಟ ಪ್ರೇಮ್ ಅವರು ದೇವರ ಮುಂದೆ ಉರುಳುಸೇವೆ ಮಾಡಿದ್ದಾರೆ.
ರಕ್ಷಿತ್ ಹೊಸ ಸಿನಿಮಾ ಫಿಕ್ಸ್; 'ಸಪ್ತಸಾಗರದಾಚೆ ಎಲ್ಲೋ' ದಾಟ್ತಾರಾ ಶೆಟ್ರು?
ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಉರುಳು ಸೇವೆ ಮಾಡಿದ್ದು, ಸ್ನೇಹಿತರಿಗೆ, ಬಂದುಗಳಿಗೆ ಅಭಿಮಾನಿಗಳಿಗೆ ಹಾಗೂ ಚಿತ್ರರಂಗದವರಿಗೆ ಕೊರೋನಾ ವೈರಸ್ನಿಂದ ಯಾವುದೇ ರೀತಿಯ ತೊಂದರೆ ಆಗದಿರಲಿ ಎಂದು ಬೇಡಿಕೊಂಡಿದ್ದಾರೆ.
ಕೊರೋನಾ ಹಾವಳಿಯಿಂದ ಪ್ರಪಂಚವನ್ನ ಪಾರು ಮಾಡು ಎನ್ನುತ್ತ ಪ್ರೇಮ್ ಮಾಡಿರುವ ಈ ಉರುಳುಸೇವೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.