ಪೊಲೀಸರ ಕೈಯಲ್ಲಿ ಸಿಕ್ಕಾಗ ಅಪ್ಪನ ಹೆಸರು ಬಳಸಿದ್ದೆ: ಮನುರಂಜನ್ ರವಿಚಂದ್ರನ್

Suvarna News   | Asianet News
Published : Nov 18, 2021, 07:03 PM ISTUpdated : Nov 18, 2021, 07:10 PM IST
ಪೊಲೀಸರ ಕೈಯಲ್ಲಿ ಸಿಕ್ಕಾಗ ಅಪ್ಪನ ಹೆಸರು ಬಳಸಿದ್ದೆ: ಮನುರಂಜನ್ ರವಿಚಂದ್ರನ್

ಸಾರಾಂಶ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನುರಂಜನ್ ಅಭಿನಯದ ಮುಗಿಲ್​ಪೇಟೆ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಗೌರೀಶ್ ಅಕ್ಕಿ ಸ್ಟುಡಿಯೋದೊಂದಿಗೆ ಮನೋರಂಜನ್ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ರಂಜಿತಾ ರಾಮಕುಮಾರ್
ಆಲ್ಮಾ ಮಿಡಿಯಾ ವಿದ್ಯಾರ್ಥಿ

ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಅವರ ಪುತ್ರ ಮನುರಂಜನ್ ರವಿಚಂದ್ರನ್ (Manuranjan Ravichandran)  ಅವರ ಮೂರನೇಯ ಚಿತ್ರ 'ಮುಗಿಲ್​ಪೇಟೆ' (Mugilpete) ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ಸಾಹೇಬ' (Saheba) ಮತ್ತು 'ಬೃಹಸ್ಪತಿ' (Bruhaspati) ಇವರ ಮೊದಲೆರಡು ಚಿತ್ರಗಳು .  'ಮುಗಿಲ್​ಪೇಟೆ' ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಗೌರೀಶ್ ಅಕ್ಕಿ ಸ್ಟುಡಿಯೋದೊಂದಿಗೆ (Gaurish Akki Studio) ಚಿತ್ರದ ಬಗ್ಗೆ ಮತ್ತು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನೋರಂಜನ್ ರವಿಚಂದ್ರನ್ ಅವರು ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಕ್ರೇಜಿಸ್ಟಾರ್ ಮಗನ ಬಾಲ್ಯ ಹೇಗಿತ್ತು?
ಬಾಲ್ಯದಲ್ಲಿ ರವಿಚಂದ್ರನ್ ಅವರೊಂದಿಗೆ ಕಳೆದ ಕ್ಷಣಗಳು ಕಡಿಮೆ. ಅವರು ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಇರುತ್ತಿದ್ದ ಕಾರಣ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಅವರ ಅಮ್ಮ ಮತ್ತು ಅಜ್ಜಿ ವಹಿಸಿಕೊಂಡಿದ್ದರು. ಇವರ ಅಮ್ಮ ಮೊದಲು ಹೇಳಿಕೊಟ್ಟಿದ್ದು, ರವಿಚಂದ್ರನ್ ಮಗ ಅಂದರೆ ಏನ್ ಎರಡುಕೊಂಬು ಇರುತ್ತಾ, ನೀವು ಎಲ್ಲಾ ಮಕ್ಕಳ ತರಾನೇ ಅಂತ. ಹಾಗಾಗಿ ರವಿಚಂದ್ರನ್ ಮಗ ಅನ್ನೋ ಯಾವುದೇ ವಿಶೇಷ ಫೀಲ್ ಇಲ್ಲದೆ ಬೆಳೆಯಲು ಸಾಧ್ಯವಾಯಿತು. ಆದರೆ ಗೆಳೆಯರ ಜೊತೆ ಸೇರಿ ಪೋಲಿ ಆಟಗಳನ್ನು ಆಡಿ ಪೊಲೀಸರ ಬಳಿ ಸಿಕ್ಕಿ ಹಾಕಿಕೊಂಡಾಗ ಮಾತ್ರ ರವಿಚಂದ್ರನ್ ಅವರ ಹೆಸರನ್ನು ಬಳಸಿದ್ದೆ ಎಂದು ಮನೋರಂಜನ್ ನೆನಪಿಸಿಕೊಂಡರು.

