ಮನು ರವಿಚಂದ್ರನ್ ಹಾಗೂ ಕಯಾದು ಲೋಹರ್ ಅಭಿನಯದ ‘ಮುಗಿಲ್‌ಪೇಟೆ’ ಚಿತ್ರ ಇಂದು (ನ.19) ತೆರೆ ಮೇಲೆ ಮೂಡುತ್ತಿದೆ. ಈ ಕುರಿತ ಸುದ್ದಿಗೋಷ್ಠಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಬಂದಿದ್ದರು. ಭರತ್ ನಾವುಂದ ನಿರ್ದೇಶಿಸಿ, ರಕ್ಷಾ ವಿಜಯ್‌ಕುಮಾರ್ ನಿರ್ಮಿಸಿರುವ ಚಿತ್ರವಿದು.
ರವಿಚಂದ್ರನ್ ಹೇಳಿದ್ದೇನು?
- ನನ್ನ ಮಗ ಈಗಾಗಲೇ ಎರಡು ಸಿನಿಮಾ ಮಾಡಿದ್ದಾನೆ. ಇದು ಅವನ ಮೂರನೇ ಚಿತ್ರ. ಅನುಭವ ಗಳಿಸಿಕೊಂಡು ಮಾಡಿರುವ ಚಿತ್ರ. ಅವನ ಈ ಮೂರನೇ ಪ್ರಯತ್ನದ ಮೇಲೆ ನನಗೆ ನಂಬಿಕೆ ಇದೆ. ಯಾಕೆಂದರೆ ಅವನ ಸ್ನೇಹಿತರು, ಅವನ ತಮ್ಮ, ಸಹೋದರಿ ಜತೆಯಾಗಿ ಸೇರಿ ಮಾಡಿರುವ ಚಿತ್ರ. ಈ ಚಿತ್ರದ ಕತೆ ಏನು, ಸಿನಿಮಾ ಹೇಗೆ ಮಾಡುತ್ತಿದ್ದರು ಎಂಬುದನ್ನು ಯಾವತ್ತೂ ನನ್ನ ಬಳಿ ಬಂದು ಹೇಳಿಕೊಳ್ಳಲಿಲ್ಲ. ಆದರೂ ಒಂದು ಒಳ್ಳೆಯ ಚಿತ್ರ ಮಾಡಿದ್ದಾರೆ ಎಂದು ಹೇಳಬಲ್ಲೆ.
Mugilpete ಚಿತ್ರದ ಬಗ್ಗೆ ಮನುರಂಜನ್-ಕಯಾದು ಲೋಹರ್ ಎಕ್ಸ್‌ಕ್ಲೂಸಿವ್ ಮಾತುಗಳು!- ವಿಕ್ಕಿ, ಮನು, ಗೀತಾಂಜಲಿ ಈ ಚಿತ್ರಕ್ಕೆ ಕೆಲಸ ಮಾಡಿದ್ದನ್ನು ನೋಡಿದಾಗ ನನ್ನ ಮಕ್ಕಳಿಗೂ ಜವಾಬ್ದಾರಿ ಬಂದಿದೆ ಅನಿಸಿತು. ನನ್ನ ತಂದೆ ಕಟ್ಟಿದ ಈಶ್ವರಿ ಸಂಸ್ಥೆಯನ್ನು ನನ್ನ ಮಕ್ಕಳು ನಡೆಸಿಕೊಂಡು ಹೋಗುತ್ತಾರೆಂಬ ನಂಬಿಕೆ ಮೂಡಿದೆ.
- ನನ್ನ ಮಕ್ಕಳ ವಿಚಾರದಲ್ಲಿ ನಾನು ಮಾಡಿದ ತಪ್ಪು ಅವರಿಗೆ ನಾನೇ ಸಿನಿಮಾ ಮಾಡಬೇಕು ಎಂದು ಹೊರಗೆ ಬಿಡದೆ ತಡೆದಿದ್ದು. ಮಕ್ಕಳನ್ನು ಹೊರಗೆ ಬಿಟ್ಟರೆ ಎಷ್ಟುಜವಾಬ್ದಾರಿ ಬರುತ್ತದೆ ಎಂಬುದು ಈಗ ಗೊತ್ತಾಯಿತು. ಅಪ್ಪನೇ ಯಾಕೆ ಕಷ್ಟಪಡಬೇಕು ನಾವು ದುಡಿಯುತ್ತೇವೆ ಎಂದು ಹೊರಗೆ ಬಂದು ಸ್ವಂತ ಯೋಚನೆ, ಶ್ರಮದಿಂದ ಈ ಸಿನಿಮಾ ಮಾಡಿದ್ದಾರೆ. ಅಪ್ಪನಾಗಿ ನನಗೆ ಹೆಮ್ಮೆ ಮೂಡಿಸುತ್ತದೆ.
