ಈ ದಿನಕ್ಕಾಗಿ ಮೂರು ವರ್ಷದಿಂದ ಕಾಯುತ್ತಿದ್ದೆ: ಮನುರಂಜನ್ ರವಿಚಂದ್ರನ್

By Suvarna NewsFirst Published Nov 19, 2021, 7:50 PM IST
Highlights

ಮೂರು ವರ್ಷದಿಂದ ಈ ದಿನಕ್ಕೆ ಕಾಯುತ್ತಿದೆ. ಚಿತ್ರಮಂದಿರ ಆಚೆ ಒಂದು ಕಟೌಟ್, ಥಿಯೇಟರ್ ಒಳಗಡೆ  ಜನರ ಶಿಲ್ಲೆ, ಚಪ್ಪಾಳೆ, ಚೀರಾಟ. ಹೊರಗೆ ಬರುವ ಜನರ ಬಾಯಲ್ಲಿ ಚೆನ್ನಾಗಿ ಆಕ್ಟ್ ಮಾಡಿದ್ದೀರ, ಸೂಪರ್. ಖುಷಿ ಆಯ್ತು ಸಿನಿಮಾ ನೋಡಿ ಎಂದು ಮನುರಂಜನ್ ಪೋಸ್ಟ್ ಮಾಡಿದ್ದಾರೆ.

ಮನುರಂಜನ್ ರವಿಚಂದ್ರನ್ (Manuranjan Ravichandran) ಅಭಿನಯದ 'ಮುಗಿಲ್​ಪೇಟೆ' (Mugilpete) ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಭರತ್​ ನಾವುಂದ (Bharath S Navunda) ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಮನುರಂಜನ್​ ಅವರಿಗೆ ಜೋಡಿಯಾಗಿ ಖಯಾದು ಲೋಹರ್ (Kayadu Lohar)​ ಅಭಿನಯಿಸಿದ್ದಾರೆ. ಚಿತ್ರ ನೋಡಿ ಬಂದ ಪ್ರೇಕ್ಷಕರು ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಚಿತ್ರದ ನಾಯಕ ಸ್ಪೆಷಲ್ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮನುರಂಜನ್ ತಮ್ಮ ಫೇಸ್‌ಬುಕ್ (Facebook) ಖಾತೆಯಲ್ಲಿ 'ಮೂರು ವರ್ಷದಿಂದ ಈ ದಿನಕ್ಕೆ ಕಾಯುತ್ತಿದೆ. ಚಿತ್ರಮಂದಿರ ಆಚೆ ಒಂದು ಕಟೌಟ್, ಥಿಯೇಟರ್ ಒಳಗಡೆ  ಜನರ ಶಿಲ್ಲೆ, ಚಪ್ಪಾಳೆ, ಚೀರಾಟ. ಹೊರಗೆ ಬರುವ ಜನರ ಬಾಯಲ್ಲಿ ಚೆನ್ನಾಗಿ ಆಕ್ಟ್ ಮಾಡಿದ್ದೀರ, ಸೂಪರ್.  'ಖುಷಿ ಆಯ್ತು ಸಿನಿಮಾ ನೋಡಿ' ಈ ರೀತಿ ನಿಮ್ಮ ಪ್ರೀತಿ ತೋರಿಸ್ತೀರಾ ಅನ್ನೋ ನಂಬಿಕೆ. ಆ ದಿನ ಇವತ್ತು ಬಂದಿದೆ, ನಿಮ್ಮ ಮುಗಿಲ್‍ಪೇಟೆ ನಿಮ್ಮ ಮಡಿಲಿಗೆ. ಮನೆಯವರೆಲ್ಲಾ ಬನ್ನಿ ನೋಡಿ, ನಾನು ಕಾಯುತ್ತಾ ಇರ್ತೀನಿ'! ಎಂದು ಕಟೌಟ್ ಪೋಸ್ಟರ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