'ಮುಗಿಲ್​ಪೇಟೆ' ಟ್ರೇಲರ್ ರಿಲೀಸ್: ನವೆಂಬರ್ 19ಕ್ಕೆ ಚಿತ್ರ ಬಿಡುಗಡೆ

ನಟನೆಯ ಪರಂಪರೆ ನಿಮ್ಮ ಬದುಕಿಗೆ ಹೇಗೆ ಸಹಾಯ ಮಾಡಿದೆ?
ರವಿಚಂದ್ರನ್ ಮಗ ಅನ್ನೋ ಕಾರಣಕ್ಕೆ ಆಡಿಷನ್ ಇಲ್ಲದೆ ಚಿತ್ರಗಳು ಸಿಗುತ್ತವೆ. ಆದರೆ ಜನರಲ್ಲಿ ರವಿಚಂದ್ರನ್ ಮಗ ಅನ್ನುವ ಕಾರಣಕ್ಕೆ ಒಂದು ಮಟ್ಟದ ನಿರೀಕ್ಷೆ ಇರುತ್ತೆ. ಎನ್.ವೀರಾಸ್ವಾಮಿಯವರ (N.Veeraswamy) ಕುಟುಂಬ ಎಂಬ  50 ವರ್ಷಗಳ ಪರಂಪರೆ ಇದೆ. ತಮ್ಮ ವಿಕ್ರಮ್ ರವಿಚಂದ್ರನ್ ಅವನಿಗೆ ನಟನೆ ಹುಟ್ಟಿನಿಂದಲೇ ಬಂದಿದೆ. ಆದರೆ ನಾನು ಈ ಕಾಲಘಟ್ಟದ ಹೊಸ ನಟನಾಗಿ ನಟನೆ ಕಲಿಯುತ್ತಿದ್ದು, ಇನ್ನೂ ಕಲಿಯಬೇಕಾಗಿದ್ದು ತುಂಬಾ ಇದೆ ಎಂದು ವಿಮರ್ಶಿಸಿಕೊಂಡರು.

ನಾನು ನನ್ನ ಅಜ್ಜನಂತಾಗಬೇಕು?
ಮನೋರಂಜನ್ ರವಿಚಂದ್ರನ್ ಅವರು ನಾನು ಅಜ್ಜನಂತೆ ಅಂದರೆ ಎನ್. ವೀರಾಸ್ವಾಮಿಯವರಂತೆ ಆಗಲು ಇಷ್ಟಪಡುತ್ತೇನೆ. ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಅಜ್ಜನ ಗುಣ ಅನುವಂಶೀಯವಾಗಿ ನನಗೆ ಸ್ವಲ್ಪ ಬಂದಿದ್ದು,  ಅವರ ವ್ಯಕ್ತಿತ್ವ ನನ್ನನ್ನು ತುಂಬಾ ಆಕರ್ಷಿಸಿದೆ ಎಂದು ಹೇಳಿಕೊಂಡಿದ್ದಾರೆ.

Mugilpete Song Release: ದೂರ ಹೋಗೋ ಮುನ್ನ ದೂರಲಾರೆ ಎಂದ ಮನುರಂಜನ್

ನಾನು ಬ್ರಾಂಡ್ ಆಗಲು ಬಯಸುವುದಿಲ್ಲ?
ಕೇವಲ ಒಬ್ಬ ಕಾಮಿಡಿ ನಟನಾಗಿ ಅಥವಾ ಲವರ್ ಬಾಯ್, ಮಾಸ್ ಹೀರೋ ಹೀಗೆ ಯಾವುದಕ್ಕೂ ಟ್ಯಾಗ್ ಆಗಲು ಬಯಸುವುದಿಲ್ಲ. ಎಲ್ಲಾ ವಿಧವಾದ ಪಾತ್ರಗಳನ್ನು ಮಾಡುವ ಅವಕಾಶಗಳನ್ನು ಸ್ವಾಗತಿಸುತ್ತೇನೆ‌ ಎಂದು ಹೇಳಿದ ಅವರು ಪರಿಪೂರ್ಣ ಕಲಾವಿದನಾಗುವ ಆಸೆಯನ್ನು ವ್ಯಕ್ತಪಡಿಸಿದರು. ವಿಶೇಷವಾಗಿ 'ಮುಗಿಲ್​ಪೇಟೆ'ಯ ಚಿತ್ರದ ಟ್ರೇಲರ್ ಈಗಾಗಲೇ ಸಿನಿಮಂದಿಯಲ್ಲಿ ನಿರೀಕ್ಷೆ ಮೂಡಿಸಿದ್ದು, ಚಿತ್ರ ಗೆಲ್ಲುವ ಭರವಸೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?