- ನನ್ನ ಇಲ್ಲಿವರೆಗೂ ಬೆಳೆಸಿಕೊಂಡು ಬಂದಿದ್ದೀರಿ. ನನಗೆ ನೀವು ತೋರಿದ ಪ್ರೀತಿಯನ್ನು ನನ್ನ ಮಕ್ಕಳಿಗೂ ತೋರಿಸಿ. ಸಿನಿಮಾ ಚೆನ್ನಾಗಿದ್ದರೆ ಮೆಚ್ಚಿಕೊಂಡು ನಾಲ್ಕು ಜನಕ್ಕೆ ಹೇಳಿ.
- ಮುಗಿಲ್‌ಪೇಟೆ ಚಿತ್ರದಲ್ಲಿ ಹಾಡುಗಳು ಚೆನ್ನಾಗಿವೆ. ಹಾಡುಗಳು ಹಿಟ್ ಆದರೆ ಸಿನಿಮಾದಲ್ಲಿ ಕತೆ ಇದೆ ಎಂದರ್ಥ. ಈ ಚಿತ್ರದ ಹಾಡುಗಳು ಕೇಳಿಸುತ್ತವೆ. ಚಿತ್ರದಲ್ಲಿ ಕತೆ ಇದೆ ಎಂದಾಯಿತು.
ಪೊಲೀಸರ ಕೈಯಲ್ಲಿ ಸಿಕ್ಕಾಗ ಅಪ್ಪನ ಹೆಸರು ಬಳಸಿದ್ದೆ: ಮನುರಂಜನ್ ರವಿಚಂದ್ರನ್- ನಿರ್ದೇಶಕ ಭರತ್ ನಾವುಂದ ಅವರ ಭಾಷೆ ಮತ್ತು ಕತೆ ಹೇಳುವ ಶೈಲಿ ಚೆನ್ನಾಗಿದೆ. ಅವರನ್ನು ನಾನು ಎರಡ್ಮೂರು ಸಲ ಭೇಟಿ ಆಗಿದ್ದೇನೆ ಅಷ್ಟೆ. ಒಳ್ಳೆಯ ಕತೆ ಹೇಳಿದ್ದಾರೆಂಬ ನಂಬಿಕೆ ಇದೆ. ತಾರಾ, ಸಾಧು ಕೋಕಿಲ, ರಿಷಿ, ರಂಗಾಯಣ ರಘು ಇವರೆಲ್ಲ ಸೇರಿಯೇ ಮುಗಿಲ್‌ಪೇಟೆಯನ್ನು ರೂಪಿಸಿದ್ದಾರೆ.
‘ನಮ್ಮ ಸಿನಿಮಾ ಬಿಡುಗಡೆಯ ಸಮಯ. ಈಗ ಹೆಚ್ಚು ಮಾತನಾಡುವುದಕ್ಕಿಂತ ನೀವು ಸಿನಿಮಾ ನೋಡಿ ಹೇಳಬೇಕು. ಒಂದು ಒಳ್ಳೆಯ ಪ್ರಯತ್ನ ಮಾಡಿದ್ದೇವೆ. ತುಂಬಾ ಪ್ರೀತಿಸಿ ರೂಪಿಸಿರುವ ಚಿತ್ರ. ಕ್ರೇಜಿಸ್ಟಾರ್ ಮಗನ ಚಿತ್ರ ಅಂತ ನೋಡಬೇಡಿ. ಒಳ್ಳೆಯ ಸಿನಿಮಾ ಅಂತ ನೋಡಿ, ಪ್ರೋತ್ಸಾಹಿಸಿ’ ಎಂದರು ಮನು ರವಿಚಂದ್ರನ್.
Mugilpete: ರವಿಚಂದ್ರನ್ ಪುತ್ರನ ರೊಮ್ಯಾಂಟಿಕ್ ಸಾಂಗ್ ರಿಲೀಸ್‘ಈ ಕತೆ ನಿನ್ನ ಮಗು. ನಿನಗೆ ಹೇಗೆ ಬೇಕೋ ಹಾಗೆ ಬೆಳೆಸು, ರೂಪಿಸು ಎಂದು ಮನು ರವಿಚಂದ್ರನ್ ಹೇಳಿದ ಮಾತು ನನಗೆ ಮತ್ತಷ್ಟುಧೈರ್ಯ ಕೊಟ್ಟಿತು. ಈ ಮಾತುಗಳಿಂದ ಈ ಚಿತ್ರವನ್ನು ಕಷ್ಟವಾದರೂ ಪ್ರೀತಿಯಿಂದ ಮಾಡಲು ಸಾಧ್ಯವಾಯಿತು’ ಎಂದು ನಿರ್ದೇಶಕ ಭರವತ್ ನಾವುಂದ ಹೇಳಿದರು.
ಚಿತ್ರದಲ್ಲಿ ತಾರಾ ಅವರು ತಾಯಿ ಪಾತ್ರ ಮಾಡಿದ್ದಾರೆ. ರಂಗಾಯಣ ರಘು, ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ರಿಷಿ, ರಕ್ಷ ವಿಜಯ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು. ಕೆಆರ್‌ಜಿ ಸ್ಟುಡಿಯೋ ಮೂಲಕ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಮುಗಿಲ್ ಪೇಟೆ’ ತೆರೆ ಕಾಣುತ್ತಿದೆ.