
ಚಿತ್ರಕ್ಕೆ ಈಗಷ್ಟೇ ಮುಹೂರ್ತ ಆಗಿದೆ.ದಕ್ಷಿಣದಹೆಬ್ಬಾಗಿಲು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ಈ ಉತ್ತರದ ಬೆಡಗಿಯ ಪೂರ್ವಾಪರಗಳೇನು?
ಅಸ್ಸಾಂ ಟು ಬಾಂಬೆ: ಅಸ್ಸಾಂ ಮೂಲದ ಈಕೆ ಸದ್ಯ ನೆಲೆಸಿರುವುದು ಬಾಂಬೆನಲ್ಲಿ. ಪುಣೆನಲ್ಲಿ ಓದಿದ್ದು. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಲೇ ಹಲವು ಉತ್ಪನ್ನಗಳಿಗೆ ರಾಯಭಾರಿಯಾಗಿಯೂ ಕ್ಯಾಟ್‌ವಾಕ್ ಮಾಡಿದ ಬೆಡಗಿ ಈಕೆ. ರ‌್ಯಾಂಪ್ ಶೋಗಳಲ್ಲಿ ಮೈ ಬಳುಕಿಸುತ್ತ, ಜಾಹೀರಾತು ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಖಯಾದು ಲೋಹರ್‌ಗೆ ಬೆಳ್ಳಿತೆರೆ ತೀರಾ ಹೊಸದು.
ಮರಾಠಿಯಿಂದ ಕನ್ನಡಕ್ಕೆ: ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಖಯಾದು ಲೋಹರ್‌ಗೆ ಮೊದಲು ಕ್ಯಾಮೆರಾ ಎದುರಿಸುವ ಅವಕಾಶ ಸಿಕ್ಕಿದ್ದು ಮರಾಠಿ ಚಿತ್ರದಲ್ಲಿ ಈ ಚಿತ್ರಕ್ಕೆ ಈಗಷ್ಟೆ ಚಿತ್ರೀಕರಣ ಮುಗಿದ್ದು, ಅದು ಇನ್ನೂ ಬಿಡುಗಡೆಯಾಗಿಲ್ಲ. ತಮ್ಮ ಮೊದಲ ಸಿನಿಮಾ ತೆರೆಗೆ ಬರುವ ಮೊದಲೇ ದಕ್ಷಿಣಕ್ಕೆ ಬಂದಿದ್ದಾರೆ. ಸಿನಿಮಾ ನೋಡಿ ಕನ್ನಡ ಕಲಿಯುವೆ: ಸ್ಯಾಂಡಲ್‌ವುಡ್‌ಗೆ ಬಂದ ಮೇಲೆ ಕನ್ನಡ ಕಲಿಯುವುದಕ್ಕಾಗಿಯೇ ಕನ್ನಡ ಸಿನಿಮಾಳನ್ನು ನೋಡುತ್ತಿದ್ದಾರೆ. ‘ಮುಗಿಲ್ ಪೇಟೆ’ ಸಿನಿಮಾ ಶೂಟಿಂಗ್ ಮುಗಿಯುವಷ್ಟರಲ್ಲಿ ಕನ್ನಡ ಭಾಷೆ ಕಲಿಯಬೇಕು ಎಂಬುದು ಈಕೆಯ ಪ್ಲಾನ್.
ಕ್ರೇಜಿಸ್ಟಾರ್ ಪತ್ನಿಗೆ ಹುಟ್ಟುಹಬ್ಬದ ಸಂಭ್ರಮ; ಮಗನಿಂದ ಸ್ಪೆಶಲ್ ವಿಶ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.