#poetryreadingchallenge: ಜಂಬೋ ಸವಾಲು ಸ್ವೀಕರಿಸಿದ ವಿಜಯ್, ಸುದೀಪ್, ಪುನೀತ್!

Published : Nov 18, 2019, 12:01 PM IST
#poetryreadingchallenge: ಜಂಬೋ ಸವಾಲು ಸ್ವೀಕರಿಸಿದ ವಿಜಯ್, ಸುದೀಪ್, ಪುನೀತ್!

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ  #poetryreadingchallenge ಟ್ರೆಂಡ್ ಆಗ್ತಾ ಇದೆ. ಕ್ರಿಕೆಟಿಗ ಅನಿಲ್ ಕುಂಬ್ಳೆ ಈ ಚಾಲೆಂಜನ್ನು ಸ್ನೇಹಿತರಾದ ಅನಿಲ್ ಕುಂಬ್ಳೆ, ಪುನೀತ್‌ ರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್‌ಗೆ ನೀಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಒಂದೊಂದು ಅಭಿಯಾನ ಟ್ರೆಂಡ್ ಆಗ್ತಾ ಇರುತ್ತದೆ. ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಈಗ #poetryreadingchallenge ಎಲ್ಲಾ ಕಡೆ ಟ್ರೆಂಡ್ ಆಗ್ತಾಯಿದೆ. ಒಬ್ಬರು ಅವರಿಷ್ಟದ ಕವಿಯ ಕವನಗಳನ್ನು ವಾಚಿಸಿ ಅದನ್ನು ಇನ್ನೊಬ್ಬರಿಗೆ ಕೋ ಕೊಡ್ತಾ ಹೋಗುವುದೇ ಇದರ ವಿಶೇಷ.  

ಕೋ ಕೊಟ್ಟವರು ಯಾವುದಾದರೊಂದು ಕನ್ನಡ ಪದ್ಯವನ್ನು ಹೇಳಬೇಕು.  ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ಈ ಚಾಲೆಂಜನ್ನು ಕೊಟ್ಟಿದ್ದಾರೆ. ಚಾಲೆಂಜ್ ಸ್ವೀಕರಿಸಿದ ಕುಂಬ್ಳೆ ರಾಷ್ಟ್ರಕವಿ  ಕುವೆಂಪು ಅವರ 'ಎಲ್ಲಾದರೂ ಇರು. ಎಂತಾದರೂ ಇರು' ಕವನವನ್ನು ವಾಚಿಸಿದ್ದಾರೆ.  

 

ಇದನ್ನು ಮುಂದುವರೆಸಲು ಕಿಚ್ಚ ಸುದೀಪ್, ಪುನೀತ್ ರಾಜ್‌ಕುಮಾರ್ ಹಾಗೂ ವಿಜಯ್ ಪ್ರಕಾಶ್‌ಗೆ ಕೋ ಕೊಟ್ಟಿದ್ದಾರೆ.  ವಿಜಯ್ ಪ್ರಕಾಶ್ ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಹಾಡಿನ ಮೂಲಕ ಹೇಳಿದ್ದಾರೆ. 

ಗೋಲ್ಡರ್ ಸ್ಟಾರ್ ಗಣೇಶ್ ಬೇಂದ್ರೆಯವರ 'ನೀ ಹಿಂಗ ನೋಡಬ್ಯಾಡ ನಿನ್ನ' ಕವನವನ್ನು ವಾಚಿಸಿದ್ದಾರೆ.  


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!