MugilPete:ನನ್ನ ಮಕ್ಕಳು ಒಳ್ಳೆಯ ಚಿತ್ರ ಮಾಡಿದ್ದಾರೆಂಬ ನಂಬಿಕೆ ಇದೆ: ರವಿಚಂದ್ರನ್‌

ಈ ಪೋಸ್ಟ್‌ಗೆ ನೆಟ್ಟಿಗರು ಕೂಡಾ ಮೆಚ್ಚುಗೆ ಸೂಚಿಸಿ, 'ಮುಗಿಲ್‌ಪೇಟೆ ಕೀರ್ತಿ ಮುಗಿಲೆತ್ತರಕ್ಕೆ ಹಾರಲಿ'. 'ಕುಟುಂಬ ಸಮೇತ ನೋಡೋ ಚಿತ್ರ ಇದು ನಮ್ಮ ಬಾಸ್ ಹೆಸರು ಉಳಿಸಿದಕ್ಕೆ ತುಂಬಾ ಥ್ಯಾಂಕ್ಸ್ ಜ್ಯೂನಿಯರ್ ಕ್ರೇಜಿಸ್ಟಾರ್'. 'ಸೂಪರ್ ಲೂಕಿಂಗ್, ಸೂಪರ್ ರೊಮ್ಯಾನ್ಸ್,, ಸೂಪರ್, ಸೂಪರ್ ಸೂಪರ್ ಆಗಿದೆ'. 'ಶುಭವಾಗಲಿ ನಿಮ್ಮ ಮುಗಿಲ್‌ಪೇಟೆ ಸಿನಿಮಾ ನೂರು ದಿನ ಓಡಲಿ'. ಹಾಗೂ 'ಬರಿ ಕಂಗ್ರಾಟ್ಸ್ ಹೇಳಿದರೆ ಆಗಲ್ಲ ಫ್ರೆಂಡ್ಸ್, ಎಲ್ರೂ ಹೋಗಿ ಮೂವಿ ನೋಡಿ ಫುಲ್ ಫಿದಾ ಆಗ್ತೀರಾ, ಸಕತ್ ಆಗಿದೆ ಮೂವಿ, ಮಿಸ್ ಮಾಡದೇ ನೋಡಿ ಎಲ್ಲರೂ' ಎಂದು ತರೇಹವಾರಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ಸಂಬಂಧಗಳಿಗೆ ಬೆಲೆ ಕೊಡುವ ಒಂದು ಕುಟುಂಬ. ಸಂಬಂಧಗಳನ್ನು ಕಡೆಗಾಣಿಸುವ ಮತ್ತೊಂದು ಕುಟುಂಬ. ಈ ಎರಡು ಕುಟುಂಬದ ಎರಡು ಜೀವಗಳ ಮಧ್ಯೆ ಪ್ರೀತಿ ಹುಟ್ಟಿದಾಗ ಏನಾಗುತ್ತದೆ ಎಂಬುದೆ 'ಮುಗಿಲ್​ಪೇಟೆ' ಕಥಾವಸ್ತು. ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಉತ್ತಮ ಹಾಸ್ಯ ಎಲ್ಲವೂ ಚಿತ್ರದಲ್ಲಿದೆ ಎಂದು ನಿರ್ದೇಶಕ ಭರತ್ ಎಸ್. ನಾವುಂದ ಈ ಹಿಂದೆ ತಿಳಿಸಿದ್ದಾರೆ. ಈ ಚಿತ್ರದಲ್ಲಿ ನನಗೆ ಬಬ್ಲಿ ಪಾತ್ರ ಸಿಕ್ಕಿದೆ. ತುಂಬಾ ಸ್ವತಂತ್ರವಾಗಿ ಓಡಾಡಿಕೊಂಡಿರುವ ಹುಡುಗಿಯಾಗಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಸದಾ ನಾಯಕನ ಜೊತೆ ಜಗಳವಾಡುವಂತಹ ಪಾತ್ರ ನನ್ನದು. ಒಂದು ರೀತಿ ಚಾಲೆಂಜಿಂಗ್‌ ಪಾತ್ರ ನನ್ನ ಪಾಲಿಗೆ ದಕ್ಕಿದೆ. ಎಂದು ಚಿತ್ರದ ನಾಯಕಿ ಕಯಾದು ಲೋಹರ್ ಹೇಳಿದ್ದಾರೆ.

Mugilpete ಚಿತ್ರದ ಬಗ್ಗೆ ಮನುರಂಜನ್-ಕಯಾದು ಲೋಹರ್ ಎಕ್ಸ್‌ಕ್ಲೂಸಿವ್ ಮಾತುಗಳು!

ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು, ರಿಷಿ ಹೀಗೆ ಹೆಸರಾಂತ ಕಲಾವಿದರು ನಟಿಸಿದ್ದಾರೆ. ರವಿವರ್ಮ (ಗಂಗು) ಛಾಯಾಗ್ರಹಣ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸತೀಶ್ ಅವರ ಕಲಾ ನಿರ್ದೇಶನವಿದೆ. 
 

click me!